ಚಿತ್ರದುರ್ಗ
ವಿದ್ಯಾರ್ಥಿಗಳು ಶ್ರದ್ಧೆ, ಶಿಸ್ತು ಸಮಯಪ್ರಜ್ಞೆ ಸತತ ಪರಿಶ್ರಮ ಹಾಗೂ ಜ್ಞಾನದ ಜೊತೆಗೆ ವೃತ್ತಿ ಕೌಶಲ್ಯ ಬೆಳೆಸಿಕೊಳ್ಳಬೇಕೆಂದು ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ನಾಗರಾಜುರವರು ಸಲಹೆ ನೀಡಿದರು
ನಗರದ ಸರ್ಕಾರಿ ಬಾಲಕಿಯರ ವೃತ್ತಿಪರ ವಿದ್ಯಾರ್ಥಿನಿಯರ ಹಾಸ್ಟಲ್ ಸಭಾಂಗಣದಲ್ಲಿ ಶನಿವಾರ ನಡೆದ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿ ವಿದ್ಯಾರ್ಥಿನಿಯರಿಗೆ ಸಾಕಷ್ಟು ಸೌಲಭ್ಯಗಳಿವೆ ಅವುಗಳನ್ನು ಸಮರ್ಥವಾಗಿ ಉಪಯೋಗಿಸಿಕೊಳ್ಳಬೇಕು ಯಾವುದೇ ಘಟನೆಗಳು ಜರುಗಿದರೂ ಅಂಜದೆ ಧೈರ್ಯವಾಗಿ ಎದುರಿಸಬೇಕು ಆತ್ಮವಿಶ್ವಾಸ ಇಲ್ಲದಿದ್ದರೆ ಜೀವನದಲ್ಲಿ ಯಶಸ್ವಿಯಾಗಲು ಸಾಧ್ಯವಿಲ್ಲ ಗುರು ಹಿರಿಯರ ಮಾರ್ಗದರ್ಶನ ಉತ್ತಮ ಚಿಂತನೆ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಶಿಕ್ಷಣ ಪಡೆದ ವಿದ್ಯಾರ್ಥಿನಿಯರು ಉತ್ತಮ ಭವಿಷ್ಯದೊಂದಿಗೆ ಕುಟುಂಬ ಹಾಗೂ ದೇಶದ ಅಭಿವೃದ್ಧಿ ಸಹಕಾರಿಯಾಗಲಿದೆ ಮುಂದಿನ ದಿನಗಳಲ್ಲಿ ಸರ್ಕಾರಿ ಕೆಲಸಗಳನ್ನು ಅವಲಂಬಿಸದೆ ಸ್ವಯಂ ಉದ್ಯೋಗಕ್ಕೆ ಆದ್ಯತೆ ನೀಡಿ ಸ್ವಾವಲಂಬಿಗಳಾಗಬೇಕೆಂದು ತಿಳಿಸಿದರು
ಮುಖ್ಯ ಅತಿಥಿಗಳಾಗಿ ಆಗಮಿಸಿದ ಸಮಾಜ ಕಲ್ಯಾಣ ಇಲಾಖೆಯ ವ್ಯವಸ್ಥಾಪಕರಾದ ಮಂಜುನಾಥ್ ಹಾಗೂ ಪ್ರಕಾಶ್ ನಾಯ್ಕ್ ಹಾಗೂ ಇಲಾಖೆಯ ಚನ್ನಬಸಪ್ಪ ನಾಗೇಂದ್ರಪ್ಪ ನರಸಿಂಹಮೂರ್ತಿ ನಿಲಯ ಪಾಲಕರಾದ ನಾಗರಾಜ್ ಸನತ್ ಉಮಾದೇವಿ ರೇಣುಕಮ್ಮ ಮಂಜುಳಾ ಮಾತನಾಡಿದರು ಯಶೋದಮ್ಮ ಸ್ವಾಗತಿಸಿದರು ವಿದ್ಯಾರ್ಥಿನಿ ರೂಪ ವಂದಿಸಿದರು ವಿದ್ಯಾರ್ಥಿನಿಯರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ