ಮಕ್ಕಳ ಮೇಲಿನ ದೌರ್ಜನ್ಯ ತಡೆಗಟ್ಟಲು ಪ್ರಾಮಾಣಿಕ ಯತ್ನ ಅಗತ್ಯ- ಡಾ. ಕೆ.ವಿ. ರಾಜೇಂದ್ರ

ಬಳ್ಳಾರಿ

       ಮಕ್ಕಳ ಮೇಲೆ ಆಗುವ ಕಿರುಕುಳ, ಹಾಗೂ ಲೈಂಗಿಕ ದೌರ್ಜನ್ಯದಂತ ಸಮಸ್ಯೆಗಳನ್ನು ತಡೆಯುವ ನಿಟ್ಟಿನಲ್ಲಿ ಸಂಬಂದಪಟ್ಟ ಇಲಾಖೆಗಳು ತಮ್ಮ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಬೇಕು ಎಂದು ಜಿ.ಪಂ ಸಿಇಒ ಡಾ. ಕೆ.ವಿ ರಾಜೇಂದ್ರ ಹೇಳಿದರು.

       ನಗರದ ಜಿಲ್ಲಾ ಪಂಚಾಯತ್ ನಜೀರ್ ಸಭಾಂಗಣದಲ್ಲಿ ಬುಧವಾರ ನಡೆದ ಮಕ್ಕಳ ಸಹಾಯವಾಣಿ 1098 ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

         ಮಕ್ಕಳ ಮೇಲಿನ ದೌರ್ಜನ್ಯ ಹಾಗೂ ಇತರೆ ಅಹಿತಕರ ಘಟನೆಗಳಿಗೆ ಸಂಬಂಧಿಸಿದಂತೆ ಮತ್ತು ಮಕ್ಕಳ ಹಕ್ಕುಗಳ ಉಲ್ಲಂಘನೆಯಾದಲ್ಲಿ ಸಂಬಂಧಪಟ್ಟ ಇಲಾಖೆಗಳು ಕೂಡಲೇ ಕ್ರಮ ತೆಗೆದುಕೊಂಡು ಕೆಲಸ ಮಾಡಬೇಕು. ಕೇವಲ ಮಕ್ಕಳ ಸಮಸ್ಯೆಗಳ ಕುರಿತು ಬರೆದಿಟ್ಟರೆ ಸಾಲುವುದಿಲ್ಲ, ಸಮಸ್ಯೆಗಳ ಪರಿಹಾರ ಕುರಿತು ಜಿಲ್ಲಾ ಮಟ್ಟದ ಇಲಾಖೆಗಳಿಗೆ ಕಳುಹಿಸಿಕೊಟ್ಟು ಸಮಸ್ಯೆಗಳನ್ನ ಇತ್ಯರ್ಥಗೊಳಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಸೂಚನೆ ನೀಡಿದರು.

         ಗ್ರಾಮ ಪಂಚಾಯತಿ ಮಟ್ಟದಲ್ಲಿ ನಡೆಯುವ ಮಕ್ಕಳ ಗ್ರಾಮಸಭೆಯಲ್ಲಿ ಮಕ್ಕಳ ಹಕ್ಕುಗಳು ಹಾಗೂ ಸಮಸ್ಯೆಗಳ ಕುರಿತು ಚರ್ಚಿಸಿದ ವಿಷಯಗಳ ಬಗ್ಗೆ ಗಂಭೀರ ಚಿಂತನೆ ನಡೆಸಬೇಕಾಗುತ್ತದೆ. ಶಾಲೆಯು ನಡೆಯುವ ಅವಧಿಯಲ್ಲಿ, ಮಕ್ಕಳು ಕೂಲಿ ಕೆಲಸಕ್ಕೆ ತೆರಳುವ ಬಗ್ಗೆ ವ್ಯಾಪಕ ದೂರುಗಳು ಕೇಳಿಬರುತ್ತವೆ.

         ಇದರ ಬಗ್ಗೆ ನಿಗಾವಹಿಸಿ, ಪ್ರತಿ ತಿಂಗಳಿಗೊಮ್ಮೆ ಶಿಕ್ಷಣ ಇಲಾಖೆ ಹಾಗೂ ಕಾರ್ಮಿಕ ಇಲಾಖೆ ಜಂಟಿಯಾಗಿ ಶಾಲೆಗಳಿಗೆ ಭೇಟಿ ನೀಡಿ, ಮಕ್ಕಳೊಂದಿಗೆ ಚರ್ಚಿಸಿ, ಬಳಿಕ ವರದಿ ನೀಡಬೇಕು. ಈ ವರದಿಯ ಕುರಿತು ಸಂಬಂಧಪಟ್ಟ ಇಲಾಖೆಗಳಿಂದ ಚಿಂತನೆ ನಡೆಸಿ, ಮಕ್ಕಳ ಹಕ್ಕುಗಳನ್ನು ರಕ್ಷಿಸುವ ಕಾರ್ಯವಾಗಬೇಕೆಂದು ಅವರು ಹೇಳಿದರು.

         ಜಿಲ್ಲೆಯ ಪ್ರತಿ ತಾಲೂಕಿನಲ್ಲಿ ಮಕ್ಕಳ ಹಕ್ಕುಗಳ ಸಂರಕ್ಷಣೆ ಕುರಿತು ವ್ಯಾಪಕ ಪ್ರಚಾರ ಆಗಬೇಕಿದೆ. 1098 ಮಕ್ಕಳ ಸಹಾಯವಾಣಿಯು ನಿರಂತರವಾಗಿ ಪ್ರಚಾರ ನೀಡುವತ್ತ ಗಮನಹರಿಸಬೇಕಿದೆ. ಮುಂದಿನ ಫೆಬ್ರವರಿ 15ರ ಒಳಗಡೆ ಇನ್ನೊಂದು ಸಭೆ ನಡೆಸಿ, ಆಗ ಮಕ್ಕಳ ಸಂರಕ್ಷಣೆ ಕುರಿತು ಸಮಗ್ರ ವರದಿ ನೀಡಬೇಕೆಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಜಿ.ಪಂ. ಸಿಇಒ ತಾಕೀತು ಮಾಡಿದರು.

        ಸಭೆಯಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಎಸ್. ಹಂದ್ರಾಳ, ರಾಜ್ಯ ಚೈಲ್ಡ್ ಲೈನ್ ಯೋಜನೆಯ ಕಾರ್ಯಕ್ರಮದ ಸಹಾಯಕ ವೈಭವ ಗೋಟೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ನಾಗೇಶ್ ಬಿಲ್ವಾ, ಡಿಡಿಪಿಐ ಶ್ರೀಧರನ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link