7 ವರ್ಷದ ಬಾಲಕನಿಗೆ ನಾಯಿ ಕಡಿತ : ಇಂಜಕ್ಷನ್ ಸಿಗದೆ ಪರದಾಡಿದ ಪೋಷಕರು

ಕೊಟ್ಟೂರು

    ಮನೆ ಮುಂದೆ ಆಟವಾಡುತ್ತಿದ್ದ 7 ವರ್ಷದ ಬಾಲಕನ ಮೇಲೆ ಬೀದಿ ನಾಯಿ ದಾಳಿ ಮಾಡಿ ತೊಡೆ ಭಾಗಕ್ಕೆ ರಕ್ತ ಬರುವ ಹಾಗೆ ಕಚ್ಚಿ ಗಾಯಗೊಳಿಸದ ಘಟನೆ ಪಟ್ಟಣದ ಹ್ಯಾಳ್ಯಾ ರಸ್ತೆಯ ಅಂಬೇಡ್ಕರ್ ನಗರದಲ್ಲಿ ಶನಿವಾರ ನಡೆದಿದೆ.

    ಅಂಬೇಡ್ಕರ್ ನಗರದಲ್ಲಿ ವಾಸವಾಗಿರುವ ಹುಲಿಗೇಶ್ ಇವರ ಮಗ ಮಹೇಶ ಕುಮಾರ್ ಅಕ್ಕಪಕ್ಕದ ಮನೆಯ ಮಕ್ಕಳೊಂದಿಗೆ ಆಟವಾಡುತ್ತಿದ್ದಾಗ 15 ನಾಯಿಗಳ ಗುಂಪೊಂದು ಕಚ್ಚಾಡುತ್ತ ಬಂದಿವೆ. ಮಕ್ಕಳೊಂದಿಗೆ ನಿಂತಿದ್ದ ಬಾಲಕನ ಮೇಲೆ ನಾಯಿಯೊಂದು ಏಕಾಎಕಿ ದಾಳಿ ಮಾಡಿ ಎಡ ತೊಡೆಗೆ ಬಾಯಿ ಹಾಕಿ ರಕ್ತ ಬರುವ ಹಾಗೆ ಕಚ್ಚಿದೆ.

    ಕಚ್ಚಿದ ಕೂಡಲೆ ಸಹಾಯಕ್ಕೆ ಸ್ಥಳಿಯ ಜನರು ದಾವಿಸಿ ಬೀದಿ ನಾಯಿಯಿಂದ ಮಗುವನ್ನು ರಕ್ಷಿಸಿ ಪ್ರಾಣಾಪಯದಿಂದ ಪಾರು ಮಾಡಿದ್ದಾರೆ. ನಂತರ ಸರ್ಕಾರಿ ಆಸ್ಪತ್ರಗೆ ಕರೆದುಕೊಂಡು ಹೋಗಿದ್ದಾರೆ. ಆಸ್ಪತ್ರೆಯಲ್ಲಿ ನಾಯಿ ಕಡಿತಕ್ಕೆ ಇಂಜಕ್ಷನ್ ನಮ್ಮಲಿ ಇಲ್ಲ ಕೂಡ್ಲಿಗಿ ಕರೆದುಕೊಂಡು ಹೋಗಿ ಎಂದು ವೈದ್ಯರು ಹೇಳಿದ್ದಾರೆ.

    ಮಗುವಿನ ತಂದೆ ನಡೆದ ಘಟನೆ ಬಗ್ಗೆ ತಹಶೀಲ್ದಾರ್‍ಗೆ ತಳಿಸಿದ್ದಾರೆ. ಅವರು ಕೂಡಲೆ ಕೂಡ್ಲಿಗಿ ತಾಲೂಕು ವೈದ್ಯಧಿಕಾರಿಗೆ ಕರೆ ಮಾಡಿ ನಾಯಿ ಕಡಿತಕ್ಕೆ ನಿಮ್ಮ ಆಸ್ಪತ್ರೆಯಲ್ಲಿ ಇಂಜಕ್ಷನ್ ಇಲ್ಲವೆ ಎಂದು ಕೇಳಿದ್ದರೆ. ಇಂಜಕ್ಷನ್ ಇದೆ ನಾವೂ ಕೂಡಲೆ ಔಷದಿ ವಿತರಿಸುವ ಸಿಬ್ಬಂದಿಗೆ ಇಂಜಕ್ಷನ್ ನೀಡುವಂತೆ ತಿಳಿಸಿದ್ದಾರೆ.

   ಇಂಜಕ್ಷನ್ ಇಟ್ಟುಕೊಂಡು ಇಲ್ಲ ಎನ್ನುತ್ತಿರಲ್ಲಾ ಎಂದು ಮಗುವಿನ ಪೋಷಕರು ಡಾ. ಸಿಂಧು ಅವರನ್ನು ಪ್ರಶ್ನಿಸಿದ್ದಾರೆ. ನಾನು ಹೊಸದಾಗಿ ಬಂದಿದ್ದೇನೆ. ನನ್ನ ಡ್ಯೂಟಿ ಹೆರಿಗೆ ಮತ್ತು ಸ್ತ್ರೀರೋಗ ಸೀಮಿತ ನಾಯಿ ಕಡಿದರೆ ನಾನು ಏನು ಮಾಡಬೇಕು ಎಂದು ಅಷಢ್ಯ ಮಾತುಗಳನ್ನಾಡಿ ದರು ಎಂದು ಪಾಲಕರು ಪತ್ರಿಕೆಗೆ ತಿಳಿಸಿದ್ದಾರೆ.

   ಚಿಕ್ಕ ಮಕ್ಕಳಾದರೇನೂ, ದೊಡ್ಡವರಾದರೇನೂ, “ವೈದ್ಯವೋ ನಾರಯಣಃ” ಎಂದು ಬರುವ ರೋಗಿಗಳಿಗೆ ಚಿಕಿತ್ಸೆ ನೀಡುವುದ ಅವರ ವೈದ್ಯರ ಆದ್ಯ ಕರ್ತವ್ಯ ಕೊಟ್ಟೂರು ಸರ್ಕಾರಿ ಆಸ್ಪತ್ರೆಯಲ್ಲಿ ಮಾನವಿತೆ ಎಂದು ಮರಿಚಿಕೆಯಾಗಿದೆ ಎಂದು ಸಾರ್ವಜನಿಕರು ಹೇಳುತ್ತಿದ್ದಾರೆ.

      ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link