ಸಂಭ್ರಮ ದಿಂದ ಜರುಗಿದ ಈದ್ ಮಿಲಾದ್

ಸಿರಿಗೇರಿ 

          ಹಜರತ್ ಮಹಮ್ಮದ್ ಪೈಗಂಬರ್ ರವರ ಜನ್ಮ ದಿನದ ಈದ್ ಮಿಲಾದ್ ದಿನಾಚರಣೆ ನಿಮಿತ್ತ ಸಿರಿಗೇರಿ ಗ್ರಾಮದ ಮುಸ್ಲಿಂ ಭಾಂಧವರು ಹಾಗೂ ಗ್ರಾಮಸ್ತರ ನೇತೃತ್ವದಲ್ಲಿ ಬುಧವಾರ ನಾನಾ ಸ್ಥಬ್ದ ಚಿತ್ರದೊಂದಿಗೆ ವಿಶೇಷವಾಗಿ ವಿಜೃಂಬಣೆಯಿಂದ ಮೆರವಣಿಗೆ ನಡೆಸಿದರು.

         ಪ್ರಾರಂಭದಲ್ಲಿ ಜನತಾ ಕಾಲೋನಿಯ ಮುಸ್ಲಿಂ ದರ್ಗಾದಿಂದ ಹೊರಟ ಮೆರವಣಿಗೆ ಅಗಸೆಯಿಂದ ಹಾದು ಮರಳಿ ಮೂಲ ಸ್ಥಾನ ತಲುಪಿ ಮುಸ್ಲಿಂ ಮಸೀದಿ ಬಳಿ ಸಮಾವೇಶಗೊಂಡಿತು.

         ಈ ಸಂಧರ್ಭದಲ್ಲಿ ಮಾತನಾಡಿದ ಹಿರಿಯ ಮುಖಂಡ ಅಹಮ್ಮದ್ ಸಾಬ್ ‘’ಭಾರತ ದೇಶವೆಂಬುದು ಸರ್ವಧರ್ಮೀಯರನ್ನು ಒಳಗೊಂಡ ಪ್ರಜಾಪ್ರಭುತ್ವ ದೇಶ. ಇಲ್ಲಿ ಹಿಂದೂ ಮುಸ್ಲೀಂ, ಬೌಧ್ಧ, ಕ್ರೈಸ್ತ ಎಲ್ಲರೂ ಸಮಾನರೆಂದು ತಿಳಿಸಿದರು.

         ನಂತರ ನವಾ ಜವಾನ್ ಕಮಿಟಿ ಮುಖಂಡ ಖಾದರ್ ಬಾಷಾ ಹಾಗೂ ಡಾ:ಖಾದ್ರಿ ‘’ನಾನಾ ಭಾಷೆ, ವೇಷ ಭೂಷಣ, ಸಂಸ್ಕತಿ, ವೈವಿಧ್ಯತೆ ಒಳಗೊಂಡ ಭರತ ಖಂಡ ಜಾಗತಿಕ ಮನ್ನಣೆ ಗಳಿಸಿದೆ. ಎಲ್ಲರೂ ಒಗ್ಗೂಡಿ ಜೀವನ ಸಾಗಿಸೋಣವೆಂಬ ತಿಳಿ ಮಾತು ಹೇಳಿದರು.
ಇದೇ ವೇಳೆ ಒಂದು ತಿಂಗಳಿನ ಅವಿರತ ಪ್ರಯತ್ನದಿಂದ ತಯಾರಿಸಿದ ಅಕ್ಬರ್ ಹಡಗು, ಮೆಕ್ಕಾ ಮದೀನ, ತಾಜ್ ಮಹಲ್, ಗೋಳ ಗುಮ್ಮಟದಂತಹಾ ನಾನಾ ಸ್ಥಬ್ದ ಚಿತ್ರಗಳು ಪ್ರೇಕ್ಷಕರ ಗಮನ ಸೆಳೆಯಿತು.

            ಮೆರವಣಿಗೆಯಲ್ಲಿ ನಬಿಸಾಬ್, ತಾಪಂಸದಸ್ಯ ವಿ.ರೇಣುಕಪ್ಪ, ಸಿಪಿಐ ಹಸನ್ ಸಾಬ್, ಪಿಎಸ್‍ಐ ವಿ.ಶಂಕರಪ್ಪ, ಕೊಳ್ಳಿ ಪವಾಡಿನಾಯ್ಕ, ರಾರಾವಿ ವೆಂಕಟೇಶ, ಗುಜ್ರಿ ಮೌಲಾಸಾಬ್, ಖಾಜಾ,ಲಕ್ಮಣ ಹೆಚ್. ಬಂಡಾರಿ, ಬಿ.ಮಾಬುಸಾಬು, ಜಲಾಲಿಪೀರ, ಸದ್ದಾಂ, ವಿ.ಹನುಮೇಶ, ಜಾಕೀರ್,ಸಲೀಂ, ರಫಿಕ್ ಸೇರಿದಂತೆ ಸುಮಾರು ನೂರಾರು ಜನ ಮುಸ್ಲಿಂ ಭಾಧವರು ಭಾಗವಹಿಸಿದ್ದರು. ಈ ವೇಳೆ ಯಾವುದೇ ರೀತಿಯ ಗಲಾಟೆಯಾಗದಂತೆ ಸಿರಿಗೇರಿ ಪೊಲೀಸ್ ಠಾಣೆಯಿಂದ ಸೂಕ್ತ ಪೊಲೀಸ್ ಬಂದೋಬಸ್ತ್ ನೀಡಲಾಗಿತ್ತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link