ರಾಣಿಬೆನ್ನೂರು:
ಕರ್ನಾಟಕರಾಜ್ಯ ನಗರ ಮತ್ತು ಗ್ರಾಮಾಭ್ಯುದಯ ಸ್ವಯಂ ಸೇವಾ ಸಂಸ್ಥೆಗಳ ಒಕ್ಕೂಟ (ರಿ). (ಫೆವಾರ್ಡ-ಕೆ) ಬೆಂಗಳೂರು ಹಾಗೂ ಕ್ರೈಸ್ಟ್ ವಿಶ್ವ ವಿದ್ಯಾಲಯ ಬೆಂಗಳೂರು.( ಸಮಾಜ ಮತ್ತು ಸಮಾಜ ಸೇವಾ ಕಾರ್ಯಶಾಸ್ತ್ರ ವಿಭಾಗ) ಇವರುಗಳ ಸಂಯುಕ್ತಶ್ರಯದಲ್ಲಿ ಶಿವಮೊಗ್ಗ ವಿಭಾಗದ ಸ್ವಯಂ ಸೇವಾ ಸಂಸ್ಥೆಗಳ ಮುಖ್ಯಸ್ಥರಿಗೆ “ವ್ಹಿಷನ್ ಬಿಲ್ಡಿಂಗ್‍ಕಾರ್ಯಾಗಾರದಮುಕ್ತಾಯ ಸಮಾರಂಭ” ಕಾರ್ಯಕ್ರಮವನ್ನು ದಿನಾಂಕ 15-12-2018 ರಂದು ಹಮ್ಮಿಕೊಳ್ಳಲಾಯಿತು.
ಈ ಕಾರ್ಯಕ್ರಮದಲ್ಲಿ ನೀಡ್ಸ್ ಸಂಸ್ಥೆಯ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ಎಚ್‍ಎಫ್ ಅಕ್ಕಿ ಇವರು ಮಾತನಾಡುತ್ತ ಸ್ವಯಂ ಸೇವಾ ಸಂಸ್ಥೆಗಳು ಉನ್ನತವಾದಗುರಿ ಮತ್ತು ಉದ್ದೇಶಗಳನ್ನು ಇಟ್ಟುಕೊಂಡುಅದನ್ನು ಸಾಧಿಸಲು ಸ್ವಯಂ ಸೇವಾ ಸಂಸ್ಥೆಗಳು ಪರಿಣಾಮಾಕಾರಿಯಾಗಿಕಾರ್ಯನಿರ್ವಹಿಸಿ ಸರ್ಕಾರಕ್ಕೆ ಮಾದರಿಯಾಗಬೇಕು ಹಾಗೂ ಸಮುದಾಯಅಭಿವೃದ್ಧಿಗಾಗಿ ಸ್ವಯಂ ಸೇವಾ ಸಂಸ್ಥೆಗಳು ಒಗ್ಗಟ್ಟಾಗಿ ಬದುಕಬೇಕುಎಂದುತಿಳಿಸಿದರು.
ಈ ಕಾರ್ಯಕ್ರದಲ್ಲಿ ಫೆವಾರ್ಡ-ಕೆಅಧ್ಯಕ್ಷರಾದಅಂಜನೇಯರೆಡ್ಡಿ, ಉಪಾಧ್ಯಕ್ಷರಾದಡಾ|| ಮಲ್ಲಮ್ಮ ಹೇಳವರ, ಡಾ|| ನಾಗರಾಜ, ಶ್ರೀ ಸೂಗುರಯ್ಯ ಸ್ವಾಮಿ, ಶ್ರೀ ಬಿ.ಟಿ. ಭದ್ರೇಶ್, ಶ್ರೀ ಚಕ್ರಪಾಣಿ, ಶ್ರೀ ಎಸ್.ಹೆಚ್. ಮಜೀದ್, ಶ್ರೀಮತಿ ಗೀತಾ ಪಾಟೀಲ್, ಶ್ರೀಮತಿ ಹೊನ್ನಮ್ಮಚಂದಾಪುರ ಉಪಸ್ಥಿತರಿದ್ದಾರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








