ಆಯೋಗದ ಮಾರ್ಗಸೂಚಿಯನ್ವಯ ಪಾರದರ್ಶಕವಾಗಿ ಕರ್ತವ್ಯ ನಿರ್ವಹಿಸಿ : ತಿಪ್ಪೇಸ್ವಾಮಿ

ಹಾವೇರಿ

         ಪಾರದರ್ಶಕ ಹಾಗೂ ವ್ಯವಸ್ಥಿತ ಚುನಾವಣೆಗೆ ಮತಗಟ್ಟೆ ಅಧಿಕಾರಿಗಳ ಪಾತ್ರ ಅತ್ಯಂತ ಪ್ರಮುಖವಾದುದು. ತರಬೇತಿಯಲ್ಲಿ ತಮಗಿರುವ ಸಂಶಯ ನಿವಾರಿಸಿಕೊಂಡು ನಿರ್ಭೀತಿಯಿಂದ ಪಾರದರ್ಶಕವಾಗಿ ಯಶಸ್ವಿಯಾಗಿ ಚುನಾವಣಾ ಕರ್ತವ್ಯ ನಿರ್ವಹಿಸಿ ಎಂದು ನಿಯೋಜಿತ ಮತಗಟ್ಟೆ ಅಧಿಕಾರಿಗಳಿಗೆ ಹಾವೇರಿ ಉಪವಿಭಾಗ ಅಧಿಕಾರಿ ಹಾಗೂ ಹಾವೇರಿ ವಿಧಾನಸಭಾ ಕೇಂದ್ರದ ಸಹಾಯಕ ಚುನಾವಣಾಧಿಕಾರಿ (ಎಆರ್‍ಓ) ತಿಪ್ಪೇಸ್ವಾಮಿ ಅವರು ಕರೆ ನೀಡಿದರು.

        ಹಾವೇರಿ ಲೋಕಸಭಾ ಚುನಾವಣೆ ಮತಗಟ್ಟೆ ಅಧಿಕಾರಿಗಳಿಗೆ ನಗರದ ಹುಕ್ಕೇರಿ ಮಠದ ಶಿವಲಿಂಗೇಶ್ವರ ಪ್ರೌಢಶಾಲೆಯಲ್ಲಿ ಆಯೋಜಿಸಿರುವ ಮೊದಲ ಸುತ್ತಿನ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.ತಮಗೆ ವಹಿಸಿದ ಕರ್ತವ್ಯ ಅತ್ಯಂತ ಮಹತ್ವವಾದದು. ಭಾರತ ಚುನಾವಣಾ ಆಯೋಗದ ಮಾರ್ಗಸೂಚಿ ಅನ್ವಯ ನಿರ್ಭಯವಾಗಿ ಕರ್ತವ್ಯ ನಿರ್ವಹಿಸಿ ನಿಮ್ಮ ಅಧಿಕಾರಿ ಹಾಗೂ ಕರ್ತವ್ಯಗಳ ಬಗ್ಗೆ ತರಬೇತಿಯಲ್ಲಿ ಸ್ಪಷ್ಠತೆ ಪಡೆಯಿರಿ. ನಿಖರವಾದ ಅರಿವಿನೊಂದಿಗೆ ಯಶಸ್ವಿಯಾಗಿ ಚುನಾವಣೆ ನಡೆಸಿ ಎಂದು ಸಲಹೆ ನೀಡಿದರು.

          ಮತಗಟ್ಟೆ ಮಟ್ಟದ ಅಧಿಕಾರಿಗಳು ಮತದಾನದ ಹಿಂದಿನ ದಿನ ಮತಗಟ್ಟೆಯಲ್ಲಿ ಮತಯಂತ್ರಗಳು, ಚುನಾವಣಾ ಸಾಮಗ್ರಿಗಳು, ಪೋಲಿಂಗ್ ಏಜೆಂಟರ್ ನೇಮಪತ್ರಗಳ ಪರಿಶೀಲನೆ ಸೇರಿದಂತೆ ಇತರೆ ವ್ಯವಸ್ಥೆಗಳ ಕುರಿತು ಪರಿಶೀಲನೆ ನಡೆಸಿ ಖಾತ್ರಿಪಡಿಸಿಕೊಳ್ಳಬೇಕು.
ಮತದಾನ ದಿನದಂದು ಮತಯಂತ್ರಗಳು, ಟೆಂಡರ್ ಬ್ಯಾಲಟ್ ಪೇಪರ್, ವಿಭಿನ್ನತಾ ಗುರುತಿನ ಮುದ್ರೆ, ಅಳಿಸಲಾಗದ ಶಾಯಿ ಸೇರಿದಂತೆ ವಿವಿಧ ಚುನಾವಣಾ ಸಾಮಗ್ರಿಗಳನ್ನು ಮಸ್ಟರಿಂಗ್ ಸೆಂಟರಿನಲ್ಲಿ ಚೆಕ್‍ಲಿಸ್ಟ್ ಪ್ರಕಾರ ಪಡೆದುಕೊಳ್ಳಬೇಕು.

         ಮತದಾನ ಕೇಂದ್ರಕ್ಕೆ ತಲುಪಿದ ನಂತರ ನಿರ್ದಿಷ್ಟಪಡಿಸಿದ ಕೇಂದ್ರಕ್ಕೆ ತೆರಳಿರುವ ಬಗ್ಗೆ ಖಾತ್ರಿಪಡಿಸಿಕೊಳ್ಳಬೇಕು. ರಾಜಕೀಯ ಪಕ್ಷಗಳು ಅಥವಾ ಚುನಾವಣೆ ಘೋಷಣೆ ಹೊಂದಿರುವ ಛಾಯಾಚಿತ್ರಗಳನ್ನು ಮರೆಮಾಚಬೇಕು. ಎಲ್ಲ ವಿಳಾಸದ ಟ್ಯಾಗ್ ಬರೆದಿಟ್ಟುಕೊಂಡು ನಮೂನೆಗಳಿಗೆ ವಿಭೇಧ ಚಿಹ್ನೆಯ ಗುರುತು ಹಾಕಿಟ್ಟುಕೊಳ್ಳಬೇಕು. ಮತಾರರ ಅಧಿಕೃತ ಪಟ್ಟಿಯ ಎಲ್ಲ ಪುಟಗಳು ಇರುವ ಬಗ್ಗೆ ಖಾತ್ರಿಪಡಿಸಿಕೊಳ್ಳಬೇಕು. ಮತದಾರರ ಪಟ್ಟಿಯಲ್ಲಿ ಇದೇಯೇ ಎಂಬುದರ ಬಗ್ಗೆ ಖಚಿತಪಡಿಸಿಕೊಳ್ಳಬೇಕು.

        ಮತದಾನ ನಡೆಯುವ ವೇಳೆ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳ ಪಟ್ಟಿ ಮತಗಟ್ಟೆ ಪ್ರದೇಶ, ಮತದಾರರ ಸಂಖ್ಯೆ, ಮತದಾನದ ಸಮಯ ಕುರಿತಂತೆ ಮತಗಟ್ಟೆ ಹೊರಗಡೆ ಎದ್ದು ಕಾಣುವಂತೆ ಪ್ರದರ್ಶಿಸಬೇಕು. ಮತದಾನ ಪ್ರಾರಂಭದ ನಂತರ ಮೊದಲನೇ ಮತದಾರನು ಮತ ಚಲಾಯಿಸಿದಾಗ ಸಿ.ಯು.ನಲ್ಲಿ ಟೋಟಲ್ ಬಟನ್ ಒತ್ತಿ ಒಂದು ಮತ ಚಲಾವಣೆಯಾಗಿದೆಯೇ ಎಂಬುದರ ಬಗ್ಗೆ ಖಚಿತಪಡಿಸಿ ಕೊಳ್ಳಬೇಕು.

       ಹಾಗೆಯೇ 2ನೇ ಮತದಾರನು ಮತ ಚಲಾಯಿಸಿದಾಗ ಸಿ.ಯುನಲ್ಲಿ ಟೋಟಲ್ ಬಟನ್ ಒತ್ತಿ ಎರಡು ಮತಗಳು ದಾಖಲಾಗಿದೆಯೇ ಎಂಬುದರ ಬಗ್ಗೆ ಖಚಿತಪಡಿಸಿಕೊಂಡು ನಂತರ ಮತದಾರರಿಗೆ ಮತಕೇಂದ್ರದಿಂದ ಹೊರಬಿಡಬೇಕು ಎಂದು ಹೇಳಿದರು.
ಅದರಂತೆ ಪ್ರಿಸೈಡಿಂಗ್ ಅಧಿಕಾರಿಗಳು ಮತಗಟ್ಟೆ ಹಾಗೂ ಮತದಾನ ಸಮಯದಲ್ಲಿನ ಸಂಪೂರ್ಣ ಉಸ್ತುವಾರಿ ನೋಡಿಕೊಳ್ಳಬೇಕು. ಮತದಾನ ಪ್ರಾರಂಭವಾಗುವ ಮೊದಲು ಏಜೆಂಟರಿಗೆ ಗುರುತು ಮಾಡಲ್ಪಟ್ಟ ಮತದಾರರ ಪಟ್ಟಿಯನ್ನು ತೋರಿಸಬೇಕು. ಹಾಗೂ ಅಧಿಕೃತ ಮತದಾರರ ಪಟ್ಟಿ ಇದೆಯೇ ಎಂಬುದರ ಬಗ್ಗೆ ಖಚಿತಪಡಿಸಿಕೊಳ್ಳಬೇಕು.

        ಮಸ್ಟರಿಂಗ್ ಹಾಗೂ ಡಿ ಮಸ್ಟರಿಂಗ್ ಕೇಂದ್ರದಲ್ಲಿ ಸಾಮಗ್ರಿಗಳನ್ನು ಪಡೆಯುವುದು ಹಾಗೂ ನೀಡುವ ಸಂಪೂರ್ಣ ಜವಾಬ್ದಾರಿ ಪ್ರಿಸೈಡಿಂಗ್ ಅಧಿಕಾರಿಗಳದ್ದಾಗಿರುತ್ತದೆ. ಮತಗಟ್ಟೆ ಹಾಗೂ ಸುತ್ತಮುತ್ತ ಕಾನೂನು ಸುವ್ಯವಸ್ಥೆ ಕಾಪಾಡಿಕೊಳ್ಳಬೇಕು. ಮತದಾನ ದಿನದ ಎಲ್ಲ ಪ್ರಕ್ರಿಯೆಗಳ ಬಗ್ಗೆ ಹಾಗೂ ಅಂಕಿ ಅಂಶಗಳ ಬಗ್ಗೆ ಚುನಾವಣಾಧಿಕಾರಿಗಳಿಗೆ ವರದಿ ಮಾಡಬೇಕು ಎಂದು ಹೇಳಿದರು. ಅದರಂತೆ ಮೊದಲನೇ ಪೋಲಿಂಗ್ ಅಧಿಕಾರಿ, ಎರಡನೇ ಪೋಲಿಂಗ್ ಅಧಿಕಾರಿ ಮೂರನೇ ಮತಗಟ್ಟೆ ಅಧಿಕಾರಿಗಳ ಕರ್ತವ್ಯಗಳು, ಇಡಿಸಿ & ಅಂಚೆ ಮತಪತ್ರಗಳ ಕುರಿತು ಮಾಹಿತಿ ನೀಡಿದರು.

        ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಸಹಾಯಕ ಚುನಾವಣಾಧಿಕಾರಿ ಗೋವಿಂದರೆಡ್ಡಿ, ತಹಶೀಲ್ದಾರ ಶಿವಕುಮಾರ ತಾಲೂಕಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀಮತಿ ಅನ್ನಪೂರ್ಣ, ಚುನಾವಣಾ ತರಬೇತಿ ಅಧಿಕಾರಿ ಹುಲಿರಾಜ್ ಭಾಗವಹಿಸಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link