ಬಿರುಗಾಳಿ ಮಳೆಗೆ ಧರೆಗುರುಳಿದ ವಿದ್ಯುತ್ ಕಂಬಗಳು

ಎಂ ಎನ್ ಕೋಟೆ :

     ಗುಬ್ಬಿ ತಾಲ್ಲೂಕಿನ ತ್ಯಾಗಟೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಲ್ಲುಕೋಡಿ ಹೋಗುವ ರಸ್ತೆಯಲ್ಲಿ ಭಾರಿ ಬೀರು ಗಾಳಿ ಮಳೆಗೆ ವಿದ್ಯುತ್ ಕಂಬಗಳು ಧರೆಗೆ ಉರುಳಿದೆ.

      ಕಳೆದ ರಾತ್ರಿ ಸುರಿದ ಭಾರಿ ಮಳೆ ಗುಬ್ಬಿ ತಾಲ್ಲೂಕಿನ ಹಾಗಲವಾಡಿ, ನಿಟ್ಟೂರು ಹೋಬಳಿಯಲ್ಲಿ ಉತ್ತಮ ಮಳೆಯಾಗಿದೆ.ಮುಂಗಾರು ಪ್ರಾರಂಭವಾಗುವ ಮುನ್ನವೇ ವರುಣ ಕೃಪೆ ತೋರಿರುವುದು ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ.ತ್ಯಾಗಟೂರು,ಮುದ್ದಪುರ,ಅದಲಗೆರೆ ಗ್ರಾಮಗಳಲ್ಲಿ ಉತ್ತಮ.ಮಳೆಯಾಗಿದೆ.ಕೆಲವು ಹಳ್ಳಿಗಳಲ್ಲಿ ಬೀರು ಗಾಳಿ ಎದ್ದು ಮರಗಿಡಗಳು ಧರೆಗೆ ಉರುಳಿದೆ.ತ್ಯಾಗಟೂರು ನಿಟ್ಟೂರು ರಸ್ತೆಯಲ್ಲಿ ಗಾಳಿ ಮಳೆಗೆ ಮರ ಗಿಡಗಳು ಧರೆ.ಉರುಳಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ