ನವದೆಹಲಿ
ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ) ?ವೈಬ್ರಂಟ್ ಗೋವಾ ಜಾಗತಿಕ ಪ್ರದರ್ಶನ ಮೇಳ ಮತ್ತು ಶೃಂಗಸಭೆ 2019?ರಲ್ಲಿ 16 ಕಂಪೆನಿಗಳೊಂದಿಗೆ ನವೋದ್ಯಮಗಳು ಸೇರಿದಂತೆ 30 ಒಪ್ಪಂದಗಳಿಗೆ ಸಹಿ ಹಾಕಿದೆ ಎಂದು ರಕ್ಷಣಾ ಸಚಿವಾಲಯ ಶುಕ್ರವಾರ ತಿಳಿಸಿದೆ.
ಗೋವಾದ ತಾಲಿಗಾವೊದ ಗೋವಾ ವಿಶ್ವವಿದ್ಯಾಲಯದಲ್ಲಿ ನಿನ್ನೆಯಿಂದ ಮೂರು ದಿನಗಳ ಪ್ರದರ್ಶನ ಮೇಳ ಮತ್ತು ಶೃಂಗಸಭೆ ನಡೆಯುತ್ತಿದೆ.ಡಿಆರ್ಡಿಒ, ಸಶಸ್ತ್ರ ಪಡೆಗಳಿಗೆ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುತ್ತದೆ. ಅಲ್ಲದೆ, ಸಶಸ್ತ್ರ ಪಡೆಗಳ ಕೊನೆಯ ಹಂತದ ಬಳಕೆಗಾಗಿ ರಕ್ಷಣಾ ಉದ್ಯಮಕ್ಕೆ ಈ ತಂತ್ರಜ್ಞಾನಗಳನ್ನು ನಿರ್ವಹಿಸುತ್ತಿದೆ.
ಡಿಆರ್ಡಿಒನಿಂದ ತಂತ್ರಜ್ಞಾನ ವರ್ಗಾವಣೆಯಡಿ ಕಂಪೆನಿಗಳು ತಯಾರಿಸಿದ ಸಿದ್ಧಪಡಿಸಿದ ಆಹಾರ, ಬದುಕುಳಿಯುವ ಪಡಿತರ ಮತ್ತು ತುರ್ತು ಆಹಾರ ಪಡಿತರ ಉತ್ಪನ್ನಗಳನ್ನು ಭಾರತೀಯ ಸಶಸ್ತ್ರ ಪಡೆಗಳು ಖರೀದಿಸುತ್ತಿವೆ.ಈ ಉತ್ಪನ್ನಗಳು ದುರ್ಗಮ ಭೂಪ್ರದೇಶ ಮತ್ತು ಪ್ರತಿಕೂಲ ಹವಾಮಾನ ಪರಿಸ್ಥಿತಿಗಳಲ್ಲಿ ನಿಯೋಜಿಸಲಾದ ಸಶಸ್ತ್ರ ಪಡೆಗಳ ಅವಶ್ಯಕತೆಗಳನ್ನು ಪೂರೈಸುತ್ತವೆ. ಇವು ಹೆಚ್ಚಿನ ಪೌಷ್ಟಿಕಾಂಶ ಮತ್ತು ಹೆಚ್ಚು ಕಾಲ ಕೆಡದೆ ಇರುತ್ತವೆ. ಈ ತಂತ್ರಜ್ಞಾನಗಳು ಸಮಾಜದ ಹಿತಾಸಕ್ತಿಗೆ ಉಪಯುಕ್ತವಾಗುವಂತೆ ಅಭಿವೃದ್ಧಿ ಪಡಿಸಲಾಗುತ್ತದೆ ಎಂದು ಸಚಿವಾಲಯ ತಿಳಿಸಿದೆ.
ಈ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಿದ ಡಿಆರ್ಡಿಒ ವಿಜ್ಞಾನಿಗಳೊಂದಿಗೆ ಸಂವಹನ ನಡೆಸಲು ಕಂಪೆನಿಗಳಿಗೆ ವೈಬ್ರಂಟ್ ಗೋವಾ ಶೃಂಗಸಭೆ ಅವಕಾಶವನ್ನು ಒದಗಿಸಿತ್ತು.ಸಹಿ ಒಪ್ಪಂದ ಕಾರ್ಯಕ್ರಮವನ್ನು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಉದ್ಘಾಟಿಸಿದರು. ಗೋವಾ ಸರ್ಕಾರದ ಹಿರಿಯ ಅಧಿಕಾರಿಗಳು ಮತ್ತು ಡಿಆರ್ಡಿಒ ವಿಜ್ಞಾನಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
