ಹಗರಿಬೊಮ್ಮನಹಳ್ಳಿ
ಸಂತ ದೇವರ ದಾಸಿಮಯ್ಯರವರ ತತ್ವಾದರ್ಶಗಳು ಸಮಾಜಕ್ಕೆ ಮಾದಲಿಯಾಗಲಿ ಎಂದು ನೇಕಾರ ಸಂಘಗಳ ಒಕ್ಕೂಟದ ತಾಲೂಕು ಅಧ್ಯಕ್ಷ ವಕೀಲ ಜಾಣಾ ಶಿವಾನಂದ ಹೇಳಿದರು.
ಪಟ್ಟಣದ ತಹಶೀಲ್ದಾರ ಕಚೇರಿಯಲ್ಲಿ ದೇವರದಾಸಿಮಯ್ಯನವರ 1040 ನೇ ಜಯಂತಿ ಆಚರಣೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು, ಬಸವಣ್ಣನವರ ಕಾಲಮಾನಕ್ಕಿಂತಲೂ ಮೊದಲೇ ದೇವರ ದಾಸಿಮಯ್ಯನವರು ವಚನಕಾರರಾಗಿದ್ದರು. ಅವರ ಕಾಲದಲ್ಲಿಯೂ ಮೌಢ್ಯತೆ ಹಾಗೂ ಮೇಲು ಕೀಳೆಂಬ ಸಾಮಾಜಿಕ ಪಿಡುಗಳ ವಿರುದ್ದ ಅವರ ವಚನಗಳು ಒಂದು ರೀತಿಯ ಕ್ರಾಂತಿಗೀತೆಗಳಾಗಿದ್ದವು, ಇವರನ್ನು ನೇಕಾರರ ಪಾಲಿನ ಸಂತ ಎನ್ನಬಹುದು. ಅವರು ಹಾಕಿಕೊಟ್ಟ ತತ್ವಾದರ್ಶಗಳ ಮಾರ್ಗದರ್ಶನದಲ್ಲಿ ನಮ್ಮ ಸಮುದಾಯ ಸಾಗಬೇಕಿದೆ ಎಂದರು.
ತಹಶೀಲ್ದಾರ ಸಂತೋಷ ಕುಮಾರ ಮಾತನಾಡಿ, ತಮ್ಮ ವಚನಗಳ ಮೂಲಕ ಜನರನ್ನು ಜಾಗೃತಿಗೊಳಿಸಿದ ಶರಣರು, ಎಲ್ಲಾ ಜಾತಿ ಧರ್ಮಗಳನ್ನು ಮೀರಿದವರು. ಇಂದಿಗೂ ಅವರ ವಚನಗಳು ಸಮಾಜದಲ್ಲಿ ಪ್ರಸ್ತುತವಾಗಿವೆ.
ನೀತಿ ಸಂಹಿತೆ ಪಾಲನ ತಂಡದ ಮುಖ್ಯಸ್ಥ ತಾ.ಪಂ. ಇಒ ಬಿ.ಮಲ್ಲಾನಾಯ್ಕ ಮಾತನಾಡಿ, ಚುನಾವಣೆ ನಿಮಿತ್ತ ಜಯಂತಿ ಆಚರಣೆ ಸರಳವಾಗಿದೆ ಎಂದ ಅವರು, ದೇವರ ದಾಸಿಮಯ್ಯನವರು ವಚನಕಾರರಲ್ಲಿ ಅಗ್ರಗಣ್ಯರಾಗಿದ್ದರು ಎಂದರು. ಈ ಸಂಧರ್ಭದಲ್ಲಿ ಮಾಚಾಲಿ ನಾರಾಯಣ, ಕಿನ್ನಾಳ ನಾಗರಾಜ, ಮಾಲವಿ ಮಲ್ಲಿಕಾರ್ಜುನ, ಹಿರಾಳು ಶರಣಪ್ಪ, ಮಂಜುನಾಥ, ಪತ್ರಕರ್ತ ಜೆ.ನಾಗರಾಜ, ವಿಶೇಷ ನೋಡೆಲ್ ಅಧಿಕಾರಿ ಎನ್.ರಾಜಪ್ಪ, ಶಿರೇಸ್ತದಾರ ಶ್ವೇತಾ, ಸಿಬ್ಬಂದಿಗಳಾದ ಮಂಜುನಾಥ ಇತರರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
