ಬರಗೂರು
2018-19 ನೇ ಸಾಲಿಗೆ ಪದವಿ ಪೂರ್ವ ಶಿಕ್ಷಣ ಇಲಾಖೆ ನಡೆಸಿದ ಸಿರಾ ತಾಲ್ಲೂಕು ಮಟ್ಟದ ಕ್ರೀಡಾ ಕೂಟದಲ್ಲಿ ಸಿರಾ ತಾಲ್ಲೂಕು ಬರಗೂರು ಜ್ಞಾನ ಜ್ಯೋತಿ ಪದವಿ ಪೂರ್ವ ಕಾಲೇಜು ಅಥ್ಲೆಟಿಕ್ಸ್ ನಲ್ಲಿ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡು, ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
1500 ಮೀಟರ್ ಓಟದಲ್ಲಿ ಕೆಎಸ್ ಕಾವ್ಯ ಪ್ರಥಮ, ಎತ್ತರ ಜಿಗಿತದಲ್ಲಿ ಟಿ.ಸುನೀತಾ ಪ್ರಥಮ, ಕೆಎನ್.ಮನುಶ್ರೀ ನಡಿಗೆಗೆ ಪ್ರಥಮ, 800 ಮೀಟರ್ ಓಟದಲ್ಲಿ ಇ.ಪರಿಮಳ ಪ್ರಥಮ, 300 ಮೀ.ಓ ಎಸ್‍ಭರತ್ ಪ್ರಥಮ, 1500ಮೀ.ಓಟ ಬಿಕೆ.ದರ್ಶನ್ ಪ್ರಥಮ. ಚಾವೆಲಿನ್‍ನಲ್ಲಿ ಹೆಚ್ ಜ್ಯೋತಿ ದ್ವಿತೀಯ, ಜಿಗಿತ ಸುನಿತಾ ದ್ವಿತೀಯ, 300 ಮೀ.ಓಟ ನಂದಿನಿ ದ್ವಿತೀಯ, ರಿಲೆ ಓಟದಲ್ಲಿ ಕಾವ್ಯ, ಪರಿಮಳ, ಸುನೀತಾ ದ್ವಿತೀಯ, ನಡಿಗೆಗೆ ಜ್ಯೋತಿ ತೃತೀಯ, 800 ಮೀ. ಓಟ ಸುನೀತಾ ತೃತೀಯ, 200 ಮೀ ಓಟದಲ್ಲಿ ಮನುಶ್ರೀ ತೃತೀಯ ಸ್ಥಾನ ಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಸ್ಪರ್ಧಾ ವಿಜೇತ ವಿದ್ಯಾರ್ಥಿ/ವಿದ್ಯಾರ್ಥಿನಿಯರನ್ನು ಪ್ರಾಂಶುಪಾಲ ಡಿಎನ್.ಪರಮೇಶ್ ಗೌಡ ಅಭಿನಂದಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
