ಬೆಂಗಳೂರು
ಸಮಾಜ ಸ್ವಾಸ್ತ್ಯ ಹಾಳು ಮಾಡುತ್ತಿರುವ ಪ್ರಕರಣದ ಹಿನ್ನಲೆಯಲ್ಲಿ ನಟ ದುನಿಯಾ ವಿಜಯ್ ಅವರು ಕುಟುಂಬ ಸಮೇತ ಬುಧವಾರ ಬೆಳಿಗ್ಗೆ ಗಿರಿನಗರ ಪೊಲೀಸ್ ಠಾಣೆಗೆ ಆಗಮಿಸಿ ದಕ್ಷಿಣ ವಿಭಾಗದ ಡಿಸಿಪಿ ಅಣ್ಣಾಮಲೈ ಎದುರು ವಿಚಾರಣೆಗೆ ಹಾಜರಾದರು. ದುನಿಯಾ ವಿಜಿ ಪತ್ನಿ ಕೀರ್ತಿ ಗೌಡಪುತ್ರ ಸಾಮ್ರಾಟ್ ಜೊತೆ ತಂದೆ-ತಾಯಿ ವಿಚಾರಣೆಗೆ ಹಾಜರಾಗಿ ಹೇಳಿಕೆ ನೀಡಿ ಮುಂದೆ ಯಾವುದೇ ರೀತಿಯಲ್ಲಿ ಸಮಾಜ ಸ್ವಾಸ್ತ್ಯ ಹಾಳು ಮಾಡುತ್ತಿರುವ ಕೃತ್ಯಗಳಲ್ಲಿ ಭಾಗಿಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಸಮಾಜ ಸ್ವಾಸ್ತ್ಯ ಹಾಳು ಮಾಡುವ ವರ್ತನೆ ಬಿಟ್ಟು ಉತ್ತಮ ಜೀವನ ನಡೆಸಬೇಕು ಮುಂದೆ ಜಗಳ ಮಾಡಿಕೊಂಡು ದೂರು ಪ್ರತಿದೂರು ನೀಡಲು ಬಂದರೆ ಮುಲಾಜಿಲ್ಲದೆ ಬಂಧಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸಿನೆಮಾ ನಟರಾಗಿ ಸಾಮಾಜಿಕ ಜೀವನದಲ್ಲಿರುವವರು ಇತರರಿಗೆ ಮಾದರಿಯಾಗಬೇಕು ಅದನ್ನು ಬಿಟ್ಟು ಜಗಳ ಮಾಡಿಕೊಂಡು ನಗೆ ಪಾಟೀಲಿಗೆ ಈಡಾಗಬೇರದು ಮಾದರಿ ಜಗಲ ಕಿತ್ತಾಟಬಿಟ್ಟು ಮಾದರಿ ಜೀವನ ನಡೆಸುವಂತೆ ಸಲಹೆ ನೀಡಿದರು ಎಂದು ಮೂಲಗಳು ತಿಳಿಸಿವೆ. ವಿಚಾರಣೆ ಬಳಿಕ ಮಾಧ್ಯಮದ ಎದುರು ಮಾತನಾಡಿದ ವಿಜಿ, ಅಣ್ಣಾ ಮಲೈ ಖಡಕ್ ಹಾಗೂ ಪ್ರಾಮಾಣಿಕ ಪೊಲೀಸ್ ಅಧಿಕಾರಿ. ಅವರ ಬಗ್ಗೆ ತುಂಬಾ ಗೌರವವಿದೆ.
ಮುಂದೆ ನಾವು ಸಾರ್ವಜನಿಕರ ಹಾಗೂ ಕಾನೂನಿನ ವಿರುದ್ಧ ನಡೆದುಕೊಳ್ಳುವುದಿಲ್ಲ ಎಂದು ಹೇಳಿದರು. ಇನ್ನು ಸಮಾಜ ಸ್ವಾಸ್ತ್ಯ ಹಾಳು ಮಾಡುತ್ತಿರುವ ಹಿನ್ನೆಲೆಯಲ್ಲಿ ಗಿರಿನಗರ ಠಾಣೆಯಲ್ಲಿ ನಾಗರತ್ನ ಹಾಗೂ ದುನಿಯ ವಿಜಿ ಮೇಲೆ 107 ಸೆಕ್ಷನ್ ಹಾಕಿ, ವಿಚಾರಣೆಗೆ ಹಾಜರಾಗುವಂತೆ ವಿಜಿ ದಂಪತಿಗೆ ನೋಟಿಸ್‍ನೀಡಿದ್ದರು. ಇದೀಗ ಪೊಲೀಸರ ಆದೇಶದಂತೆ ಇಂದು ಠಾಣೆಗೆ ಆಗಮಿಸಿದ ವಿಜಿ ಪೊಲೀಸರ ವಿಚಾರಣೆ ಎದುರಿಸಿದರು. ಬಂಧನದ ಭೀತಿಯಲ್ಲಿರುವ ವಿಜಿ ಮೊದಲ ಪತ್ನಿ ನಾಗರತ್ನ ಅವರು ನಿರೀಕ್ಷಣಾ ಜಾಮೀನಿಗಾಗಿ ಅರ್ಜಿ ಸಲ್ಲಿಸಿ ತಲೆಮರೆಸಿಕೊಂಡಿದ್ದು ಅವರ ಪತ್ತೆಗೆ ಶೋಧ ನಡೆಸಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








