ದಾವಣಗೆರೆ ಜಿ.ಪಂ ಗೆ ದೀನದಯಾಳ್ ಉಪಾಧ್ಯಾಯ ಪುರಸ್ಕಾರ

ದಾವಣಗೆರೆ

     2017-18 ನೇ ಸಾಲಿನ ರಾಷ್ಟ್ರೀಯ ದೀನ್ ದಯಾಳ್ ಉಪಾಧ್ಯಾಯ ಪಂಚಾಯತ್ ಸಶಕ್ತೀಕರಣ ಪುರಸ್ಕಾರವನ್ನು ದಾವಣಗೆರೆ ಜಿಲ್ಲಾ ಪಂಚಾಯತ್‍ಗೆ ನೀಡಲಾಗಿದೆ.ಜಿಲ್ಲೆಯ ಗ್ರಾಮ ಪಂಚಾಯತ್, ತಾಲ್ಲೂಕು ಪಂಚಾಯತ್ ಹಾಗೂ ಜಿಲ್ಲಾ ಪಂಚಾಯತ್ ಹಾಗೂ ಸಂಬಂಧಿತ ಇಲಾಖೆಗಳು ಸಾಧಿಸಿರುವ ಒಟ್ಟಾರೆ ಪ್ರಗತಿಯನ್ನು ಪರಿಗಣಿಸಿ ರಾಜ್ಯದಲ್ಲಿ ಒಂದು ಜಿಲ್ಲೆಗೆ ಈ ಪ್ರಶಸ್ತಿ ನೀಡಲಾಗಿದೆ.

     ಈ ಸಾಲಿನಲ್ಲಿ ದಾವಣಗೆರೆ ಕೇಂದ್ರ ತಂಡ ಭೇಟಿ ನೀಡಿದ್ದು, ಜಿಲ್ಲಾ ಪಂಚಾಯತ್ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಪೋಷಣ್ ಅಭಿಯಾನ, ಅಂಗನವಾಡಿ ಮಕ್ಕಳಿಗೆ ಪೌಷ್ಠಿಕ ಆಹಾರ, ಕಲಿಕೆ ಈ ಎಲ್ಲಾ ಮಾನದಂಡಗಳನ್ನು ಸಮಗ್ರವಾಗಿ ಸಂಗ್ರಹಿಸಿ ವರದಿ ತಯಾರಿಸಿದ್ದು ಅದರ ಆಧಾರದಲ್ಲಿ ಜಿಲ್ಲೆ 1ನೇ ಸ್ಥಾನದಲ್ಲಿದ್ದ ಹಿನ್ನೆಲೆಯಲ್ಲಿ ಡಿ.22 ರಂದು ಬೆಂಗಳೂರಿನ ಗಾಂಧಿ ಭವನದಲ್ಲಿ ಕರ್ನಾಟಕ ಪಂಚಾಯತ್ ರಾಜ್ ಪರಿಷತ್‍ನ ಸಂಸ್ಥಾಪನಾ ದಿನಾಚರಣೆಯಲ್ಲಿ ದಾವಣಗೆರೆ ಜಿ.ಪಂ ಅಧ್ಯಕ್ಷರಾದ ಯಶೋಧಮ್ಮ ಮರುಳಸಿದ್ದಪ್ಪ ಹಾಗೂ ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಪದ್ಮ ಬಸವಂತಪ್ಪ ಪ್ರಶಸ್ತಿ ಸ್ವೀಕರಿಸಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link