ಮಧುಗಿರಿ:
ಉತ್ತಮ ಸಮಾಜ ನಿರ್ಮಾಣದ ಜವಾಬ್ದಾರಿ ಶಿಕ್ಷಣ ಇಲಾಖೆಯದ್ದಾಗಿದ್ದು ಭವಿಷ್ಯದ ಮಕ್ಕಳ ಪ್ರಗತಿಯಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದು ಡಿಡಿಪಿಐ ರವಿಶಂಕರ್ ರೆಡ್ಡಿ ಅಭಿಪ್ರಾಯಪಟ್ಟರು.
ಪಟ್ಟಣದ ದಿ.ಕಲಾ ತಪಸ್ವಿ ಮಧುಗಿರಿ ರಾಮು ರವರ ನಿವಾಸದಲ್ಲಿ ರಾಮು ಫೌಂಢೇಶನ್ ವತಿಯಿಂದ ಆಯೋಜಿಸಿದ್ದ ವಿವಿಧ ರಂಗಗಳಲ್ಲಿ ಸೇವೆ ಸಲ್ಲಿಸಿದ ಗಣ್ಯರನ್ನು ಸನ್ಮಾನಿಸಿ ಮಾತನಾಡಿದ ಅವರು ಹುಟ್ಟು ಉಚಿತ ಸಾವು ಖಚಿತವಾಗಿದ್ದು ನಾವುಗಳು ಜೀವನದಲ್ಲಿ ಸಮಾಜಕ್ಕಾಗಿ ಏನಾದರೂ ನಮ್ಮದೆ ಆದಂತಹ ಕೊಡುಗೆಗಳನ್ನು ನೀಡಿದರೆ ಮಾತ್ರ ನಮ್ಮ ಜೀವನ ಸಾರ್ಥಕವಾದಂತೆ.
ಮುಂದಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ನಮ್ಮ ಶೈಕ್ಷಣಿಕ ಜಿಲ್ಲೆಯನ್ನು ರಾಜ್ಯದ ಫಲಿತಾಂಶ ಪಟ್ಟಿಯಲ್ಲಿ ಎರಡನೇ ಪಡೆಯುವ ಪ್ರಯತ್ನ ಗುರಿಯನ್ನು ಹೊಂದಿದ್ದೆನೆ. ಈ ಬಾರಿಯ ಪರೀಕ್ಷೆಯ ಫಲಿತಾಂಶ ನನಗೆ ಖುಷಿ ತಂದಿಲ್ಲ. ಎಸ್ ಎಸ್ ಎಲ್ ಸಿ ಪರೀಕ್ಷೆಗಾಗಿ ಗಡಿ ಭಾಗದ ಪಾವಗಡ ತಾಲ್ಲೂಕಿನಲ್ಲಿ ಸುಮಾರು 18 ರಾತ್ರಿ ಶಾಲೆಗಳನ್ನು ತೆರೆಯಲಾಗಿತ್ತು ಆ ಶಾಲೆಗಳಲ್ಲಿ ಶೇ.90 ರಷ್ಟು ಫಲಿತಾಂಶ ಬಂದಿದೆ.
ನಮ್ಮ ಮಧುಗಿರಿ ರಾತ್ರಿ ಶಾಲೆಗಳಾದ ಹೊಸಕೆರೆ, ಐಡಿಹಳ್ಳಿಯಲ್ಲೂ ಉತ್ತಮ ಫಲಿತಾಂಶವನ್ನು ಪಡೆದುಕೊಂಡಿವೆ. ರಾಮು ಫೌಂಢೇಶನ್ ಸಮಾಜ ಮುಖಿ ಕೆಲಸ ಕಾರ್ಯಗಳನ್ನು ಮಾಡುತ್ತಿರುವುದು ಶ್ಲಾಘನೀಯ ಎಂದರು.ಜಿಲ್ಲಾ ಫ್ರೌಢ ಶಾಲಾ ಶಿಕ್ಷಕರ ಸಂಘಧ ಅಧ್ಯಕ್ಷ ವೆಂಕಟರಾಮು ಮಾತನಾಡಿ ಇಂದಿನ ದಿನಗಳಲ್ಲಿ ಯಾರಾದರೂ ಮರೆಯಾದರೆ ಮರೆಯುವುದು ಸರ್ವೆ ಸಾಮಾನ್ಯ ದಿ.ಮಧುಗಿರಿ ರಾಮರವರು ಚಿತ್ರಕಲೆಯಿಂದ ಇಡೀ ರಾಜ್ಯದಲ್ಲಿಯೇ ಹೆಸರು ವಾಸಿಯಾಗಿದ್ದಾರೆ.
ಅವರು ರಚಿಸಿರುವ ಚಿತ್ರಗಳನ್ನು ಇಂದೂ ಕೂಡ ನಾವು ಕಾಣಬಹುದಾಗಿದೆ. ಮಧುಗಿರಿ ರಾಮರವರ ಹೆಸರನ್ನು ಉಳಿಸುವಂತಹ ಕೆಲಸ ಕಾರ್ಯಗಳನ್ನು ಫೌಂಡೇಶನ್ ಸುಮಾರು ವರ್ಷಗಳಿಂದ ಆಯೋಜಿಸುತ್ತಾ ತನ್ನದೇ ಆದಂತಹ ಕೊಡುಗೆಗಳನ್ನು ಸಮಾಜಕ್ಕೆ ನೀಡುತ್ತಾ ಬಂದಿದೆ ಎಂದರು.
ಇದೇ ಸಂಧರ್ಭದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 625ಕ್ಕೆ 566 ರಷ್ಟು ಅಂಕ ಪಡೆದ ಕೋಟಗ್ಲಾರಹಳ್ಳಿ ಸರ್ಕಾರಿ ಫ್ರೌಢಶಾಲೆಯ ವಿದ್ಯಾರ್ಥಿನಿ ಎಂ. ಯಶು ಪ್ರಿಯ ತಾಲ್ಲೂಕು ಫ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನಯ್ಯ, ತಾಲ್ಲೂಕು ವೃತ್ತಿ ಶಿಕ್ಷಣದ ಸಂಘಧ ಅಧ್ಯಕ್ಷ ಆಶ್ವಥಯ್ಯ, ಖಜಾಂಚಿ ಮಂಜುನಾಥ್, ಬ್ಯಾಲ್ಯ ಸರಕಾರಿ ಫ್ರೌಢಶಾಲೆಯ ಗಣಿತ ಶಿಕ್ಷಕ ಸ್ವಾಮಿ ರವರುಗಳನ್ನು ಡಿಡಿಪಿಐ ರವಿಶಂಕರ್ ರೆಡ್ಡಿ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿದರು.
ಕಾಯ್ರಕರ್ಮದಲ್ಲಿ ಮಧುಗಿರಿ ರಾಮು ಫೌಂಡೇಶನ್ ಅಧ್ಯಕ್ಷ ಚಿ.ಸೂ ಕೃಷ್ಣಾಮೂರ್ತಿ, ಪದ್ಮಮಂಜುನಾಥ್, ಮುಖ್ಯಶಿಕ್ಷಕರಾದ ಮಂಜುನಾಥ್‍ಸ್ವಾಮಿ ಜಿ.ಟಿ. ದ್ರೇಹಚಾರ್, ನರಸೇಗೌಡ, ನರಸಿಂಹರಾಜು, ಕಾಮರಾಜು, ರಾಜೇಶ್ ಮಧುಸೂಧನ್ ಹಾಗೂ ಪಧಾಧಿಕಾರಿಗಳು ಮತ್ತಿತ್ತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ