ದ್ವಿದಳ ಧಾನ್ಯಗಳ ಬೇಸಾಯದಿಂದ ಹೆಚ್ಚು ಇಳುವರಿ ಪಡೆಯಬಹುದು

ಹರಿಹರ :

      ದ್ವಿದಳ ಧಾನ್ಯಗಳ ಬೇಸಾಯದಿಂದ ಮಣ್ಣಿನ ಫಲವತ್ತತೆ ಹೆಚ್ಚಾಗಿ, ಇಳುವರಿ ಹೆಚ್ಚಾಗುತ್ತದೆ ಮಾದರಿ ಕೃಷಿಕರಾದ ರಾಜನಹಳ್ಳಿ ರೇವಣಸಿದ್ದಪ್ಪ ಅವರು ಕೃಷಿ ಮಹಿಳೆಯರಿಗೆ ಮಾಹಿತಿ ನೀಡಿದರು

        ತಾಲೂಕಿನ ರಾಜನಹಳ್ಳಿಯ ಗ್ರಾಮದ ಸಿದ್ಧರೂಢ ಆಶ್ರಮದಲ್ಲಿ ಶ್ರಿ ಕ್ಷೇತ್ರ ಧರ್ಮಸ್ಥಳ ಗ್ರಾಮಾಣಾಭಿವೃದ್ಧಿ ಯೋಜನೆ(ರಿ) ಹರಿಹರ ಸಂಸ್ಥೆ ಹಮ್ಮಿಕೊಂಡಿದ್ದ ದ್ವಿದಳ ಧಾನ್ಯ ಬೇಸಾಯ ತರಬೇತಿಯ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಅವರು ಮಾಹಿತಿ ನೀಡಿದರು.

         ದ್ವಿದಳ ಧಾನ್ಯಗಳ ಬೇಸಾಯದಿಂದ ಮಣ್ಣಿನ ಫಲವತ್ತತೆ ಹೆಚ್ಚಾಗಿ, ಇಳುವರಿ ಹೆಚ್ಚಾಗುತ್ತದೆ ಹಾಗೂ ಇತರ ಬೆಳೆಗಳ ಜೊತೆಗೆ ದ್ವಿದಳ ಧಾನ್ಯ ಬೆಳೆಗಳಾದ ತೊಗರಿ, ಕಡಲೆ,ಅವರೆಕಾಳು ಮುಂತಾದ ಬೇಳೆಗಳನ್ನು ಬೆಳೆಯುವುದುಕೃಷಿ ಹಾಗೂ ಆರೋಗ್ಯದ ಉದ್ದೇಶದಿಂದ ಉತ್ತಮವಾಗಿದೆ. ಇದೇ ರೀತಿ ರೈತರು ದ್ವಿದಳ ಧಾನ್ಯಗಳ ಬೇಸಾಯವನ್ನು ಮಾಡಿ ಎಂದು ಕರೆ ನೀಡಿದರು.

           ತರಬೇತಿಯ ಅಧ್ಯಕ್ಷತೆಯನ್ನು ಒಕ್ಕೂಟದ ಅಧ್ಯಕ್ಷರಾದ ಸತೀಶ್ ವಹಿಸಿದ್ದರು. ವಲಯ ಮೇಲ್ವಿಚಾರಕರಾದ ಮಂಜುಳಾ ಪಿ, ಕೃಷಿ ಮೇಲ್ವಿಚಾರಕರಾದ ಗುರುರಾಜ್, ಸೇವಾಪ್ರತಿನಿಧಿ ಮಹಾದೇವಮ್ಮ, ಒಕ್ಕೂಟದ ಪದಾಧಿಕಾರಿಗಳು ಹಾಗೂ ಸದಸ್ಯರು ಭಾಗವಹಿಸಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link