ಸಂವಹನ ಕೌಶಲ್ಯ ವೃದ್ಧಿಸಿಕೊಳ್ಳಬೇಕು;ಡಾ.ಪಾಲಾಕ್ಷ

ಚಿತ್ರದುರ್ಗ

      ಲಸಿಕಾ ಕಾರ್ಯಕ್ರಮಗಳನ್ನು ಬಲಪಡಿಸಲು ಆಶಾ ಕಾರ್ಯಕರ್ತೆಯರು ಸಾರ್ವಜನಿಕರೊಂದಿಗಿನ ತಮ್ಮ ಸಂವಹನಾ ಸಾಮಥ್ರ್ಯವನ್ನು ವೃದ್ಧಿಸಿಕೊಳ್ಳಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಪಾಲಾಕ್ಷ ಅವರು ಹೇಳಿದರು.

     ಲಸಿಕಾ ಕಾರ್ಯಕ್ರಮಗಳ ಬಲವರ್ಧನೆಗಾಗಿ ಆಶಾ ಕಾರ್ಯಕರ್ತೆಯರಿಗೆ ಹಿರಿಯೂರಿನ ತಾಲ್ಲೂಕು ವೈದ್ಯಾಧಿಕಾರಿಗಳ ಕಚೇರಿಯಲ್ಲಿ ಏರ್ಪಡಿಸಲಾದ ಸಂವಹನ ಕೌಶಲ್ಯ (ಬ್ರಿಡ್ಜ್) ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

     ರಾಷ್ಟ್ರೀಯ ಆರೋಗ್ಯ ಮಿಷನ್ ಕಾರ್ಯಕ್ರಮದಡಿ 2005 ರಿಂದಲು ತಾಯಿ ಮತ್ತು ಮಕ್ಕಳ ರಕ್ಷಣೆಗಾಗಿ ಹಲವು ಕಾರ್ಯಕ್ರಮಗಳನ್ನು ಏರ್ಪಡಿಸಿಕೊಂಡು ಬರಲಾಗುತ್ತಿದೆ. ಗರ್ಭಿಣಿ ಆರೈಕೆ, ಬಾಣಂತಿ ಆರೈಕೆ, ಮಕ್ಕಳ ಆರೈಕೆಗಾಗಿ ಸಮಾಜದಲ್ಲಿ ಸೇತುವೆಯಾಗಿ ಕಾರ್ಯ ನಿರ್ವಹಣೆ ಮಾಡಿ, ಈ ಕಾರ್ಯದಲ್ಲಿ ಸಮುದಾಯದ ಅಗತ್ಯತೆಯನ್ನು ಅರಿಯಲು ಆಶಾ ಕಾರ್ಯಕರ್ತೆಯರಿಗೆ ಸಂವಹನ ಕೌಶಲ್ಯದ ತರಬೇತಿಯ ಅಗತ್ಯವಿದೆ ಎಂದು ಹೇಳಿದರು.

      ಜಿಲ್ಲಾ ಆರೋಗ್ಯ ಶಿಕ್ಷಣಾದಿಕಾರಿ ಮಂಜುನಾಥ್ ಮಾತನಾಡಿ, ಆಶಾ ಕಾರ್ಯಕರ್ತೆಯರು ತರಬೇತಿಯ ಸದುಪಯೋಗ ಪಡೆದುಕೊಳ್ಳಬೇಕು. ತರಬೇತಿಯಲ್ಲಿ ಕಲಿಕಾ ಸಾಮಥ್ರ್ಯವನ್ನು ಬಲಪಡಿಸಿಕೊಂಡು ಯಾವುದೇ ಮಕ್ಕಳು ಲಸಿಕೆಯಿಂದ ವಂಚಿತರಾಗದಂತೆ ನೋಡಿಕೊಳ್ಳುವುದು ನಿಮ್ಮ ಹೊಣೆಗಾರಿಕೆಯಾಗಿದೆ. ಆಶಾ ಕಾರ್ಯಕರ್ತೆಯರು ಸೇರಿದಂತೆ ಹಲವರ ಶ್ರಮದ ಫಲವಾಗಿ ನಮ್ಮ ದೇಶ ಪೋಲಿಯೋ, ಸಿಡುಬು ರೋಗಗಳಿಂದ ಮುಕ್ತವಾಗಿದೆ ಎಂದರು.

     ತಾಲ್ಲೂಕು ಆರೋಗ್ಯಾಧಿಕಾರಿ ಡಾ||ಜಿ.ವೆಂಕಟೇಶ್, ಸಾರ್ವಜನಿಕ ಆಸ್ಪತ್ರೆಯ ಡಾ|| ಮೋಹನ್ ಕುಮಾರ್, ಡಾ||ರಂಗೇಗೌಡರು, ಮಕ್ಕಳ ತಜ್ಞರು ಹಾಜರಿದ್ದರು ಕಾರ್ಯಕ್ರಮದಲ್ಲಿ, ಉಪ ಆರೋಗ್ಯ ಶಿಕ್ಷಣಾಧಿಕಾರಿಗಳಾದ, ಬಿ.ಮೂಗಪ್ಪ, ಹನುಮಂತಗೌಡ, ಪೂಜಾರ್, ದಸ್ತಗಿರಿ ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

 

Recent Articles

spot_img

Related Stories

Share via
Copy link