ರಾಷ್ಟ್ರೀಯ ನಾಟಕೋತ್ಸವಕ್ಕೆ ನಾಟಕಗಳು ಫಿಕ್ಸ್

ಹುಳಿಯಾರು

        ಪಟ್ಟಣದಲ್ಲಿ ತನ್ನ ವಿಭಿನ್ನ ಚಟುವಟಿಕೆಗಳಿಂದ ಹೆಸರಾಗಿರುವ ಹಾಗೂ ಆ ಮೂಲಕ ಹುಳಿಯಾರನ್ನು ರಾಜ್ಯ ಮಟ್ಟದಲ್ಲಿ ಸಾಂಸ್ಕೃತಿಕ ಕೇಂದ್ರವನ್ನಾಗಿ ರೂಪಿಸಿರುವ ಶ್ರೀ ಮಾತಾ ಚಾರಿಟಬಲ್ ಟ್ರಸ್ಟ್ ಈ ಬಾರಿ ರಾಷ್ಟ್ರೀಯ ನಾಟಕೋತ್ಸವದ ಮೂಲಕ ತನ್ನ ಚಟುವಟಿಕೆಯನ್ನು ವಿಸ್ತರಿಸಿದೆ.

        ಹೌದು ಹುಳಿಯಾರಿನ ದ್ಯಾನನಗರಿಯ ಸೇವಾಲಾಲ್ ಸಾಂಸ್ಕೃತಿಕ ಸದನ ಹೆಸರೇ ಹೇಳುವಂತೆ ಕನಿಷ್ಠ ಎರಡು ತಿಂಗಳಿಗೊಮ್ಮೆ ಯಾದರೂ ವಿಶೇಷವಾದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತ ಬಂದಿದೆ. ಚಿತ್ರೋತ್ಸವ, ನೃತ್ಯೋತ್ಸವ ಹೀಗೆ ಸಾಕಷ್ಟು ರೀತಿಯ ಪ್ರದರ್ಶನಗಳನ್ನು ನಡೆಸುತ್ತ ಈ ಬಾರಿ ಬಹುಭಾಷಾ ರಾಷ್ಟ್ರೀಯ ನಾಟಕೋತ್ಸವ ಹಮ್ಮಿಕೊಂಡಿದೆ.

         ಪ್ರತಿಯೊಂದು ಬಾರಿಯೂ ಒಂದೊಂದು ವಿಷಯಾಧಾರವಾಗಿಟ್ಟುಕೊಂಡು ಕಾರ್ಯಕ್ರಮ ನಡೆಸುತ್ತಿದ್ದು ಈ ಬಾರಿ ಬಹುಭಾಷಾ ಸಂಸ್ಕೃತಿಗೆ ಒತ್ತು ನೀಡಿ ವಿವಿಧ ಭಾಷೆಗಳ ನಾಟಕೋತ್ಸವವನ್ನು ಜನವರಿ 27 ರಿಂದ ಹಮ್ಮಿಕೊಂಡಿದೆ. ಫೆಬ್ರವರಿ 1 ರ ವರೆಗೆ ಒಟ್ಟು ಆರು ದಿನಗಳ ಕಾಲ ಕನ್ನಡ, ತಮಿಳು, ಮಲಯಾಳಂ, ಮರಾಠಿ, ತೆಲುಗು, ಕನ್ನಡ ಹೀಗೆ ವಿವಿಧ ಭಾಷೆಗಳ, ವಿವಿಧ ರಾಜ್ಯಗಳ, ಪ್ರಸಿದ್ಧ ತಂಡಗಳು ವಿವಿಧ ವಿಚಾರಗಳಿಗೆ ಒತ್ತು ನೀಡಿ ನಾಟಕ ಪ್ರದರ್ಶನ ನೀಡುತ್ತಿವೆ.

         ಈ ಬಗ್ಗೆ ಹುಳಿಯಾರಿನಲ್ಲಿ ದಕ್ಷಿಣ ವಲಯ ಸಾಂಸ್ಕೃತಿಕ ಕೇಂದ್ರ ತಂಜಾವೂರ್ ಇದರ ಕರ್ನಾಟಕದ ಪ್ರತಿನಿಧಿ ನಂಜುಂಡಸ್ವಾಮಿ ತೊಟ್ಟವಾಡಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ ಶ್ರೀಮಾತಾ ಚಾರಿಟಬಲ್ ಟ್ರಸ್ಟ್ ಹಾಗೂ ದಕ್ಷಿಣ ವಲಯ ಸಾಂಸ್ಕೃತಿಕ ಕೇಂದ್ರ ತಂಜಾವೂರು ಇವರ ಸಹಯೋಗದಲ್ಲಿ ಹುಳಿಯಾರಿನ ಧ್ಯಾನ ನಗರಿಯ ಸಾಂಸ್ಕೃತಿಕ ಸದನದಲ್ಲಿ ಜನವರಿ 27 ರಿಂದ ನ್ಯಾಷನಲ್ ಥಿಯೇಟರ್ ಫೆಸ್ಟಿವಲ್ ನಡೆಯಲಿದೆ. ಪ್ರಥಮವಾಗಿ ಮೈಸೂರಿನ ಜನಮನ ತಂಡದಿಂದ ಸುಮತಿ ಕೆ.ಆರ್ ನಿರ್ದೇಶನದಲ್ಲಿ ಲಂಕೇಶರ ಅಂತಿಗೊನೆ ಪ್ರದರ್ಶನಗೊಳ್ಳುವುದರ ಮೂಲಕ ನಾಟಕೋತ್ಸವ ಚಾಲನೆ ದೊರೆಯಲಿದೆ ಎಂದರು.

         ಜ.28 ರಂದು ತಮಿಳುನಾಡಿನ ಚೆನ್ನೈ ಕಲೈಕುಳು ತಂಡದಿಂದ ಮತ್ವಿವಿಲಾಸ ಪ್ರಹಸನ ಎಂಬ ತಮಿಳು ನಾಟಕ, ಜ.29 ರಂದು ಕೇರಳದ ಕಲಾ ಪಾಠಶಾಲೆ ತಂಡದಿಂದ ಸಿ.ಎಂ.ನಾರಾಯಣ ನಿರ್ದೇಶನದಲ್ಲಿ ಮಲಯಾಳಂನ ಕಾಲಭೈರವಂ ನಾಟಕ, ಜ.30 ರಂದು ಮಹಾರಾಷ್ಟ್ರದ ಥಿಯೇಟರ್ ವರ್ಕ್ ಶಾಪ್ ಕಂಪನಿ ತಂಡದಿಂದ ಮರಾಠಿ ಭಾಷೆಯ ಮಹಾಶೂನ್ಯ ನಾಟಕ ಪ್ರದರ್ಶನಗೊಳ್ಳಲಿದೆ ಎಂದರು.
ಜ.31ರಂದು ತೆಲಂಗಾಣದ ನಿಶುಂಬಿತಾ ತಂಡದಿಂದ ಡಾ.ರಾಮ್ ಮೋಹನ್ ಹೊಲಗುಂದಿ ನಿರ್ದೇಶನದ ತೆಲುಗು ಭಾಷೆಯ ಧರ್ಮವೀರ್ ಭಾರತಿರವರ ಸೃಷ್ಟಿ ಲೋನಿ ಚಿವರಿ ಎಂಬ ನಾಟಕ ಪ್ರದರ್ಶನಗೊಳ್ಳಲಿದೆ. ಕಡೆಯದಾಗಿ ಬೆಂಗಳೂರಿನ ಸಂಚಯ ತಂಡದಿಂದ ಕೃಷ್ಣ ಹೆಬ್ಬಾಲೆ ನಿರ್ದೇಶನದಲ್ಲಿ ಕನ್ನಡ ಭಾಷೆಯ ಕೊಡೋದಿಲ್ಲ-ಬಿಡೋದಿಲ್ಲ ನಾಟಕ ಪ್ರದರ್ಶನಗೊಳ್ಳುವುದರ ಮೂಲಕ ನಾಟಕೋತ್ಸವ ಸಮಾಪ್ತಿಯಾಗಲಿದೆ ಎಂದರು.

         ಈ ಸಂದರ್ಭದಲ್ಲಿ ಶ್ರೀ ಮಾತಾ ಚಾರಿಟಬಲ್ ಟಸ್ಟಿನ ಅಧ್ಯಕ್ಷ ಗಂಗಾಧರ್, ಟ್ರಸ್ಟಿ ಚಂದ್ರಕಲಾ ಗಂಗಾಧರ್, ಚಂದ್ರಶೇಖರ್, ಬ್ಯಾಂಕ್ ಮರುಳಪ್ಪ, ಪಟ್ಟಣ ಪಂಚಾಯ್ತಿ ಉಪಾಧ್ಯಕ್ಷ ಗಣೇಶ್, ಆರ್ಯವೈಶ್ಯ ಮಂಡಳಿ ಅಧ್ಯಕ್ಷ ಎಲ್.ಆರ್.ಚಂದ್ರಶೇಖರ್, ಮಾಜಿ ಅಧ್ಯಕ್ಷ ಎಂ.ಎಸ್.ನಟರಾಜು, ಕರವೇ ಅಧ್ಯಕ್ಷ ಕೋಳಿಶ್ರೀನಿವಾಸ್, ಚಿರುಮುರಿ ಶ್ರೀನಿವಾಸ್, ಹಾರ್ಡ್ ವೇರ್ ಅಸೋಸಿಯೇಷನ್ ಅಧ್ಯಕ್ಷ ಬಸವರಾಜು, ತಾಂಡವಾಚಾರ್, ಗ್ರಾಮ ಪಂಚಾಯಿತಿ ಸದಸ್ಯ ಸೂರಪ್ಪ, ಚಿತ್ರ ನಿರ್ಮಾಪಕ ನಂದಿಹಳ್ಳಿ ಶಿವಣ್ಣ, ರಘು, ಉಪನ್ಯಾಸಕ ನರೇಂದ್ರಬಾಬು, ಎಬಿವಿಪಿ ಗಿರೀಶ್, ಹೊನ್ನಪ್ಪ, ರಮೇಶ್ ಪೂಜಾರಿ, ವ್ಯವಸ್ಥಾಪಕಿ ಕವಿತಾ, ನಯಾಜ್, ಬಾಳೆಕಾಯಿ ಲಕ್ಷ್ಮೀಕಾಂತ್, ಮೊದಲಾದವರು ಪಾಲ್ಗೊಂಡಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap