ಬೆಂಗಳೂರು
ದುಬಾರಿ ಬಡ್ಡಿ ದಂಧೆ ನಡೆಸುತ್ತಿದ್ದ 5ಕ್ಕೂ ಲೇವಾದೇವಿ ಕಚೇರಿಗಳ ಮೇಲೆ ದಾಳಿ ನಡೆಸಿರುವ ಸಿಸಿಬಿ ಪೊಲೀಸರು 6 ಮಂದಿಯನ್ನು ವಿಚಾರಣೆ ನಡೆಸಿ ನಗದು ಚೆಕ್‍ಗಳು ಇನ್ನಿತರ ದಾಖಲೆ ಪತ್ರಗಳನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಿದ್ದಾರೆ.
ಶಾಂತಿನಗರದ ಲಲೀತ್ ಕಾನೂಗ(52) ಆಶೀಸ್ ಜೈನ್(28)ಸಂಜಯ್ ಸಚ್‍ದೇವ್(35)ಜೆ.ಪಿ.ನಗರದ ಚಂದ್ರು ಅರ್ಜುನ್ ದಾಸ್ ಅಲಿಯಾಸ್ ರಾಜ ಸಾಬ್(55).ಓಂ.ಪ್ರಕಾಶ್ ಸಚ್ಚ್‍ದೇವ್(56)ಹನುಮಂತನಗರದ ಮಾತಾ ಪ್ರಸಾದ್ ತಿವಾರಿ ಅಲಿಯಾಸ್ ರಾಜನ್(34)ನನ್ನು ವಿಚಾರಣೆ ನಡೆಸಲಾಗಿದೆ ಹಣವನ್ನು ಸಾಲವಾಗಿ ನೀಡಿ ನಂತರ 20 ರಿಂದ ಶೇ25 ದುಬಾರಿ ಬಡ್ಡಿಗೆ ಒತ್ತಾಯ ಮಾಡುತ್ತಿದ್ದ ದೂರುಗಳ ಆಧಾರದ ಮೇಲೆ ಏಕಕಾಲದ ದಾಳಿ ನಡೆಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಆಲೋಕ್‍ಕುಮಾರ್ ತಿಳಿಸಿದ್ದಾರೆ.
ಕಲಾಸಿಪಾಳ್ಯದ ಎ.ಎಂ.ರಸ್ತೆಯ ಆಶಿಶ್ ಮೆಟಲ್ಸ್,ಓ.ಟಿ.ಸಿ.ರಸ್ತೆಯ ರಾಜೀವ್ ಪೈನಾನ್ಸ್ ಕಛೇರಿ, ಶಾಂತಿನಗರದ ಲಕ್ಷ್ಮೀರಸ್ತೆಯ ಸಂಜಯ್ ಫೈನಾನ್ಸ್, ರಾಜಾಸಾಬ್ ಫೈನಾನ್ಸ್ ಕಛೇರಿ,ಜೆ.ಪಿ.ನಗರದ 11ನೇ ಬಿ ಕ್ರಾಸ್‍ನ ಸ್ಕಂದ ಎಂಟರ್ ಪ್ರಸೈಸ್,ಡಾಲರ್ಸ್ ಕಾಲೋನಿಯ ವೈಷ್ಣವಿ ಹೊಲ್ಡಿಂಗ್,, ಹನುಮಂತನಗರದ ಹೇಮಲತಾ ಅವರ ಕಛೇರಿಗಳ ಮೇಲೆ ದಾಳಿ ನಡೆಸಲಾಗಿದೆ.
ದಾಳಿಯಲ್ಲಿ 566 ಚೆಕ್‍ಗಳು, ಆನ್ ಡಿಮ್ಯಾಂಡ್ ನೋಟುಗಳು,9,03,200 ನಗದು 3 ಸೇಲ್ ಡೀಡ್‍ಗಳು, 28 ಲೀಸ್ ಅಗ್ರಿಮೆಂಟ್‍ಗಳು,ಲ್ಯಾಪ್‍ಟ್ಯಾಪ್‍ನ್ನು ವಶಪಡಿಸಿಕೊಳ್ಳಲಾಗಿದೆ. ವಶಕ್ಕೆ ಪಡೆದಿರುವ ಲೇವಾದೇವಿಗಾರರು ವ್ಯಾಪಾರಸ್ಥರನ್ನು ಗುರಿಯಾಗಿಸಿಕೊಂಡು ಎಜೆಂಟ್‍ಗಳ ಮೂಲಕ ಅವರುಗಳ ವಹಿವಾಟುಗಳನ್ನು ಪರಿಶೀಲಿಸಿ ಅವರಿಗೆ ಸಾಲವನ್ನು ನೀಡುತ್ತಾರೆ.
7ಲಕ್ಷ 50 ಸಾವಿರಕ್ಕೆ ಸಾಲ ನೀಡಿ ಸಾಲದ ಮೊತ್ತಕ್ಕೆ 5 ಲಕ್ಷ 50 ಸಾವಿರ ಗಳನ್ನು ಮಾತ್ರ ನೀಡಿ, ಪ್ರತಿ ತಿಂಗಳು ತಲಾ ರೂ 75 ಸಾವಿರದಂತೆ ಗಳು ಪಾವತಿಸುವಂತೆ ಭದ್ರತೆಗಾಗಿ 10 ಚೆಕ್‍ಗಳನ್ನು ಪಡೆದುಕೊಂಡು ಸಾಲವನ್ನು ನೀಡುತ್ತಿದ್ದಾಗಿ, ಕ್ರಮೇಣ ಸಾಲ ಪಡೆದ ಸಾಲಗಾರರು, ತೆಗೆದುಕೊಂಡ ಸಾಲದ ಹಣದಲ್ಲಿ 2% ಕಮೀಷನ್‍ನ್ನು ಏಜೆಂಟ್‍ರವರುಗಳಿಗೆ ನೀಡಲಾಗುತ್ತೆ ಎಂದು ವಿಚಾರಣೆಯಲ್ಲಿ ತಿಳಿದುಬಂದಿದೆ.
ಸಾಲಗಾರರು ಪ್ರತಿ ತಿಂಗಳ ಸಾಲವನ್ನು ಮರುಪಾವತಿಸಿದಲ್ಲಿ ಅದಕ್ಕೆ ಸಂಬಂದಿಸಿದ ಚೆಕ್‍ನ್ನು ಸಾಲಗಾರರಿಗೆ ಹಿಂತಿರುಗಿಸುತ್ತಾರೆ. ಒಂದು ವೇಳೆ ನಿಗಧಿತ ಸಮಯದಲ್ಲಿ ಸಾಲವನ್ನು ಮರುಪಾವತಿಸದೆ ಇದ್ದಲ್ಲಿ, ಅವರುಗಳ ವ್ಯಾಪಾರ/ಮನೆಗಳ ಹತ್ತಿರ ಎಜೆಂಟ್‍ಗಳನ್ನು ಕಳುಹಿಸಿ ಬೆದರಿಕೆ ಹಾಕಿ ಹಣವನ್ನು ವಸೂಲು ಮಾಡಲಾಗುತ್ತಿತ್ತು ಎನ್ನುವುದು ತನಿಖೆಯಲ್ಲಿ ಕಂಡುಬಂದಿದೆ.
ವ್ಯವಹಾರವನ್ನು ನಡೆಸಲು ನೊಂದಣಿ ಮಾಡಿಕೊಂಡಿದ್ದು, ಅದರಂತೆ ನಿಯಮಗಳ ಅನುಸಾರ ವ್ಯವಹಾರವನ್ನು ನಡೆಸದೆ, ಸಾಲಗಾರರಿಂದ ಪಡೆಯಲಾಗಿದ್ದ ಚೆಕ್‍ಗಳನ್ನು ನಮ್ಮೊಂದಿನ ವ್ಯವಹಾರದ ಸಂಬಂಧ ನೀಡಿರುವ ಚೆಕ್‍ಗಳಾಗಿವೆಯೇ ಹೊರತು ಇವು ಯಾವುದೇ ಸಾಲದ ವಿರುದ್ಧ ಅಥವಾ ಹಣಕಾಸಿನ ಸಂಬಂಧ ಪಡೆದಿರುವ ಚೆಕ್‍ಗಳು ಆಗಿರುವುದಿಲ್ಲ ಎಂದು ಬಿಂಬಿಸಿ ಆ ಚೆಕ್‍ಗಳನ್ನು ವ್ಯವಹಾರದ ಖಾತೆಗಳಲ್ಲಿ ಹಾಕಿ ಡ್ರಾ ಮಾಡಿಕೊಳ್ಳುತ್ತಿದ್ದು, ಈ ಚೆಕ್‍ಗಳು ಬೌನ್ಸ್ ಆದ್ದಲ್ಲಿ ಪ್ರಕರಣ ದಾಖಲಿಸುತ್ತಿರುತ್ತಿದ್ದಾಗಿ ಸಹ ತಿಳಿದುಬಂದಿರುತ್ತದೆ.
ಒಂದು ವೇಳೆ ಸಾಲಗಾರರು ಸಾಲವನ್ನು ಮರುಪಾವತಿಸಿದರೂ ಸಹಾ ಭದ್ರತೆಗಾಗಿ ನೀಡಲಾಗಿದ್ದ ಚೆಕ್‍ಗಳನ್ನು ಹಾಗೂ ಆನ್ ಡಿಮ್ಯಾಂಡ್ ನೋಟ್‍ಗಳನ್ನು ಹಿಂತಿರುಗಿಸದೇ ವಂಚಿಸುತ್ತಿದ್ದರು ಕಾನೂನು ಬಾಹಿರವಾಗಿ ನಡೆಸುತ್ತಿದ್ದ ಹಣಕಾಸಿನ ವ್ಯವಹಾರವನ್ನು ಮರೆಮಾಚುತ್ತಿದ್ದು ಕೇವಲ ವ್ಯವಹಾರದ ವ್ಯಾಪಾರ ವಹಿವಾಟ ಅನ್ನು ನಡೆಸುತ್ತಿದ್ದೇವೆ ಎಂಬುದಾಗಿ ಸಾರ್ವಜನಿಕವಾಗಿ ಬಿಂಬಿಸಿ ಈ ರೀತಿಯ ಅಕ್ರಮ ದಂಧೆಯನ್ನು ನಡೆಸುತ್ತಿರುವುದು ತನಿಖೆಯಿಂದ ತಿಳಿದು ಬಂದಿರುತ್ತದೆ. ಆಸಾಮಿಗಳು ಈ ವ್ಯವಹಾರವನ್ನು ನಡೆಸಲು ಸಂಬಂದಪಟ್ಟ ಪ್ರಾಧಿಕಾರದಿಂದ ಪರವಾನಗಿಯನ್ನು ಪಡೆದಿರುವುದಿಲ್ಲ ವಿಚಾರಣೆ ನಡೆಸಿದ ಲೇವಾದೇವಿಗಾರರ ವಿರುದ್ಧ ಸಿಟಿಮಾರ್ಕೇಟ್,ಪುಟ್ಟೇನಹಳ್ಳಿ ಹಾಗೂ ಕೋಣನಕುಂಟೆ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ.