ದೇಶದ ಸೌರ್ಹಾದತೆ ಉಳಿವಿಗಾಗಿ ಮೈತ್ರಿ ಕೈ ಹಿಡಿಯಿರಿ

ದಾವಣಗೆರೆ:

       ದೇಶದ ಭದ್ರತೆ ಹಾಗೂ ಸೌಹಾರ್ದತೆ ಉಳಿವಿಗಾಗಿ ಅಲ್ಪಸಂಖ್ಯಾತರು ತಪ್ಪದೇ ಕಾಂಗ್ರೆಸ್-ಜೆಡಿಎಸ್ ಮೃತ್ರಿ ಅಭ್ಯರ್ಥಿ ಹೆಚ್.ಬಿ.ಮಂಜಪ್ಪನವರನ್ನು ಬೆಂಬಲಿಸಬೇಕೆಂದು ಸಚಿವ ಜಮೀರ್ ಅಹ್ಮದ್ ಕರೆ ನೀಡಿದರು.ನಗರದ ಮಿಲ್ಲತ್ ಕಾಲೇಜಿನ ಆವರಣದಲ್ಲಿ ಶನಿವಾರ ಮೈತ್ರಿ ಅಭ್ಯರ್ಥಿ ಹೆಚ್.ಬಿ.ಮಂಜಪ್ಪ ಪರ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಶೇ.100 ಅಲ್ಪಸಂಖ್ಯಾತರು ಮತ ಚಲಾಯಿಸಬೇಕು. ಯಾವುದೇ ಕಾರಣದಿಂದ ಮತದಾನದಿಂದ ದೂರ ಉಳಿಯಬಾರದು ಎಂದು ಸಲಹೆ ನೀಡಿದರು.

        ಬಿಜೆಪಿಯವರು ಮೇಕ್ ಇನ್ ಇಂಡಿಯಾ ಎಂಬುದಾಗಿ ಹೇಳುತ್ತಿದ್ದಾರೆ. ಆದರೆ, ಇವರು ಅಧಿಕಾರಕ್ಕೆ ಬಂದ ಮೇಲೆ ಭಾರತ ನಿರ್ಮಾಣವಾಗುತ್ತಿಲ್ಲ. ಸ್ವಾತಂತ್ರ್ಯಕೊಸ್ಕರ ಹೋರಾಡಿದ ಸೇನಾನಿಗಳು, ತದನಂತರ ಆಡಳಿತ ನಡೆಸಿದವರು ದೇಶವನ್ನು ಕಟ್ಟಿದ್ದು, ಈ ದೇಶದಲ್ಲಿ ಭ್ರಾತೃತ್ವ-ಸೌರ್ಹಾದತೆ ಉಳಿಯಬೇಕಾದರೆ, ಪಕ್ಷೇತರ ಅಭ್ಯರ್ಥಿಯನ್ನು ಬೆಂಬಲಿಸಬೇಕೆಂದು ಮನವಿ ಮಾಡಿದರು.

        ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬರುವ ಮುನ್ನ ಎರಡು ಕೋಟಿ ಉದ್ಯೋಗ ಸೃಷ್ಠಿಸುವುದಾಗಿ, ವಿದೇಶದಿಂದ ಕಪ್ಪು ಹಣ ತರುವುದಾಗಿ, ಎಲ್ಲರ ಖಾತೆಗೆ 15 ಲಕ್ಷ ರೂ. ಜಮಮಾಡುವುದಾಗಿ, ಒಳ್ಳೆಯ ದಿನಗಳನ್ನು ತರುವುದಾಗಿ ಹೇಳಿದ್ದರು. ಅವರು ಹೇಳಿದ್ದು ಎಲ್ಲಾ ಸುಳ್ಳಾಗಿದೆ. ಅಚ್ಚೆದಿನ್ ಬಂದಿರುವುದು ಚಹಾ ಮಾರುತ್ತಿದ್ದಂತಹ ವ್ಯಕ್ತಿ ಪ್ರಧಾನಿಯಾಗಿ, 15 ಲಕ್ಷ ರೂ.ಗಳ ಸೂಟು ಬೂಟು ಹಾಕಿಕೊಂಡು ಒಡಾಡುವ ವ್ಯಕ್ತಿಗೆ ಹಾಗೂ ಅಂಬಾನಿ, ವಿಜಯ್‍ಮಲ್ಯ ನಂತವರಿಗೆ ಅಚ್ಚೇದಿನ್ ಬಂದಿದೆ, ಹೊರತು ಸಾಮಾನ್ಯ ಜನರಿಗೆ ಬಂದಿಲ್ಲ ಎಂದರು.

       ದೇಶದಲ್ಲಿ ಪ್ರತಿಯೊಬ್ಬ ಪ್ರಜೆಯೂ ಸಹ ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ಅವರಿಗೆ ಗೌರವಿಸುತ್ತಿದ್ದಾರೆ. ಸರ್ವರಿಗೂ ಸಮಪಾಲು ಮತ್ತು ಸಮಬಾಳನ್ನು ಸಂವಿಧಾನದ ಮೂಲಕ ಅಂಬೇಡ್ಕರ್ ಕೊಟ್ಟಿದ್ದಾರೆ. ಆದರೆ ಇಂತಹ ಸಂವಿಧಾನವನ್ನು ಬದಲಿಸುವಂತಹ ಹೇಳಿಕೆ ನೀಡುವವರಿಗೆ, ಸುಳ್ಳು ಭರವಸೆ ನೀಡುವವರಿಗೆ ಅಲ್ಪಸಂಖ್ಯಾತರು ಬಲಿಯಾಗಬಾರದು ಎಂದರು.

       ಸಂವಿಧಾನ ಕುರಿತು ತೇಜಸ್ವಿ ಸೂರ್ಯ, ಅನಂತಕುಮಾರ್ ಹೆಗಡೆ ಅವರ ಹೇಳಿಕೆಯನ್ನು ಖಂಡಿಸಿ, ತೇಜಸ್ವಿ ಸೂರ್ಯ ಇನ್ನೂ ಹಾಲುಗಲ್ಲದ ಹುಡುಗ. ಸಂವಿಧಾನ ಮತ್ತು ಅಂಬೇಡ್ಕರ್ ಬಗ್ಗೆ ಹೇಳಿಕೆ ನೀಡುತ್ತಿರುವುದು ದೇಶದ ಅಭದ್ರತೆಗೆ ಕಾರಣವಾಗಿದೆ ಎಂದ ಅವರು, ಅಲ್ಪಸಂಖ್ಯಾತರು ನಮ್ಮ ಮನೆಯಲ್ಲಿ ಬಂದು ಹತ್ತು ವರ್ಷ ಕಸಗೂಡಿಸಲಿ, ನಂತರ ಅವರಿಗೆ ಟೀಕೆಟ್ ನೀಡುವ ಕುರಿತು ಯೋಚಿಸಲಾಗುತ್ತದೆ ಎಂದು ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ಹೇಳಿಕೆಯನ್ನೂ ವಿರೋಧಿಸಿ, ಆಟೋ ನಡೆಸುವ ಅಲ್ಪಸಂಖ್ಯಾತರು ಈಶ್ವರಪ್ಪ ಅಂತವರಿಗೆ ಸಾಕುವ ಶಕ್ತಿ ಹೊಂದಿದ್ದಾರೆ ಎಂದರು.

        ಈ ಸಂದರ್ಭದಲ್ಲಿ ಮಾಜಿ ಶಾಸಕ ಹೆಚ್.ಎಸ್.ಶಿವಶಂಕರ್, ಜೆಡಿಎಸ್ ಜಿಲ್ಲಾ ಅಧ್ಯಕ್ಷ ಬಿ.ಚಿದಾನಂದಪ್ಪ, ಸೈಯದ್ ಸೈಫುಲ್ಲಾ, ಜೆ.ಅಮಾನುಲ್ಲಾಖಾನ್, ನಸೀರ್ ಅಹ್ಮದ್, ಚಮನ್ ಸಾಬ್, ಬಿ.ಹೆಚ್.ವೀರಭದ್ರಪ್ಪ, ಮನ್ಸೂರ್ ಅಲಿ, ಗಣೇಶ್ ದಾಸ್‍ಕರಿಯಪ್ಪ, ಮುಜಾಹಿದ್ ಪಾಷಾ, ಟಿ.ಅಸ್ಗರ್, ಸೈಯದ್ ಖಾಲಿದ್ ಅಹ್ಮದ್ ಸೇರಿದಂತೆ ಮತ್ತಿತರರು ಇದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link