ಬಿಜೆಪಿ ಅಭ್ಯರ್ಥಿ ವೈ.ದೇವೇಂದ್ರಪ್ಪ 55707 ಮತಗಳ ಅಂತರದಿಂದ ಗೆಲುವು

ಬಳ್ಳಾರಿ

   ಕಾಂಗ್ರೆಸ್ ತೊರೆದು 2019ರ ಲೋಕಸಭೆ ಚುನಾವಣೆ ವೇಳೆ ಬಿಜೆಪಿಗೆ ಸೇರ್ಪಡೆಯಾಗಿದ್ದ ವೈ.ದೇವೇಂದ್ರಪ್ಪ ಅಚ್ಚರಿ ಎನ್ನುವಂತೆ ಕಾಂಗ್ರೆಸ್ ಅಭ್ಯರ್ಥಿ ವಿಎಸ್ ಉಗ್ರಪ್ಪ ಅವರ ವಿರುದ್ಧ 55707 ಮತಗಳನ್ನು ಪಡೆಯುವ ಮೂಲಕ ಆರಂಭದಲ್ಲೇ ಗೆಲುವಿನ ನಗೆ ಬೀರಿದ್ದಾರೆ.

    ಇಂದು ಬೆಳಿಗ್ಗೆ ಇಲ್ಲಿನ ಕಂಟೋನ್‍ಮೆಂಟ್ ಪ್ರದೇಶದಲ್ಲಿರುವ ರಾವ್ ಬಹಾದ್ದೂರ್ ವೈ.ಮಹಾಬಳೇಶ್ವರಪ್ಪ ಇಂಜನಿಯರಿಂಗ್ ಕಾಲೇಜಿನಲ್ಲಿ 8-00ರಿಂದ ಆರಂಭವಾದ ಮತ ಎಣಿಕೆ, ನಂತರ ನಡೆದ 19 ಸುತ್ತಿನ ಮತ ಎಣಿಕೆಯುದ್ದಕ್ಕೂ ಬಿಜೆಪಿಯ ವೈ.ದೇವೇಂದ್ರಪ್ಪ ಹೆಚ್ಚಿನ ಮತಗಳನ್ನು ಪಡೆಯುವ ಮೂಲಕ ಗೆಲುವು ಸಾಧಿಸಿದರು.

   ವಿಎಸ್ ಉಗ್ರಪ್ಪ 560681 ಮತಗಳನ್ನು ಪಡೆದರೆ, ವೈ.ದೇವೇಂದ್ರಪ್ಪ 616388 ಮತಗಳನ್ನು ಪಡೆದಿದ್ದಾರೆ. ಒಟ್ಟು 11 ಜನ ಈ ಬಾರಿ ಸ್ಪರ್ಧಿಸಿದ್ದು ಉಳಿದವರು ಪಡೆದ ಮತಗಳ ಮಾಹಿತಿ ಇಂತಿದೆ: ಕೆ.ಗೂಳಪ್ಪ-(ಬಹುಜನ ಸಮಾಜಪಾರ್ಟಿ)-9961, ಬಿ.ಈಶ್ವರಪ್ಪ(ಶಿವಸೇನೆ)- 6919, ಎ.ದೇವದಾಸ(ಸೋಷಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ)-3833, ನವೀನ್ ಕುಮಾರ್ ಎಸ್,(ಭಾರತ ಪ್ರಭಾತ ಪಾರ್ಟಿ)- 1402, ನಾಯಕರ ರಾಮಪ್ಪ(ಇಂಡಿಯನ್ ಲೇಬರ್ ಪಾರ್ಟಿ)-1840, ಬಿ.ರಘು(ಪಿರಮಿಡ್ ಪಾರ್ಟಿ ಆಫ್ ಇಂಡಿಯಾ)-2658, ಪಿ.ಡಿ.ರಾಮನಾಯಕ(ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾ)-2722, ಟಿ.ವೀರೇಶ(ಸಮಾಜವಾದಿ ಫಾರ್ವರ್ಡ್ ಬ್ಲಾಕ್)-3397 ಮತಗಳನ್ನು ಪಡೆದಿದ್ದಾರೆ.

    ಒಟ್ಟು 1221985 ಮತಗಳು ಚಲಾವಣೆ ಆಗಿದ್ದು ಈ ಪೈಕಿ 59 ಮತಗಳು ತಿರಸ್ಕøತಗೊಂಡಿದ್ದರೆ, ನೋಟಾಕ್ಕೆ 9014 ಮತಗಳು, 2908 ಅಂಚೆ ಮತಗಳು ಚಲಾವಣೆಗೊಂಡಿವೆ. ಉಳಿದಂತೆ ಒಟ್ಟು 1212902 ಸ್ವೀಕೃತಗೊಂಡ ಮತಗಳಾಗಿವೆ.
ಜಿಲ್ಲಾ ಚುನಾವಣಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ಡಾ.ವಿ.ರಾಮ್ ಪ್ರಸಾತ್ ಮನೋಹರ್ ಅವರ ನೇತೃತ್ವದಲ್ಲಿ ಬಳ್ಳಾರಿ, ಬಳ್ಳಾರಿ ಗ್ರಾಮಾಂತರ, ಕಂಪ್ಲಿ, ವಿಜಯನಗರ, ಸಂಡೂರು, ಕೂಡ್ಲಿಗಿ, ಹೂವಿನಹಡಗಲಿ, ಹಗರಿಬೊಮ್ಮನಹಳ್ಳಿ ಒಟ್ಟು 8 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ನಡೆದ ಮತಗಳ ಎಣಿಕೆ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ವಿಜೇತ ಅಭ್ಯರ್ಥಿ ಬಿಜೆಪಿಯ ವೈ.ದೇವೇಂದ್ರಪ್ಪ ಅವರಿಗೆ ಪ್ರಮಾಣ ಪತ್ರ ವಿತರಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ್ ನಿಂಬರಗಿ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link