ಬೆಂಗಳೂರು
ಬಿಟಿಎಂ ಎರಡನೇ ಹಂತದ 26ನೇ ಕ್ರಾಸ್ನಲ್ಲಿ ಬೀದಿನಾಯಿಗಳಿಗೆ ಊಟದಲ್ಲಿ ವಿಷ ಹಾಕಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.
ನಿನ್ನೆ ಸಂಜೆ 7 ಗಂಟೆ ವೇಳೆ ನಾಲ್ಕು ಮಂದಿ ಕಾರಿನಲ್ಲಿ ಬಂದವರು 10ಕ್ಕೂ ಹೆಚ್ಚು ನಾಯಿಗಳಿಗೆ ವಿಷ ಬೆರೆಸಿದ ಊಟ ಹಾಕಿ ಪರಾರಿಯಾಗಿದ್ದಾರೆ. ವಿಷದ ಆಹಾರ ತಿಂದು ಹತ್ತಾರು ನಾಯಿಗಳು ಅಸ್ವಸ್ಥವಾಗಿವೆ.
ಸುದ್ದಿ ತಿಳಿದ ತಕ್ಷಣ ಧಾವಿಸಿದ ಪ್ರಾಣಿದಯಾ ಸಂಘದ ಕಾರ್ಯಕರ್ತರು ಧಾವಿಸಿ ವಿಷ ತಿಂದ ನಾಯಿಗಳ ಸಿಸ್ನಾ ಲೈಫ್ಲೈನ್ ಹಾಸ್ಪಿಟಲ್ಗೆ ಸೇರಿಸಿ ಚಿಕಿತ್ಸೆಗೊಳಪಡಿಸಿದ್ದು ಒಂದು ನಾಯಿ ಸ್ಥಿತಿ ಗಂಭೀರವಾಗಿದ್ದರೆ ಉಳಿದೆಲ್ಲವೂ ಪ್ರಾಣಾಪಾಯದಿಂದ ಪಾರಾಗಿವೆ ಸ್ಥಳಕ್ಕೆ ಮೈಕೋ ಲೇಔಟ್ ಪೊಲೀಸರು ಭೇಟಿ ನೀಡಿ ವಿಷದ ಆಹಾರದ ಸ್ಯಾಂಪಲ್ ಪಡೆದಿದ್ದು, ವಿಷ ಹಾಕಿದ ದುಷ್ಕರ್ಮಿಗಳಿಗಾಗಿ ಹುಡುಕಾಟ ಮುಂದುವರೆಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ