ಚಳ್ಳಕೆರೆ
ಕಳೆದ ಸುಮಾರು 10 ವರ್ಷಗಳಿಂದ ಈ ಭಾಗದಲ್ಲಿ ಮಳೆಯಾಗದೆ ಬೆಳೆಯಿಲ್ಲದೆ ರೈತ ಸಮುದಾಯ ಸಂಪೂರ್ಣವಾಗಿ ನಷ್ಟ ಅನುಭವಿಸುತ್ತಿದ್ದು, ಕೇಂದ್ರ ಸರ್ಕಾರ ರೈತರ ನೆರವಿಗೆ ದಾವಿಸಬೇಕು ಹಾಗೂ ಹೆಚ್ಚಿನ ಪರಿಹಾರ ಒದಗಿಸಬೇಕೆಂದು ಶಾಸಕ ಟಿ.ರಘುಮೂರ್ತಿ ಅಧ್ಯಯನ ತಂಡಕ್ಕೆ ಮನವಿ ಮಾಡಿದರು.
ಕ್ಷೇತ್ರಕ್ಕೆ ಬರ ಅಧ್ಯಯನ ತಂಡ ಆಗಮಿಸಿದ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಆಗಮಿಸಿದ ಅವರು, ಸಾಣಿಕೆರೆ ಬಳಿ ತಂಡವನ್ನು ಭೇಟಿ ಮಾಡಿ ನಂತರ ದೊಡ್ಡ ಉಳ್ಳಾರ್ತಿ ಗೋಶಾಲೆ ಪ್ರದೇಶದಲ್ಲಿ ಅಧ್ಯಯನ ತಂಡಕ್ಕೆ ಇಲ್ಲಿನ ವಾಸ್ತವ ಸ್ಥಿತಿಯನ್ನು ಅರಿತು ಕೇಂದ್ರ ಸರ್ಕಾರ ಹೆಚ್ಚಿನ ನೆರವನ್ನು ರೈತ ಸಮುದಾಯಕ್ಕೆ ನೀಡಬೇಕಿದೆ.
ಪ್ರಸ್ತುತ ದೊಡ್ಡ ಉಳ್ಳಾರ್ತಿ ಗೋಶಾಲೆಯಲ್ಲಿ ಎಲ್ಲಾ ಜಾನುವಾರುಗಳಿಗೆ ಮೇವನ್ನು ನೀಡಲಾಗುತ್ತಿದೆ. ಹೆಚ್ಚಿನ ಪ್ರಮಾಣದ ಮೇವು ನೀಡುವಂತೆ ರೈತರು ಮನವಿ ಮಾಡಿದ್ದು, ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳುವಂತೆ ತಿಳಿಸಿದರು. ಈ ಭಾಗದಲ್ಲಿ ಎಲ್ಲೂ ಸಹ ಜಾನುವಾರುಗಳಿಗೆ ಮೇವು ನೀರು ದೊರೆಯುತ್ತಿಲ್ಲ, ಗೋಶಾಲೆಯೊಂದೇ ಪರಿಹಾರವಾಗಿದೆ. ಈ ನಿಟ್ಟಿನಲ್ಲಿ ಹೆಚ್ಚಿನ ಪ್ರಮಾಣದ ಮೇವು ಹಾಗೂ ಇತರೆ ಸೌಲಭ್ಯಗಳನ್ನು ನೀಡುವಂತೆ ಮನವಿ ಮಾಡಿದರು.
ಅಧ್ಯಯನ ತಂಡದ ಮುಖ್ಯಸ್ಥರು ಪರಿಶೀಲನೆ ನಡೆಸುವ ಭರವಸೆ ನೀಡಿದರಲ್ಲದೆ ಹೆಚ್ಚು ಬಿಸಿಲಿನ ತಾಪದಿಂದ ತಗಡಿನ ಶೀಟ್ ಕೆಳಗಿನ ಜಾನುವಾರುಗಳು ಬಿಸಿಲಿನ ಶಾಖಕ್ಕೆ ಬಡವಾಗಿ ಅನಾರೋಗ್ಯ ಪೀಡಿತವಾಗುತ್ತವೆ. ಅದ್ದರಿಂದ ಶೆಡ್ ಮೇಲ್ಭಾಗದಲ್ಲಿ ತೆಂಗಿನ ಗರಿಯ ಚಪ್ಪರ ನಿರ್ಮಿಸುವಂತೆ ಸೂಚಿಸಿದರು, ಸಪ್ಪೆ ದಂಟನ್ನು ತುಂಡಿರಿಸಿ ನೀಡುವಂತೆ ಸಲಹೆ ನೀಡಿದರು.
ಶಾಸಕ ಟಿ.ರಘುಮೂರ್ತಿ ಕಳೆದ ಎರಡು ವರ್ಷಗಳ ಅವಧಿಯಲ್ಲಿ ರೈತರ ಬೆಳೆ ವಿಮೆ ಹಣ ಸರಿಯಾಗಿ ಪಾವತಿಯಾಗಿಲ್ಲ, ಈ ವರ್ಷವೂ ಸಹ ರೈತರು ಹೆಚ್ಚಿನ ಪ್ರಮಾಣದಲ್ಲಿ ಬೆಳೆ ವಿಮೆ ಮಾಡಿಸಿದ್ದಾರೆ. ಕೇಂದ್ರ ಸರ್ಕಾರ ಹೆಚ್ಚು ಹಣ ನೀಡಿದಲ್ಲಿ ಅದನ್ನು ರೈತರಿಗೆ ಪ್ರಾಮಾಣಿಕವಾಗಿ ವಿತರಿಸಲಾಗುವುದು, ಬಹುತೇಕ ಕಡೆಗಳಲ್ಲಿ ಬಡ ಜನತೆ ಯಾವುದೇ ಸೌಲಭ್ಯವಿಲ್ಲದೆ ವಂಚಿತರಾಗುತ್ತಿದ್ಧಾರೆ. ರೈತರು ಸಹ ನಿರೀಕ್ಷೆಗೂ ಮೀರಿ ಹೆಚ್ಚು ನಷ್ಟವನ್ನು ಅನುಭವಿಸುತ್ತಿದ್ಧಾರೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದಿಂದ ಹೆಚ್ಚಿನ ನೆರವು ಈ ಭಾಗದ ಜನ ನಿರೀಕ್ಷೆ ಮಾಡುತ್ತಿದ್ಧಾರೆ.
ದಯಮಾಡಿ ಈ ಭಾಗದ ರೈತರಿಗೆ ಹೆಚ್ಚಿನ ಪರಿಹಾರವನ್ನು ಒದಗಿಸುವ ನಿಟ್ಟಿನಲ್ಲಿ ತಂಡ ವರದಿ ನೀಡಬೇಕೆಂದು ಮನವಿ ಮಾಡಿದರು. ಚಳ್ಳಕೆರೆ-27 ಕಳೆದ ಸುಮಾರು 10 ವರ್ಷಗಳಿಂದ ಈ ಭಾಗದಲ್ಲಿ ಮಳೆಯಾಗದೆ ಬೆಳೆಯಿಲ್ಲದೆ ರೈತ ಸಮುದಾಯ ಸಂಪೂರ್ಣವಾಗಿ ನಷ್ಟ ಅನುಭವಿಸುತ್ತಿದ್ದು, ಕೇಂದ್ರ ಸರ್ಕಾರ ರೈತರ ನೆರವಿಗೆ ದಾವಿಸಬೇಕು ಹಾಗೂ ಹೆಚ್ಚಿನ ಪರಿಹಾರ ಒದಗಿಸಬೇಕೆಂದು ಶಾಸಕ ಟಿ.ರಘುಮೂರ್ತಿ ಅಧ್ಯಯನ ತಂಡಕ್ಕೆ ಮನವಿ ಮಾಡಿದರು.
ಕ್ಷೇತ್ರಕ್ಕೆ ಬರ ಅಧ್ಯಯನ ತಂಡ ಆಗಮಿಸಿದ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಆಗಮಿಸಿದ ಅವರು, ಸಾಣಿಕೆರೆ ಬಳಿ ತಂಡವನ್ನು ಭೇಟಿ ಮಾಡಿ ನಂತರ ದೊಡ್ಡ ಉಳ್ಳಾರ್ತಿ ಗೋಶಾಲೆ ಪ್ರದೇಶದಲ್ಲಿ ಅಧ್ಯಯನ ತಂಡಕ್ಕೆ ಇಲ್ಲಿನ ವಾಸ್ತವ ಸ್ಥಿತಿಯನ್ನು ಅರಿತು ಕೇಂದ್ರ ಸರ್ಕಾರ ಹೆಚ್ಚಿನ ನೆರವನ್ನು ರೈತ ಸಮುದಾಯಕ್ಕೆ ನೀಡಬೇಕಿದೆ. ಪ್ರಸ್ತುತ ದೊಡ್ಡ ಉಳ್ಳಾರ್ತಿ ಗೋಶಾಲೆಯಲ್ಲಿ ಎಲ್ಲಾ ಜಾನುವಾರುಗಳಿಗೆ ಮೇವನ್ನು ನೀಡಲಾಗುತ್ತಿದೆ.
ಹೆಚ್ಚಿನ ಪ್ರಮಾಣದ ಮೇವು ನೀಡುವಂತೆ ರೈತರು ಮನವಿ ಮಾಡಿದ್ದು, ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳುವಂತೆ ತಿಳಿಸಿದರು. ಈ ಭಾಗದಲ್ಲಿ ಎಲ್ಲೂ ಸಹ ಜಾನುವಾರುಗಳಿಗೆ ಮೇವು ನೀರು ದೊರೆಯುತ್ತಿಲ್ಲ, ಗೋಶಾಲೆಯೊಂದೇ ಪರಿಹಾರವಾಗಿದೆ. ಈ ನಿಟ್ಟಿನಲ್ಲಿ ಹೆಚ್ಚಿನ ಪ್ರಮಾಣದ ಮೇವು ಹಾಗೂ ಇತರೆ ಸೌಲಭ್ಯಗಳನ್ನು ನೀಡುವಂತೆ ಮನವಿ ಮಾಡಿದರು. ಅಧ್ಯಯನ ತಂಡದ ಮುಖ್ಯಸ್ಥರು ಪರಿಶೀಲನೆ ನಡೆಸುವ ಭರವಸೆ ನೀಡಿದರಲ್ಲದೆ ಹೆಚ್ಚು ಬಿಸಿಲಿನ ತಾಪದಿಂದ ತಗಡಿನ ಶೀಟ್ ಕೆಳಗಿನ ಜಾನುವಾರುಗಳು ಬಿಸಿಲಿನ ಶಾಖಕ್ಕೆ ಬಡವಾಗಿ ಅನಾರೋಗ್ಯ ಪೀಡಿತವಾಗುತ್ತವೆ. ಅದ್ದರಿಂದ ಶೆಡ್ ಮೇಲ್ಭಾಗದಲ್ಲಿ ತೆಂಗಿನ ಗರಿಯ ಚಪ್ಪರ ನಿರ್ಮಿಸುವಂತೆ ಸೂಚಿಸಿದರು, ಸಪ್ಪೆ ದಂಟನ್ನು ತುಂಡಿರಿಸಿ ನೀಡುವಂತೆ ಸಲಹೆ ನೀಡಿದರು.
ಶಾಸಕ ಟಿ.ರಘುಮೂರ್ತಿ ಕಳೆದ ಎರಡು ವರ್ಷಗಳ ಅವಧಿಯಲ್ಲಿ ರೈತರ ಬೆಳೆ ವಿಮೆ ಹಣ ಸರಿಯಾಗಿ ಪಾವತಿಯಾಗಿಲ್ಲ, ಈ ವರ್ಷವೂ ಸಹ ರೈತರು ಹೆಚ್ಚಿನ ಪ್ರಮಾಣದಲ್ಲಿ ಬೆಳೆ ವಿಮೆ ಮಾಡಿಸಿದ್ದಾರೆ. ಕೇಂದ್ರ ಸರ್ಕಾರ ಹೆಚ್ಚು ಹಣ ನೀಡಿದಲ್ಲಿ ಅದನ್ನು ರೈತರಿಗೆ ಪ್ರಾಮಾಣಿಕವಾಗಿ ವಿತರಿಸಲಾಗುವುದು, ಬಹುತೇಕ ಕಡೆಗಳಲ್ಲಿ ಬಡ ಜನತೆ ಯಾವುದೇ ಸೌಲಭ್ಯವಿಲ್ಲದೆ ವಂಚಿತರಾಗುತ್ತಿದ್ಧಾರೆ. ರೈತರು ಸಹ ನಿರೀಕ್ಷೆಗೂ ಮೀರಿ ಹೆಚ್ಚು ನಷ್ಟವನ್ನು ಅನುಭವಿಸುತ್ತಿದ್ಧಾರೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದಿಂದ ಹೆಚ್ಚಿನ ನೆರವು ಈ ಭಾಗದ ಜನ ನಿರೀಕ್ಷೆ ಮಾಡುತ್ತಿದ್ಧಾರೆ. ದಯಮಾಡಿ ಈ ಭಾಗದ ರೈತರಿಗೆ ಹೆಚ್ಚಿನ ಪರಿಹಾರವನ್ನು ಒದಗಿಸುವ ನಿಟ್ಟಿನಲ್ಲಿ ತಂಡ ವರದಿ ನೀಡಬೇಕೆಂದು ಮನವಿ ಮಾಡಿದರು.