ಬಳ್ಳಾರಿ ತಹಸೀಲ್ದಾರ್ ದಿಢೀರ್ ಕಾರ್ಯಾಚರಣೆ : ಮುಂಡರಗಿಯಲ್ಲಿ ನಕಲಿ ವೈದ್ಯರು ವಶಕ್ಕೆ

ಬಳ್ಳಾರಿ

      ಬಳ್ಳಾರಿ ತಹಶೀಲ್ದಾರ್ ನಾಗರಾಜ ಹಾಗೂ ತಾಲೂಕು ಆರೋಗ್ಯ ಇಲಾಖೆ ಅಧಿಕಾರಿ ಅಬ್ದುಲ್ಲಾ ನೇತೃತ್ವದ ತಂಡ ಬಳ್ಳಾರಿ ತಾಲೂಕಿನ ಮುಂಡರಗಿಯಲ್ಲಿ ಗುರುವಾರ ಕಾರ್ಯಾಚರಣೆ ನಡೆಸಿ ಓರ್ವ ನಕಲಿ ವೈದ್ಯರನ್ನು ಪತ್ತೆ ಹಚ್ಚಿ, ಅವರು ನಡೆಸುತ್ತಿದ್ದ ಕ್ಲಿನಿಕ್ ಸೀಜ್ ಮಾಡಲಾಗಿದೆ. ಇವರ ಮೇಲೆ ಪ್ರಕರಣ ದಾಖಲಿಸುವಂತೆ ಬಳ್ಳಾರಿ ಗ್ರಾಮೀಣ ಪೊಲೀಸರ ವಶಕ್ಕೆ ನೀಡಲಾಗಿದೆ.

    ಮುಂಡರಗಿಯಲ್ಲಿ ಸೋಮಶೇಖರ್ ಎನ್ನುವ ಆರ್.ಎಂ.ಪಿ ಡಾಕ್ಟರ್ ನಕಲಿ ಪ್ರಮಾಣಪತ್ರ ಮತ್ತು ನಕಲಿ ಐಡಿ ಕಾರ್ಡ್ ಇಟ್ಟುಕೊಂಡು ಜನರಿಗೆ ಚಿಕಿತ್ಸೆ ನೀಡುತ್ತಿದ್ದ, ಸ್ಟೀರಾಯ್ಡ್ ಬಳಸುತ್ತಿದ್ದ ಮತ್ತು ಓವರ್ ಡೋಸ್ ಕೋಡ್ತಾ ಇರುವುದು ತನಿಖೆ ವೇಳೆ ಕಂಡುಬಂದಿದೆ ಎಂದು ತಹಶೀಲ್ದಾರ್ ನಾಗರಾಜ ಅವರು ತಿಳಿಸಿದ್ದಾರೆ.

      ಕರ್ನಾಟಕ ಮೆಡಿಕಲ್ ಅಸೋಸಿಯೇಶನ್ ಸಂಬಂಧಿಸಿದ ಯಾವುದೇ ಪ್ರಮಾಣಪತ್ರ ಕಾರ್ಯಾಚರಣೆ ನಡೆಸಿದ ಸಂದರ್ಭದಲ್ಲಿ ಕಂಡುಬಂದಿಲ್ಲ ಎಂದು ತಹಸೀಲ್ದಾರ್ ನಾಗರಾಜ ಅವರು ವಿವರಿಸಿದ್ದಾರೆ.ನಕಲಿ ವೈದ್ಯ ಸೋಮಶೇಖರ್ ಅವರನ್ನು ಬಳ್ಳಾರಿ ಗ್ರಾಮೀಣ ಪೊಲೀಸರ ವಶಕ್ಕೆ ನೀಡಲಾಗಿದ್ದು, ಪ್ರಕರಣ ದಾಖಲಿಸುವಂತೆ ಸೂಚಿಸಲಾಗಿದೆ ಎಂದು ತಹಸೀಲ್ದಾರ್ ಅವರು ತಿಳಿಸಿದ್ದಾರೆ.ಈ ಕಾರ್ಯಾಚರಣೆಯಲ್ಲಿ ಕಂದಾಯ ಇಲಾಖೆಯ ಆರ್‍ಐಗಳು ಮತ್ತು ವಿಎಗಳು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link