ಡಿಕೆಶಿಯಿಂದ ಓಲೈಕೆ ರಾಜಕಾರಣ : ಸುರೇಶ್ ಕುಮಾರ್

ಬೆಂಗಳೂರು:

    ಕೆಲದಿನಗಳ ಹಿಂದೆ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಅವರು ಕನಕಪುರದಲ್ಲಿ ಶಂಕುಸ್ಥಾಪನೆ ಮಾಡಿದ ಜಗತ್ತಿನ ಅತಿ ಎತ್ತರದ  ಕ್ರಿಸ್ತ ಪ್ರತಿಮೆ ಬಗ್ಗೆ  ಶಿಕ್ಷಣ ಸಚಿವ ಸುರೇಶ್ ಕುಮಾರ್ ಪ್ರತಿಕ್ರಿಯಿಸಿ ಡಿಕೆಶಿ ಅವರು ಓಲೈಕೆ ರಾಜಕಾರಣ ಮಾಡಲು ಮುಂದಾಗಿದ್ದಾರೆ ಎಂದು ಆರೋಪಿಸಿದ್ದಾರೆ.

   ಜಗತ್ತಿನಲ್ಲಿ ನ್ಯಾಯ ಎಲ್ಲರಿಗೂ ಒಂದೇ,ಅದಕ್ಕಾಗಿ ಯಾರನ್ನೂ ಓಲೈಸುವ ಅವಶ್ಯಕತೆಯಿಲ್ಲ, ನಮ್ಮ ನಂಬಿಕೆ ಮತ್ತು ವಿಶ್ವಾಸ ಒಂದೇ ಆಗಿರುತ್ತದೆ. ಹಿಂದೂಗಳ ಪ್ರಮುಖ ಜಾಗ ಜೊತೆಗೆ ಗೋಮಾಳ ಭೂಮಿಯಲ್ಲಿ ಕ್ರಿಸ್ತ ಪ್ರತಿಮೆ ಸ್ಥಾಪಿಸುವುದು ಸರಿಯಲ್ಲ ಎಂದು ಹೇಳಿದ್ದಾರೆ.

   ಸಿಎಎ ಬಗ್ಗೆ ಜನರಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಸರಿಯಾದ ರೀತಿಯಲ್ಲಿ ಬಿಜೆಪಿ ವ್ಯವಸ್ಥಿತ ಕೆಲಸ ಮಾಡಿಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸಿದ ಸುರೇಶ್ ಕುಮಾರ್, ಸಿಎಎ ನಮ್ಮ ಧರ್ಮಕ್ಕೆ ಮಾತ್ರ ಸಂಬಂಧಿಸಿದ್ದಾಗಿದೆ. ಪಾಕಿಸ್ತಾನದಲ್ಲಿ ರಕ್ಷಣೆ ಕಳೆದುಕೊಂಡ ನಮ್ಮವರಿಗೆ ಇಲ್ಲಿ ಸೂರು ಕಲ್ಪಿಸುವ ವ್ಯವಸ್ಥೆ ಇದಾಗಿದೆ.  ವಿರೋಧ ಪಕ್ಷದವರು ಜನರನ್ನು ಎತ್ತಿಕಟ್ಟಿ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಬೇಸರ ವ್ಯಕ್ತ ಪಡಿಸಿದರು. 

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap