ಮಡಿಲು ಕಿಟ್ ಯೋಜನೆ ಪುನಾರಂಭಕ್ಕೆ ಚಿಂತನೆ : ಬಿ.ಶ್ರೀರಾಮುಲು

ಬಳ್ಳಾರಿ

      ರಾಜ್ಯದಲ್ಲಿ ಮಡಿಲು ಕಿಟ್ ಯೋಜನೆ ಪುನರ್ ಆರಂಭಕ್ಕೆ ಚಿಂತನೆ ನಡೆಸುವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವ ಬಿ.ಶ್ರೀರಾಮುಲು ತಿಳಿಸಿದ್ದಾರೆ.

      ರಾಜ್ಯದಲ್ಲಿ ಮಡಿಲು ಕಿಟ್ ಯೋಜನೆಯ ಪುನರ್ ಆರಂಭಕ್ಕೆ ಚಿಂತನೆ ನಡೆಸುವೆ: ಸಚಿವ ಶ್ರೀರಾಮುಲುಬಳ್ಳಾರಿಯ ಸರ್ಕಾರಿ ಜಿಲ್ಲಾಸ್ಪತ್ರೆ ಆವರಣದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ರೋಟಾ ವೈರಸ್ ಲಸಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು ಈ ಭರವಸೆ ನೀಡಿದ್ದಾರೆ. ಈ ಹಿಂದೆ ರಾಜ್ಯದ ತಾಯಂದಿರ ಹಾಗೂ ಮಕ್ಕಳ ಸುರಕ್ಷತೆಗಾಗಿ ಮಡಿಲು ಕಿಟ್ ವಿತರಿಸಲಾಗುತ್ತಿತ್ತು.

      ಆದ್ರೀಗ ನೀವೆಲ್ಲ ಹೊರಗಡೆ ಖರೀದಿಸಿ ತಂದಿದ್ದೀರಿ. ಇದನ್ನು ನಾನು ಸೂಕ್ಷ್ಮವಾಗಿ ಗಮನಿಸಿರುವೆ ಎಂದು ಮುಂದೆ ಕುಳಿತಿದ್ದ ಬಾಣಂತಿಯರು ಮಕ್ಕಳಿಗೆ ಅಳವಡಿಸಿದ್ದ ಮಡಿಲು ಕಿಟ್ ಅನ್ನು ತೋರಿಸುತ್ತಾ ಭಾವುಕರಾದರು. ಈ ಕುರಿತು ರಾಜ್ಯ ಸರ್ಕಾರದೊಂದಿಗೆ ಚರ್ಚಿಸುವೆ. ಮಡಿಲು ಕಿಟ್ ಯೋಜನೆ ಜಾರಿಗೊಳಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುವೆ ಎಂದರು.ಇನ್ನು, ಉಪಮುಖ್ಯಮಂತ್ರಿ ಸ್ಥಾನ ಕೈತಪ್ಪಿದ್ದಕ್ಕೆ ಅಸಮಾಧಾನದ ಕುರಿತು ಮಾತನಾಡಿದ ಶ್ರೀರಾಮುಲು, ನಾನು ಪಕ್ಷದ ತೀರ್ಮಾನಕ್ಕೆ ಬದ್ಧನಾಗಿ ಕೆಲಸ ಮಾಡುತ್ತಿದ್ದೇನೆ. ಈ ಹಿಂದೆ ನನಗೆ ಆರೋಗ್ಯ ಖಾತೆ ನಿಭಾಯಿಸಿದ ಅನುಭವ ಇದೆ. ಜನರ ಆರೋಗ್ಯದ ವಿಚಾರದಲ್ಲಿ ಕಾಳಜಿವಹಿಸುವ ಕೆಲಸ ಮಾಡುವೆ ಎಂದು ತಿಳಿಸಿದ್ದಾರೆ.

      ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link