ಪೊಲೀಸರಿಗೆ ಡಿಕ್ಕಿ ಹೊಡೆದು ಪರಾರಿಯಾಗಲು ಯತ್ನಿಸಿದ ಯುವತಿ ಬಂಧನ.!

ಬೆಂಗಳೂರು

  ಮದ್ಯಪಾನ ಮಾಡಿ ಅಡ್ಡಾದಿಡ್ಡಿ ಸ್ಕೂಟರ್ ಚಲಾಯಿಸುತ್ತಿದ್ದನ್ನು ತಡೆಯಲು ಮುಂದಾದ ಪೊಲೀಸರಿಗೆ ಡಿಕ್ಕಿ ಹೊಡೆದು ಪರಾರಿಯಾಗಲು ಯತ್ನಿಸಿದ ಯುವತಿ ಮತ್ತು ಆಕೆಯ ಮೂವರು ಗೆಳೆಯರನ್ನು ಬಂಡೇಪಾಳ್ಯ ಪೊಲೀಸರು ಬಂಧಿಸಿದ್ದಾರೆ.

   ಕೇರಳ ಮೂಲದ ಯುವತಿ ಹೊಲಿಹ ಫ್ಯಾಂಗ್ ಸೆಫೋರ (26) ಹಾಗೂ ಆಕೆಯ ಗೆಳೆಯರಾದ ಮುನಾವರ್ (26), ಕೋಲ್ಕತ ಮೂಲದ ಅರ್ಜುನ್ (27) ಮತ್ತು ಸೌರವ್ ದಾಸ್ (31) ಬಂಧಿತ ಆರೋಪಿಯಾಗಿದ್ದು ಇವರಲ್ಲರೂ ಸ್ವಿಗ್ಗಿ ಕಂಪನಿಯ ನೌಕರರಾಗಿದ್ದಾರೆ.ಬಂಡೇಪಾಳ್ಯ ಠಾಣೆಯ ಮುಖ್ಯಪೇದೆ ಶಿವಲಿಂಗ ಮತ್ತು ಪೇದೆ ಪ್ರದೀಪ್ ಕಳೆದ ಮಂಗಳವಾರ ರಾತ್ರಿ ಪಾಳಿ ಕರ್ತವ್ಯದಲ್ಲಿದ್ದಾಗ ತಡರಾತ್ರಿ 3.30 ರಲ್ಲಿ ಐಟಿಐ ಲೇಔಟ್‍ನ ಸ್ಮಾಷ್ ಇಟ್ ಬಳಿ ಹೊಲಿಹ, ಅಪಾಯಕಾರಿಯಾಗಿ ಅಡ್ಡಾದಿಡ್ಡಿ ದ್ವಿಚಕ್ರ ವಾಹನ ಚಲಾಯಿಸುತ್ತಿದ್ದಳು.

   ಅದನ್ನು ಗಮನಿಸಿದ ಪೊಲೀಸರು ಆಕೆಯನ್ನು ತಡೆಯಲು ಮುಂದಾದಾಗ ಸ್ಕೂಟರ್‍ನಿಂದ ಡಿಕ್ಕಿ ಹೊಡೆದು ಪರಾರಿಯಾಗಲು ಯತ್ನಿಸಿದ್ದಾಳೆ.ಕೂಡಲೇ ಆಕೆಯನ್ನು ಬೆನ್ನತ್ತಿದ ಪೊಲೀಸರು ಮಂಗಮ್ಮನಪಾಳ್ಯದ ರಸ್ತೆಯಲ್ಲಿ ತಡೆದು ಮಹಿಳಾ ಪೊಲೀಸರು ಸ್ಥಳಕ್ಕೆ ಕರೆಸಿ ಯುವತಿಯನ್ನು ತಪಾಸಣೆ ನಡೆಸಿದಾಗ ಮದ್ಯ ಸೇವಿಸಿರುವುದು ಗೊತ್ತಾಗಿದೆ. ಅದನ್ನು ಪ್ರಶ್ನಿಸುತ್ತಿದ್ದಾಗ ಸ್ಥಳಕ್ಕೆ ಬಂದ ಆಕೆಯ ಮೂವರು ಸ್ನೇಹಿತರು, ಕರ್ತವ್ಯನಿರತ ಪೆÇಲೀಸರಿಗೆ ಅವಾಚ್ಯವಾಗಿ ನಿಂದಿಸಿ ಸಮವಸ್ತ್ರ ಹಿಡಿದು ಎಳೆದಾಡಿದ್ದಾರೆ.

    ಕೂಡಲೇ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.ವಾರ್ಷಿಕೋತ್ಸವ ಅಂಗವಾಗಿ ಸ್ವಿಗ್ಗಿ ಕಂಪನಿಯು ನೌಕರರಿಗೆ ಆಯೋಜಿಸಿದ್ದ ಪಾರ್ಟಿಯಲ್ಲಿ ಪಾಲ್ಗೊಂಡಿದ್ದ ನಾಲ್ವರು ಮದ್ಯ ಸೇವಿಸಿ ಬೈಕ್ ಚಲಾಯಿಸಿ ಗಲಾಟೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

.   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link