ತಿಪಟೂರು :

ನಗರದಲ್ಲಿರುವ ಮಾತೃಶ್ರೀ ಫ್ಲೆಕ್ಸ್ ಪ್ರಿಂಟ್ ಅಂಗಡಿಗೆ ಏಕಾಏಕಿ ದಾಳಿಮಾಡಿದ ನಗರಸಭೆಯ ಪರಿಸರ ಅಭಿಯಂತರರು ಅಂಗಡಿಯಲ್ಲಿರುವ ನಿಷೇದಿತ ಫ್ಲೆಕ್ಸ್ ಮತ್ತು ಫ್ಲೆಕ್ಸ್‍ಗೆ ಪ್ರಿಂಟ್‍ಗೆ ಬೇಕಾದ ಕಚ್ಚಾವಸ್ತುಗಳನ್ನು ವಶಪಡಿಸಿಕೊಂಡ ಸುದ್ದಿ ತಿಳಿಯುತ್ತಿದ್ದಂತೆಯೇ ನೂರಾರು ಜನರು ಸೇರಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.
ನಗರದ ಬಿ.ಹೆಚ್.ರಸ್ತೆಯಲ್ಲಿರುವ ಗುರುಕುಲ ಸೂಪರ್ ಮಾರ್ಕೆಟ್‍ನಲ್ಲಿರುವ ಮಾತೃಶ್ರೀ ಫ್ಲೆಕ್ಸ್ ಪ್ರಿಂಟ್‍ಗೆ ಗುರುವಾರ ಸಂಜೆ ನಗರಸಭೆಯ ಅಧಿಕಾರಿಗಳು ದಾಳಿಮಾಡಿ ನಿಷೇದಿತ ಫ್ಲೆಕ್ಸ್ ಅನ್ನು ವಶಪಡಿಸಿಕೊಂಡ ಸುದ್ದಿ ತಿಳಿದ ತಕ್ಷಣ ನೂರಾರು ಜನರು ಸ್ಥಳಕ್ಕಾಗಮಿಸಿ ನಗರಸಭೆಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಾಗ ಮತ್ತೆ ಯಾವುದೋ ಮುಲಾಜಿಗೆ ಒಳಪಟ್ಟವರಂತೆ ತಕ್ಷಣವೇ ವಶಪಡಿಸಿಕೊಂಡಿದ್ದ ಫ್ಲೆಕ್ಸ್ ಮತ್ತು ಫ್ಲೆಕ್ಸ್‍ಗೆ ಪ್ರಿಂಟ್‍ಗೆ ಬೇಕಾದ ಕಚ್ಚಾವಸ್ತುಗಳನ್ನು ಹಿಂದಿರುಗಿಸಿದ ಘಟನೆ ಜರುಗಿತು.
ಕಳೆದ ವಾರವಿದ್ದು ಗಣೇಶ ಜಾತ್ರಾಮಹೋತ್ಸವದಲ್ಲಿ ಇದೇ ಫ್ಲೆಕ್ಸ್‍ಗಳನ್ನು ಹಾಕಿದಾದ ಜನಪ್ರತಿನಿಧಿಗಳನ್ನು ಕೇಳದೇ ಈಗ ಏಕಾಏಕಿ ನಮ್ಮ ಅಂಗಡಿಯ ಮೇಲೆ ಏಕೆ ದಾಳಿಮಾಡಿದರೆಂದು ತಿಳಿಯುತ್ತಿಲ್ಲ. ನಗರಸಭೆಯವರು ಕಾಟನ್ ಫ್ಲೆಕ್ಸ್‍ಗೆ ಅನುಮತಿ ನೀಡುತ್ತಿದ್ದು ನಮ್ಮಲ್ಲಿ ಬರುವ ಗ್ರಾಹಕರು ಕಾಟನ್ ಫ್ಲೆಕ್ಸ್‍ನ ದರವನ್ನು ಕೇಳಿ ಬೆಚ್ಚಿಬೀಳುತ್ತಾರೆ ಎಂದು ಅಗಂಡಿಯ ಮಾಲೀಕ ನಿತಿನ್ ತಿಳಿಸಿದರು.
ಸಾರ್ವಜನಿಕರ ಆಕ್ರೋಷ :
ಇದ್ದಕ್ಕಿದಂತೆಯೇ ಫ್ಲೆಕ್ಸ್ ಅಂಗಡಿಯ ಮೇಲೆ ದಾಳಿಮಾಡಿದ್ದನ್ನು ಕಂಡು ನಾಗರೀಕರು ಮೊದಲು ನೀವು ರಸ್ತೆ, ನೀರು, ಬೀದಿ ದೀಪಗಳನ್ನು ಸರಿಪಡಿಸಿ, ಅದನ್ನು ಬಿಟ್ಟು ಏಕಾಏಕಿ ಈ ಅಂಗಡಿಯ ಮೇಲೆ ಯಾರೂ ಅಧಿಕಾರಿಗಳ ಮಾತುಕೇಳಿ ದಾಳಿಮಾಡಿದ್ದೀರ ನಗರದಲ್ಲೀ ಇನ್ನಾವುದೇ ಫ್ಲೇಕ್ಸ್ ಅಂಗಡಿಗಳಿಲ್ಲವೇ, ಇನ್ನು ನಗರದಲ್ಲಿ ಏಲ್ಲಿಯೂ ಕಳಪೆ ಪ್ಲಾಸ್ಟಿಕ್ ಮಾರಾಟಮಾಡಿ ಬಳಸುತ್ತಿಲ್ಲವೇ ಎಂದು ಪ್ರಶ್ನಿಸಿದರು.
ವಶಪಡಿಸಿಕೊಂಡ ವಸ್ತುಗಳನ್ನು ಹಿಂದಿರುಗಿಸುತ್ತಿರುವುದು ಇದು ಮೊದಲೇನಲ್ಲ ಕಳೆದ ಮಾರ್ಚ್‍ನಲ್ಲೂ ಸಹ ಇದೇ ರೀತಿ ನಿಷೇದಿತ ಪ್ಲಾಸ್ಟಿಕ್‍ವಸ್ತುಗಳನ್ನು ವಶಪಡಿಸಿಕೊಂಡು ರಾತ್ರೋರಾತ್ರಿಯೇ ವ್ಯಾಪಾರಿಗಳಿಗೆ ಮರಳಿಕೊಟ್ಟಿದ್ದಾರೆ. ನಗರಸಭೆ ಯವರದ್ದು ಕೇವಲ ಉತ್ತರನಪೌರುಷ, ಅಧಿಕಾರಿಗಳು ರಾಜಕೀಯ ಮುಖಂಡರು ಹೇಳುವಂತೆ ಕೇಳುತ್ತಾರೆ ಪಾಪ ಅವರೇನು ಮಾಡಲು ಆಗುತ್ತದೆ ಎಂದು ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
