ಹೊಸಪೇಟೆ
ಪ್ರತಿಯೊಬ್ಬರಲ್ಲಿ ಸಹಕಾರ ತತ್ವ ಇದ್ದಲ್ಲಿ ಮಾತ್ರ ಆರ್ಥಿಕ ಅಭಿವೃದ್ದಿ ಹೊಂದಲು ಸಾದ್ಯವಾಗುತ್ತದೆ ಎಂದು ನಿವೃತ್ತ ಕೃಷಿ ವಿಜ್ಞಾನಿ ವಿ. ಎಸ್. ವೀರಣ್ಣನವರು ಅಭಿಪ್ರಾಯ ಪಟ್ಟರು.
ಇಲ್ಲಿನ ಪ್ರಸನ್ನ ವಿವಿದೋದ್ದೇಶ ಸೌಹಾರ್ದ ಸಹಕಾರ ನಿ. ಇದರ 8ನೇ ಸರ್ವ ಸದಸ್ಯರ ಮಹಾಜನ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಾಂಸ್ಥಿಕ ರೂಪದಲ್ಲಿ ಅಥವಾ ಚೌಕಟ್ಟು ಬದ್ದವಾಗಿ ವಿದೇಶದಲ್ಲಿ ಸಹಕಾರ ಚಳುವಳಿ ಹುಟ್ಟಿದರೂ ಸಹ ಇದರ ಮೂಲ ಬೇರನ್ನು ಹುಡುಕುತ್ತಾ ಬಂದಲ್ಲಿ ಅದು ಭಾರತದಲ್ಲಿಯೇ ಕಾಣುತ್ತದೆ. ಏಕೆಂದರೆ ವಿನಿಮಯ ಪದ್ದತಿಯಿಂದ ಸಹಕಾರ ತತ್ವದಲ್ಲಿಯೇ ಭಾರತದಲ್ಲಿನ ಜನರು ತಮ್ಮ ವ್ಯವಹಾರ ನಡೆಸುತ್ತಿದ್ದರು ಎಂದರು.
ಸಂಘದ ಅಧ್ಯಕ್ಷ ಅನಿಲ್ ಜೋಶಿ ಮಾತನಾಡಿ, ಲಾಭಾಂಶವನ್ನು ವಿಂಗಡಿಸಿ ತನ್ನ ಎಲ್ಲಾ ಶೇರುದಾರರಿಗೆ ಶೇ 19% ರ ಲಾಭಾಂಶವನ್ನು ಘೋಷಣೆ ಮಾಡಿದರು. ಜೊತೆಗೆ 8 ವರ್ಷಗಳ ನಡೆದು ಬಂದ ಹಾದಿಯನ್ನು ಈ ಸಂಧರ್ಭದಲ್ಲಿ ವಿವರಿಸಿದರು,
ಈ ಸಂಧರ್ಭದಲ್ಲಿ ಹಿರಿಯ ಸಹಕಾರಿ ದುರೀಣ ಹೆಚ್ ಶಾಂತನ ಗೌಡ, ಪ್ರಸನ್ನ ಯುವ ಮಂಡಳಿಯ ಗೌಳಿ ನಟರಾಜ, ಸಂಘದ ಉಪಾಧ್ಯಕ್ಷ ಜಿ. ಸತ್ಯನಾರಾಯಣ ಶೆಟ್ಟಿ, ನಿರ್ದೇಶಕರುಗಳಾದ ಚಿರಂಜೀವಿ, ವಿಶ್ವನಾಥ, ಡಿ.ರವಿ, ಪಿ. ಈರಣ್ಣ, ಗುರುರಾಜ ಕುಲಕರ್ಣಿ, ಸುಮ ಶ್ರೀಪಾದ, ಅನುಸೂಯ, ಸಿಬ್ಬಂದಿಗಳಾದ ಶಿರೀಷಾ, ನಾಗರಾಜ, ವಿಜಯಕುಮಾರ್ ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2018/09/24hpt02.gif)