ಕೊರೊನಾ : ಸುಳ್ಳು ಸುದ್ದಿ ಹರಡಿಸಿದ್ರೇ ಕ್ರಮ: ಡಿಸಿ

ಬಳ್ಳಾರಿ
 
    ಕರೊನಾ ವೈರಸ್ ಭೀತಿಗೆ ಭಯಪಡಬೇಡಿ, ಬರೀ ಕೆಮ್ಮು ನೆಗಡಿ ಕಾಣಿಸಿಕೊಂಡರೆ ಅದು ರೋಗ ಬಂದಂತೆ ಅಲ್ಲ ಅದಕ್ಕೆ ಯಾರು ಭಯ ಬೀಳುವ ಅವಶ್ಯಕತೆಯಿಲ್ಲ ಸಂಭಾವಿತ ಕರೊನಾ ವೈರಸ್ ಪರಿಸ್ಥಿತಿಯನ್ನು ಎದುರಿಸಲು ಜಿಲ್ಲಾ ಆರೋಗ್ಯ ಇಲಾಖೆಯು ಸಕಲ ಸಿದ್ದತೆಯನ್ನು ಮಾಡಿಕೊಂಡಿದೆ ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರು ತಿಳಿಸಿದರು.
   ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.ಸೋಂಕು ಪೀಡಿತರ ಸಂಪರ್ಕದಿಂದ ದೂರವಿರಬೇಕು. ಶಂಕಿತ ರೋಗಿಯು ಮನೆಯಲ್ಲಿಯೇ ಪ್ರತ್ಯೇಕವಾಗಿರುವುದು ಮತ್ತು ಟ್ರಿಪಲ್ ಲೇಯರ್ ಮಾಸ್ಕ್ ಬಳಸಬೇಕು. ವೈಯಕ್ತಿಕ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಕೆಮ್ಮುವಾಗ ಮತ್ತು ಸೀನುವಾಗ ಮಾಸ್ಕ್ ಅಥವಾ ಕರವಸ್ತ್ರ ಉಪಯೋಗಿಸಬೇಕು. ಸೋಂಕಿತ ದೇಶಗಳಿಗೆ ಮತ್ತು ತುರ್ತು ಅಗತ್ಯವಿಲ್ಲದ ಪ್ರಯಾಣಗಳಿಗೆ ರದ್ದುಗೊಳಿಸಿ ಎಂದು ಅವರು ಹೇಳಿದರು.ಜಿಲ್ಲೆಗೆ ಆಗಮಿಸುವ ಎಲ್ಲಾ ವೀದೇಶಿಯರು ಹಾಗೂ ಭಾರತಿಯರಲ್ಲಿ ರೋಗದ ಲಕ್ಷಣಗಳು ಇಲ್ಲದಿದ್ದರೂ ಸಹ ಮನೆಯಲ್ಲಿ 14 ದಿನಗಳ ಕಾಲ ಪ್ರತ್ಯೆಕವಾಗಿರಬೇಕು. 
 
    ಜಿಲ್ಲೆಯಲ್ಲಿ ಇದುವರೆಗೆ 10ಜನ ಶಂಕಿತರು ಎಂದು ದಾಖಲಾಗಿದೆ ಅದರಲ್ಲಿ 3ಜನಕ್ಕೆ ನೆಗಟಿವ್ ಎಂದು ಬಂದಿದೆ ಎಂದು ಹೇಳಿದರು. ವಿದೇಶಗಳಿಂದ ಬಂದಂತಹ ವ್ಯಕ್ತಿಗಳಲ್ಲಿ ಫ್ರೆಂಚ್-07, ಜರ್ಮನಿ-9 ಜನರು ನಮ್ಮ ಜಿಲ್ಲೆಯಲ್ಲಿರುತ್ತಾರೆ ಎಂದರು.ಜಿಲ್ಲೆಯಲ್ಲಿ ಯಾವುದೆ ರೀತಿಯ ಈ ಕೊರೊನಾ ರೋಗಕ್ಕೆ ಸಂಬಂಧಪಟ್ಟಂತೆ ಸುಳ್ಳು ಸುದ್ದಿಗಳು, ತಪ್ಪು ಮಾಹಿತಿಗಳನ್ನು ಹಾಗೂ ಈ ರೋಗಕ್ಕೆ ಚಿಕಿತ್ಸೆ ನೀಡಲಾಗುತ್ತದೆ ಎಂದು ಯಾರಾದರು ಸುಳ್ಳು ಸುದ್ದಿಗಳನ್ನು ಹರಡಿಸಿದರೆ ಅಂತಹವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.
    ಹಂಪಿಯಲ್ಲಿ ಒಂದು ವಾರಗಳ ಕಾಲ ಪ್ರವಾಸಿಗರಿಗೆ ಪ್ರವೇಶಕ್ಕೆ ನಿಬರ್ಂಧ: ವಿಶ್ವವಿಖ್ಯಾತ ಪ್ರವಾಸಿ ತಾಣ ಹಂಪಿಯಲ್ಲಿ ಪ್ರವಾಸಿಗರನ್ನು ಒಂದು ವಾರಗಳ ಕಾಲ ಪ್ರವೇಶಕ್ಕೆ ನಿಬರ್ಂಧ ವಿಧಿಸಿ ಜಿಲ್ಲಾ ದಂಡಾಧಿಕಾರಿಗಳಾದ ಡಿಸಿ ಎಸ್.ಎಸ್.ನಕುಲ್ ಅವರು
ಆದೇಶ ಹೊರಡಿಸಿದ್ದಾರೆ.
    ಮಾ.15 ಬೆಳಿಗ್ಗೆ 6 ರಿಂದ ಮಾ.22ರ ಬೆಳಗ್ಗೆ 6ರವರೆಗೆ ಒಂದು ವಾರಗಳ ಕಾಲ ಹಂಪಿಯಲ್ಲಿ ಯಾವುದೇ ಪ್ರವಾಸಿಗರಿಗೆ ಪ್ರವೇಶವಿರುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.ಜಿಲ್ಲೆಯಲ್ಲಿ 1 ರಿಂದ 6ನೇ ತರಗತಿಯವರೆಗೆ ಯಾವುದೆ ಪರೀಕ್ಷೆಗಳಿಲ್ಲದೆ ರಜೆ ಘೋಷಿಸಲಾಗಿದೆ ಹಾಗೂ 7 ರಿಂದ 9 ನೇ ತರಗತಿಯ ವಿದ್ಯಾರ್ಥಿಗಳಿಗೆ ನಿಗದಿ ಪಡಿಸಿದ ದಿನದಂದು ಪರಿಕ್ಷೆಗೆ ಹಾಜರಾಗಲು ಸೂಚಿಸಿದೆ.ಎಸ್ಸೆಸ್ಸೆಲ್ಸಿ, ಪಿ.ಯು.ಸಿ ಪರಿಕ್ಷೆಗಳು ನಿಗದಿತ ದಿನಾಂಕದಂದು ನಡೆಯಲಿವೆ ಎಂದು ಅವರು ತಿಳಿಸಿದರು.
    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link