ಸಿಎಂ ರಾಜಕೀಯ ಕಾರ್ಯದರ್ಶಿಗೆ ಟಾಂಗ್ ನೀಡಿದ ಡಿ ಕೆ ಶಿವಕುಮಾರ್

ಬೆಂಗಳೂರು

      ರಾಜ್ಯದ ಕೆಪಿಸಿಸಿ ಅಧ್ಯಕ್ಷರಾಗಿ ಏನು ಮಾಡಿದ್ದೀರಿ ಯಾರೋ ಕೊಡುವ ಕಿಟ್ ಜೊತೆ ಫೋಟೋ ತೆಗೆಸಿಕೊಳ್ಳೋದಲ್ಲ, ನೀವೇ ಸ್ವತಃ ಸಹಾಯ ಮಾಡಿ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ವಿಶ್ವನಾಥ್ ಅವರು ಮಾಜಿ ಸಚಿವ ಡಿ.ಕೆ ಶಿವಕುಮಾರ್ ಗೆ ಟಾಂಗ್ ಕೊಟ್ಟಿದ್ದಾರೆ.

      ಸಚಿವ ಸುಧಾಕರ್ ರಾಜೀನಾಮೆ ನೀಡಲು ಎಂದು ಡಿಕೆಶಿ ಹೇಳಿಕೆ ವಿಚಾರವಾಗಿ ಮಾತನಾಡಿ ಅವರು, ಮನೆಯಲ್ಲಿ ಮಕ್ಕಳ ಜೊತೆ ಇರೋದು ತಪ್ಪಾ? ಈ ಕಾಂಗ್ರೆಸ್ ನಾಯಕರು ರಾತ್ರಿ ಏನು ಮಾಡುತ್ತಾರೆ? ಸಿಗದೇ ಇರುವ ವಸ್ತುಗಳು ಹೇಗೆ ಸಿಗುತ್ತದೆ? ರಾಜ್ಯ ಕೆಪಿಸಿಸಿ ಅಧ್ಯಕ್ಷರಾಗಿ ನೀವು ಏನು ಮಾಡಿದ್ದೀರಿ? ಕಾರ್ಯಕರ್ತರು ಕೊಡುವ ಕಿಟ್ ಹತ್ತಿರ ಹೋಗಿ ಫೋಟೋ ತಗಿಸೋದು ಎಷ್ಟು ಸರಿ ಎಂದು ಡಿಕೆಶಿಗೆ ವಿಶ್ವನಾಥ್ ಟಾಂಗ್ ನೀಡಿದರು.

     ಗ್ರಾಮಸ್ಥರಿಗೆ ದಿನಸಿ ಸಾಮಗ್ರಿಯನ್ನು ವಿಶ್ವನಾಥ್ ಅವರ ನೇತೃತ್ವದಲ್ಲಿ ಹಂಚಿಕೆ ಮಾಡಲಾಯಿತು. ನೆಲಮಂಗಲ ತಾಲೂಕಿನ ಹಂಚಿಪುರ ಗ್ರಾಮಸ್ಥರಿಗೆ ಆಹಾರ ಕಿಟ್‍ಗಳನ್ನು ವಿತರಣೆ ಮಾಡಲಾಯಿತು. ಸ್ಥಳೀಯ ಭವಾನಿ ಶಂಕರ್ ಗ್ರೂಪ್ಸ್ ವತಿಯಿಂದ 1,000 ಕುಟುಂಬಕ್ಕೆ ಆಹಾರ ಕಿಟ್ ವಿತರಿಸಲಾಯಿತು.

     ನೆಲಮಂಗಲ ಬಸವಣ್ಣ ದೇವರ ಮಠದಲ್ಲಿ ಊಟ ಸ್ಥಗಿತ ವಿಚಾರದ ಬಗ್ಗೆ ವಿಶ್ವನಾಥ್ ಅವರು ಪ್ರತಿಕ್ರಿಯಿಸಿ, ಅಧಿಕಾರಿಗಳು ಹಾಗೂ ಸ್ವಾಮೀಜಿ ಜೊತೆ ಚೆರ್ಚೆ ಮಾಡುತ್ತೇನೆ. ಎಂದಿನಂತೆ ಊಟ ತಯಾರಿ ಮಾಡಿ ಬಡವರಿಗೆ ಹಂಚಿಕೆ ಮಾಡುವಂತೆ ಮನವಿ ಮಾಡುತ್ತೇನೆ. ಲಾಕ್‍ಡೌನ್ ಸಮಯದಲ್ಲಿ ನೆಲಮಂಗಲ ಶಾಸಕರು ರಾಜಕೀಯ ಮಾಡಬಾರದು, ಬಡವರಿಗಾಗಿ ಜನರು, ಸ್ವಯಂ ಸೇವಕರು, ಮಠದಲ್ಲಿ ಸೇವೆ ಸಲ್ಲಿಸಿದ್ದಾರೆ. ಮಠದಲ್ಲಿ ಆಹಾರ ತಯಾರಿ ಸ್ಥಗಿತ ವಿಚಾರ ಸರಿಯಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

    ಕೊರೊನಾ ವೈರಸ್ ಹರಡಿ ಎಲ್ಲೆಡೆ ಜನರು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಈ ವೇಳೆ ರಾಜಕೀಯ ಮಾಡುವುದು ಸರಿಯಲ್ಲ. ಈ ಕೊರೊನಾ ವೈರಸ್ ಹಾವಳಿ ಮುಗಿಯಲಿ, ಆಮೇಲೆ ಒಬ್ಬರನೊಬ್ಬರು ಟೀಕಿ ಮಾಡಿ. ಈಗ ನಾವೆಲ್ಲರು ಜೊತೆಗೂಡಿ ಕೆಲಸ ಮಾಡೋಣ, ನಾವೆಲ್ಲರೂ ಒಂದೇ, ಟೀಕೆ-ವ್ಯಂಗ್ಯವನ್ನು ಆಮೇಲೆ ಮಾಡೋಣ ಎಂದು ಕಿವಿ ಮಾತು ಹೇಳಿದರು. ಈ ವೇಳೆ ಮಾಜಿ ಶಾಸಕ ನಾಗರಾಜು, ಯೋಜನಾ ಪ್ರಾಧಿಕಾರದ ಅಧ್ಯಕ್ಷ ಮಲ್ಲಯ್ಯ, ಭವಾನಿ ಗ್ರೂಪ್ಸ್ ನ ಬೈರೇಗೌಡ, ಅಂದಾನಪ್ಪ, ಮಂಜುನಾಥ್, ಗ್ರಾಮಸ್ಥರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap