ಹೈಕೋರ್ಟ್ ನಲ್ಲಿ ಡಿಕೆಶಿ ಪ್ರಕರಣ ಸೆ.11ಕ್ಕೆ ವಿಚಾರಣೆ.!

ಬೆಂಗಳೂರು

      ಆರ್ಥಿಕ ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೊಳಗಾಗಿರುವ ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ಅವರ ಪ್ರಕರಣವನ್ನು ಸೆಪ್ಟೆಂಬರ್ 11 ರಂದು ವಿಚಾರಣೆಗೆ ಎತ್ತಿಕೊಳ್ಳಲು ಹೈಕೋರ್ಟ್ ನಿರ್ಧರಿಸಿದೆ.ಈ ಸಂಬಂಧ ಡಿಕೆಶಿ ಪರ ವಕೀಲರು ಸಲ್ಲಿಸಿದ್ದ ಅರ್ಜಿಯನ್ನು ಪರಿಗಣಿಸಿರುವ ನ್ಯಾಯಾಲಯ ಪ್ರಕರಣದ ವಿಚಾರಣೆಯನ್ನು ಸೆಪ್ಟೆಂಬರ್ 11 ರಂದು ಕೈಗೆತ್ತಿಕೊಳ್ಳಲು ನಿರ್ಧರಿಸಿತು.

       ಆರ್ಥಿಕ ಜಾರಿ ನಿರ್ದೇಶನಾಲಯ ಡಿಕೆಶಿ ಅವರನ್ನು ಬಂಧಿಸಿದ ನಂತರ ವಿಶೇಷ ನ್ಯಾಯಾಲಯದ ಮುಂದೆ ಅವರನ್ನು ಹಾಜರುಪಡಿಸಲಾಗಿತ್ತಾದರೂ ಅದು ಸೆಪ್ಟೆಂಬರ್ 13 ರವರೆಗೆ ಇಡಿ ವಶಕ್ಕೆ ನೀಡಿ ಆದೇಶ ಹೊರಡಿಸಿತ್ತು. ಈ ಮಧ್ಯೆ ಹೈಕೋರ್ಟ್‍ಗೆ ರಿಟ್ ಅರ್ಜಿ ಸಲ್ಲಿಸಿರುವ ಡಿಕೆಶಿ ಪರ ವಕೀಲರು ಇಡಿ ಬಂಧನದ ತೀರ್ಮಾನವನ್ನು ರದ್ದುಪಡಿಸಲು ಕೋರಿ ಮನವಿ ಮಾಡಿಕೊಂಡರು.

       ಅದನ್ನು ಪುರಸ್ಕರಿಸಿದ ಹೈಕೋರ್ಟ್ ಡಿಕೆಶಿ ಅವರ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆಪ್ಟೆಂಬರ್ 11 ರಂದು ವಿಚಾರಣೆ ನಡೆಸಲು ಒಪ್ಪಿದೆ.ಈ ಮಧ್ಯೆ ಇಡಿ ವಶದಲ್ಲಿರುವ ಡಿಕೆಶಿ ಅವರು ಶೇವಿಂಗ್ ಮಾಡಿಕೊಳ್ಳಲು ಅವಕಾಶ ನೀಡುವಂತೆ ವಕೀಲರು ಮಾಡಿಕೊಂಡು ಮನವಿಯನ್ನು ನ್ಯಾಯಾಲಯ ಪುರಸ್ಕರಿಸಿದೆ.

        ತಮ್ಮ ಕಕ್ಷೀದಾರರಿಗೆ ಪೆನ್ನು ನೀಡಬೇಕು.ಪೇಪರ್ ನೀಡಬೇಕು.ಶೇವಿಂಗ್ ಮಾಡಿಕೊಳ್ಳಲು ಅನುಮತಿ ನೀಡಬೇಕು ಎಂದು ವಕೀಲರು ನ್ಯಾಯಾಲಯದ ಮುಂದೆ ಮನವಿ ಸಲ್ಲಿಸಿದ್ದರು.

      ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link