ಹಿರಿಯೂರು :
ಗ್ರಾಮೀಣ ಜನರಿಗೂ ಆರೋಗ್ಯ ರಕ್ಷಣೆ ದೊರೆಯಬೇಕೆಂಬ ಉದ್ದೇಶದಲ್ಲಿ ರೋಟರಿ, ಭಾರತೀಯ ರೆಡ್ಕ್ರಾಸ್ಸಂಸ್ಥೆ, ತೋಟಗಾರಿಕಾ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರದ ಎರಡನೇ ದಿನದ ಶಿಬಿರದಲ್ಲಿ ಆರನಕಟ್ಟೆ ಗ್ರಾಮದ ಜನರಿಗಾಗಿ ಉಚಿತ ನೇತ್ರ ತಪಾಸಣೆ ಮತ್ತು ಚಿಕಿತ್ಸಾ ಶಿಬಿರವನ್ನು ನಡೆಸಿರುತ್ತೇವೆ ಎಂಬುದಾಗಿ ರೆಡ್ಕ್ರಾಸ್ ಛೇರ್ಮನ್ ಹೆಚ್.ಎಸ್. ಸುಂದರ್ರಾಜ್ರವರು ತಿಳಿಸಿದರು.
ಆರನಕಟ್ಟೆಗ್ರಾಮದ ಗಣೇಶದೇವಸ್ಥಾನದ ಆವರಣದಲ್ಲಿ ರೆಡ್ಕ್ರಾಸ್ಸಂಸ್ಥೆ, ರೋಟರಿಕ್ಲಬ್, ತೋಟಗಾರಿಕೆ ಮಹಾವಿದ್ಯಾಲಯ, ಸರ್ಕಾರಿ ಸಾರ್ವಜನಿಕ ಆಸ್ಪತ್ರೆ-ಹಿರಿಯೂರು, ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ಉಚಿತ ನೇತ್ರ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ತೋಟಗಾರಿಕಾ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ಅಧಿಕಾರಿ ಪ್ರೋ|| ಡಾ.ಕೆ.ಎಲ್.ಅಶೋಕ್ ಮಾತನಾಡಿ, ನಮ್ಮ ಕಾಲೇಜಿನ ವಿದ್ಯಾರ್ಥಿಗಳಿಂದ ಆರನಕಟ್ಟೆ ಗ್ರಾಮದಲ್ಲಿ ಏಳು ದಿನಗಳು ಈ ಬೇಸಿಗೆ ಸೇವಾ ಶಿಬಿರವನ್ನು ನಡೆಸಲಾಗುವುದು ಪರಿಸರ ರಕ್ಷಣೆ ಆರೋಗ್ಯ ರಕ್ಷಣೆಗಾಗಿ ತಮ್ಮ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿಡುವಂತೆ ಜನರಲ್ಲಿ ಅರಿವು ಮೂಡಿಸಲಾಗುವುದು. ಪ್ರತಿದಿನ ಬೆಳಿಗ್ಗೆ ವಿದ್ಯಾರ್ಥಿಗಳಿಂದ ಯೋಗ ತದನಂತರ ಗ್ರಾಮಸ್ವಚ್ಛತೆ, ಮಾಡಲಾಗುವುದು. ಗ್ರಾಮೀಣ ಜನರ ಆರೋಗ್ಯ ರಕ್ಷಣೆಗಾಗಿ ರೋಟರಿ ರೆಡ್ಕ್ರಾಸ್ ಜೊತೆಗೆ ನೇತ್ರ ತಪಾಸಣಾ ಶಿಬಿರವನ್ನು ನಡೆಸಿರುತ್ತೇವೆ ಎಂದರು.
ಈ ಕಾರ್ಯಕ್ರಮದಲ್ಲಿ ಆರನಕಟ್ಟೆ ಗ್ರಾಮದ ಮುಖಂಡರುಗಳಾದ ಎಂ.ನಾರಾಯಣಸ್ವಾಮಿ, ಎಂ.ರಘುನಾಥ್, ಆರ್.ಕೆ.ಎಂ ಶಾಲೆಯ ಅಧ್ಯಕ್ಷ ಎಸ್.ರಾಮಸ್ವಾಮಿ, ವಾಣಿವಿಲಾಸ ಗ್ರಾಮಾಂತರ ವಿದ್ಯಾಸಂಸ್ಥೆ ಕಾರ್ಯದರ್ಶಿ ಎನ್.ಶಿವಕುಮಾರ್, ತೋಟಗಾರಿಕಾ ವಿದ್ಯಾಲಯ ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಪ್ರೋ.ಕೆ.ಎಲ್.ವಾಸುದೇವ್, ಸ್ಕೌಟ್ಸ್ ಅಂಡ್ ಗೈಡ್ಸ್ ಜಿಲ್ಲಾ ಅಸಿಸ್ಟೆಂಟ್ ಆಯುಕ್ತರಾದ ಶಶಿಕಲಾರವಿಶಂಕರ್, ರೋಟರಿಯ ಕೆ.ಎಸ್.ಮಹಾಬಲೇಶ್ವರಶೆಟ್ಟಿ, ಎಸ್.ಜೋಗಪ್ಪ, ರೆಡ್ಕ್ರಾಸ್ಸಂಸ್ಥೆಯ ದೇವರಾಜ್ಮೂರ್ತಿ, ಪಿ.ಆರ್.ಸತೀಶ್ಬಾಬು, ತೋಟಗಾರಿಕೆ ವಿದ್ಯಾಲಯದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಈ ಆರೋಗ್ಯ ರಕ್ಷಣಾ ಶಿಬಿರದಲ್ಲಿ ಸರ್ಕಾರಿ ಆಸ್ಪತ್ರೆಯ ನೇತ್ರವೈದ್ಯರಾದ ಡಾ||ಎಂ.ಎಂ.ಸಂದೀಪ್ ಸಿಬ್ಬಂದಿಗಳಾದ ಎಲ್.ಮೋಹನ್, ಲತಾ, ತಿಪ್ಪೇಸ್ವಾಮಿ, ಇವರಿಂದ ಸುಮಾರು 75 ಜನರಿಗೆ ತಪಾಸಣೆ ನಡೆಸಿ ಔಷಧಿಗಳನ್ನು ನೀಡಿದರು. ಅವಶ್ಯ 20 ಜನರಿಗೆ ನೇತ್ರ ಚಿಕಿತ್ಸೆಗಾಗಿ ಚಿತ್ರದುರ್ಗದ ಜಿಲ್ಲಾ ಆಸ್ಪತ್ರೆಗೆ ಬರುವಂತೆ ತಿಳಿಸಿದರು.