ಬಳ್ಳಾರಿ:
ಫೆ.14ರಂದು ಉಗ್ರರು ನಡೆಸಿದ ದಾಳಿಗೆ ಪ್ರತೀಕಾರವಾಗಿ ಪಿಓಕೆಯಲ್ಲಿ ಅಡಗಿದ್ದ ಉಗ್ರರ ನೆಲೆಯನ್ನು ಭಾರತೀಯ ವಾಯು ಸೇನೆ ಧ್ವಂಸಗೊಳಿಸಿದ ಬಗ್ಗೆ ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಭಿನ್ನ ಹೇಳಿಕೆ ನೀಡಿದ್ದಾರೆ.
ಪಾಕಿಸ್ತಾನದ ಮೇಲೆ ಇಂದು ಮಾಡಿದ ದಾಳಿಯ ಬಗ್ಗೆ ಮಾತನಾಡಿದ ಡಿಕೆಶಿ, “ ದೇಶದ ಐಕ್ಯತೆ ಮುಖ್ಯ. ಮಾಧ್ಯಮಗಳಲ್ಲಿ ದಾಳಿ ಬಗ್ಗೆ ಭಿನ್ನ ವಿಶ್ಲೇಷಣೆ ಬರುತ್ತಿದೆ. ದೇಶ ಒಗ್ಗಟ್ಟಿನಲ್ಲಿ ಇರಬೇಕಿದೆ. ಚುನಾವಣೆ ಹೊತ್ತಿನಲ್ಲಿ ನಾನೇನು ಮಾತನಾಡೋದಿಲ್ಲ. ಈ ಸಂಬಂಧ ನಮ್ಮ ನಾಯಕರು ಹೇಳುತ್ತಾರೆ. ಸೈನಿಕರ ಪರ ನಾವು ಇರುತ್ತೇವೆ ಹಾಗೂ ನಮಗೆ ಸೈನಿಕರ ರಕ್ಷಣೆ ಮುಖ್ಯ. ರಾಜಕಾರಣದ ಮಾತು ಈಗ ಬೇಡ. ದಾಳಿ ಸರಿಯೋ ತಪ್ಪೋ ಅದರ ಬಗ್ಗೆ ಈಗ ಮಾತನಾಡೋದು ಬೇಡ ಈಗ ಸದ್ಯ ಆಗಿರುವ ದಾಳಿಯ ಬಗ್ಗೆ ಬೇರೆ ರೀತಿಯ ವಾಖ್ಯಾನಗಳು ಕೇಳಿ ಬರುತ್ತಿದೆ” ಎಂದ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ