ಹುಳಿಯಾರು:
ಹುಳಿಯಾರು ಹೋಬಳಿಯ ಗೌಡಗೆರೆ ಶ್ರೀದುರ್ಗಮ್ಮನವರ 30 ನೇ ವರ್ಷದ ಜಾತ್ರಾಮಹೋತ್ಸವ ಅಂಗವಾಗಿ ಗುರುವಾರ ಏರ್ಪಡಿಸಿದ್ದ ಕಳಸೋತ್ಸವವು ಯಶಸ್ವಿಯಾಗಿ ನಡೆಯಿತು.ಬುಧವಾರ ರಾತ್ರಿ ಕೆಂಕೆರೆ ಕಾಳಮ್ಮ, ಹುಳಿಯಾರು ದುರ್ಗಮ್ಮ, ದಮ್ಮಡಿಹಟ್ಟಿ ಈರಬೊಮ್ಮಕ್ಕದೇವಿ, ಕೆ.ಸಿ.ಪಾಳ್ಯದ ಅಂತರಗಟ್ಟೆ ದುರ್ಗಮ್ಮದೇವಿ ದೇವರುಗಳು ಆಗಮನ ನಂತರ ಕೂಡು ಬೇಟಿ ಕಾರ್ಯಕ್ರಮವು ಶ್ರದಾಭಕ್ತಿಯಿಂದ ನೆರವೇರಿಸಲಾಯಿತು.
ಗುರುವಾರ ಬೆಳಿಗಿನ ಜಾವ ಮಜ್ಜನ ಬಾವಿಯಿಂದ ಹರಕೆ ಹೊತ್ತ ಹೆಣ್ಣು ಮಕ್ಕಳ 40 ಕಳಶದ ನೆಡೆಮುಡಿ ಉತ್ಸವ ನಡೆಸಲಾಯಿತು. ಶ್ರೀ ದುರ್ಗಮ್ಮ ದೇವರೊಂದಿಗೆ ವಿವಿಧ ದೇವರುಗಳು ನಾದಸ್ವರ ಕುಣಿತದೂಂದಿಗೆ ಮೂಲಸ್ಥಾನಕ್ಕೆ ದಯಾಮಾಡಿಸಿದವು. ನಂತರ ಮಹಾಮಂಗಳಾರತಿ, ಪ್ರಸಾದ ವಿನಿಯೋಗ ನಡೆಸಲಾಯಿತು.
ಗೌಡಗೆರೆ ಮಜುರೆಯ ಕುರಿಹಟ್ಟಿ. ಕೋಡಿಪಾಳ್ಯ, ಕೆ.ಸಿ.ಪಾಳ್ಯ, ಲಿಂಗಪ್ಪನಪಾಳ್ಯ ಕೆಂಕೆರೆ. ದಸೂಡಿ, ಬೆನಕನಹಳ್ಳಿ ಹೂಸದುರ್ಗ ತಾಲ್ಲೋಕು ಸುತ್ತಮುತ್ತಲ ಗ್ರಾಮಸ್ಥರು ದೇವಸ್ಥಾನದ ಧರ್ಮದರ್ಶಿಗಳು, ಕನ್ವಿನಿಯರ್ ಹಾಗೂ ಸಮಿತಿ ಸದಸ್ಯರು ಗ್ರಾಮಸ್ಥರು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.