ಬೆಂಗಳೂರು:
ಅಕ್ಟೋಬರ್ 4 ರಂದು ವಿಧಾನಪರಿಷತ್ತು ಉಪಚುನಾವಣಾ ನಡೆಯಲಿದ್ದು, ಈ ಚುನಾವಣಾ ಕಣದಿಂದ ಹಿಂದೆ ಸರಿಯಲು ವಿಪಕ್ಷ ಬಿಜೆಪಿ ನಿರ್ಧರಿಸಿದೆ.
112 ಸಂಖ್ಯಾ ಬಲದ ಅವಶ್ಯಕತೆ ಇದ್ದು, 104 ಸಂಖ್ಯಾ ಬಲ ಹೊಂದಿರುವ ಬಿಜೆಪಿ ಇನ್ನೂ 8 ಸಂಖ್ಯಾ ಬಲದ ಕೊರತೆಯಿಂದಾಗಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸದಿರಲು ತೀರ್ಮಾನಿಸಿದೆ.
ಈ ವಿಧಾನಪರಿಷತ್ತು ಉಪಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ ಇಬ್ಬರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, ಇದರಲ್ಲಿ, ಎಂ.ಸಿ.ವೇಣುಗೋಪಾಲ್ ಮತ್ತು ನಸೀರ್‍ಅಹಮದ್ ಅವರುಗಳು ಬೆಂಗಳೂರಿನ ವಿಧಾನಸೌಧದ ಒಂದನೇ ಮಹಡಿಯಲ್ಲಿ ಚುನಾವಣಾಧಿಕಾರಿ ಎಂ.ಎಸ್.ಕುಮಾರಸ್ವಾಮಿಗೆ ನಾಮಪತ್ರಗಳನ್ನು ಸಲ್ಲಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
