ಬೆಂಗಳೂರು
ಸುಬ್ರಮಣ್ಯಪುರದ ರೌಡಿ ಯಶಸ್ವಿನಿ ಗೌಡ ಅವರಿಗೆ ವಿದೇಶಿ ವಿಶ್ವವಿದ್ಯಾಲಯವೊಂದು ಡಾಕ್ಟರೇಟ್ ಪದವಿ ನೀಡಿ ಗೌರವಿಸಿರುವುದು ವಿವಾದಕ್ಕೆ ಎಡೆಮಾಡಿಕೊಟ್ಟಿದೆ ಅಮೆರಿಕ ಮೂಲದ `ಇಂಟರ್ ನ್ಯ್ಯಾಷನಲ್ ಗ್ಲೋಬಲ್ ಪೀಸ್ ವಿಶ್ವವಿದ್ಯಾಲಯವು ಯಶಸ್ವಿನಿ ಗೌಡ ಡಾಕ್ಟರೇಟ್ ನೀಡಿದ್ದು ಯಶಸ್ವಿನಿ ಗೌಡ ಅವರ ಸಾಮಾಜಿಕ ಸೇವೆ ಮೆಚ್ಚಿ ಡಾಕ್ಟರೇಟ್ ನೀಡಿದ್ದಾಗಿ ವಿಶ್ವವಿದ್ಯಾಲಯವು ತಿಳಿಸಿದೆ. ಆದರೆ ಇಂಟರ್‍ನ್ಯಾಷನಲ್ ಗ್ಲೋಬಲ್ ಪೀಸ್ ವಿಶ್ವವಿದ್ಯಾಲಯಕ್ಕೆ ಹಣ ನೀಡಿ ಡಾಕ್ಟರೇಟ್ ಪಡೆದಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.
ಯಶಸ್ವಿನಿ ಗೌಡ ಅವರ ಪತಿ ದಡಿಯಾ ಮಹೇಶ ಪುಟ್ಟೇನಹಳ್ಳಿ ರೌಡಿ ಪಟ್ಟಿಯಲ್ಲಿದ್ದು ಇತ್ತೀಚಿಗೆ ಸಿಸಿಬಿ ಪೊಲೀಸರು ಆತನನ್ನು ಬಂಧಿಸಿ ವಿಚಾರಣೆ ನಡೆಸಿದ್ದರು ನಗರದಲ್ಲಿ ಡಾಕ್ಟರೇಟ್ ಕೊಡಿಸಲು ಗ್ಯಾಂಗ್ ಒಂದು ಕಾರ್ಯನಿರ್ವಹಿಸುತ್ತಿದ್ದು ಡಾಕ್ಟರೇಟ್ ಪದವಿ ನೀಡಲು 75 ಸಾವಿರ ರೂ. ನಿಂದ 1.50 ಲಕ್ಷದವರೆಗೂ ವಸೂಲಿ ಮಾಡಲಾಗುತ್ತಿದೆ ಹೆಚ್ಚು ಸುದ್ದಿಯಲ್ಲಿರುವವರನ್ನು ಗುರಿಯಾಗಿಸಿಕೊಂಡು ಗ್ಯಾಂಗ್ ಅರ್ಜಿ ಕೊಟ್ಟು ಅವರ ಮಾಹಿತಿ ಪಡೆದುಕೊಂಡು ಡಾಕ್ಟರೇಟ್ ಕೊಡಿಸುವ ಕಾರ್ಯದಲ್ಲಿ ತೊಡಗಿಕೊಂಡಿದೆ
ದೇಶದಲ್ಲಿ ಇಂತಹ ಅಕ್ರಮದಲ್ಲಿ ತೊಡಗಿದ್ದ ಕೆಲ ವಿಶ್ವವಿದ್ಯಾಲಯಗಳಿಗೆ ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ಕಡಿವಾಣ ಹಾಕಿತ್ತು.ಆದರೆ ವಿದೇಶಿ ವಿಶ್ವವಿದ್ಯಾಲಯಗಳಿಂದ ಸದ್ಯ ಡಾಕ್ಟರೇಟ್ ಪಡೆದುಕೊಳ್ಳುತ್ತಿರುವ ದಂಧೆಗೆ ಸರ್ಕಾರ ಕಡಿವಾಣ ಹಾಕಲು ಯಾರು ಮುಂದಾಗುತ್ತಾರೆ ಎಂಬ ಪ್ರಶ್ನೆ ಉದ್ಭವವಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








