ಶ್ರೀ ಗೋಸಲ ಚನ್ನಬಸವೇಶ್ವರಸ್ವಾಮಿ ಅದ್ದೂರಿ ರಥೋತ್ಸವ : ಹರಿದು ಬಂದ ಭಕ್ತ ಸಾಗರ

 ಗುಬ್ಬಿ 

     ಇತಿಹಾಸ ಪ್ರಸಿದ್ಧ ಗುಬ್ಬಿ ಶ್ರೀ ಗೋಸಲ ಚನ್ನಬಸವೇಶ್ವರಸ್ವಾಮಿ ಜಾತ್ರಾ ಮಹೋತ್ಸವ
ಪ್ರಯುಕ್ತ ಮಹಾ ರಥೋತ್ಸವ ವಿಜೃಂಭಣೆಯಿAದ ನೆಡೆಯಿತು ಇದಕ್ಕೆ ಸಾವಿರಾರು ಭಕ್ತರು ಭಕ್ತಿ ಸಮರ್ಪಿಸಿ ಸಾಕ್ಷಿಯಾದರು.

     ಇಂದು ಬೆಳಗಿನ ಜಾವ ಮಹಾ ರುದ್ರಾಭಿಷೇಕದೊಂದಿಗೆ ಪ್ರಾರಂಭವಾದ ವಿದಿ ವಿಧಾನಗಳು ವಿವಿಧ ಧಾರ್ಮಿಕ ಕೈಂಕರ್ಯ ಗಳೊಂದಿಗೆ ಗುಬ್ಬಿಯ ತೊರೆಮಠ ದಿಂದ ಬಲಿ ಅನ್ನ ತರುವ ಸಂಪ್ರದಾಯ ದಿಂದ.ನಂದಿ ಧ್ವಜ ಪೂಜೆ ಅಡ್ಡ ಪಲ್ಲಕ್ಕಿ ಉತ್ಸವ ಹೀಗೆ ನಡೆದು ಸ್ವಾಮಿ ಅವರಿಗೆ ಮಾಡಿದ ವಿಶೇಷ ಹೂವಿನ ಅಲಂಕಾರ ಕಣ್ಮನ ಸೆಳೆಯಿತು. ನಂತರ ಹೂವಿನ ಪಲ್ಲಕ್ಕಿಯಲ್ಲಿ ಸ್ವಾಮಿಯವರನ್ನು ಕರೆತಂದು ರಥದಲ್ಲಿ ಪ್ರತಿಷ್ಠಾಪಿಸಿ ಮಧ್ಯಾಹ್ನ 1-45 ಕ್ಕೆ ಸರಿಯಾಗಿ ಗುಬ್ಬಿಯಪ್ಪ ರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಎಳೆಯಲಾಯಿತು. ಕೋವಿಡ್ ಎನ್ನುವ ಕರಿ ನೆರಳಿನಿಂದ ಹೊರಬಂದ ಭಕ್ತ ಸಾಗರ ಎಲ್ಲಾ ಆತಂಕ ಮರೆತು ಸಾಗರೋಪಾದಿ ಹರಿದು ಬಂದರು.

    ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ ಭಕ್ತ ಸಮೂಹ ರಥೋತ್ಸವಕ್ಕೆ ಬಾಳೆಹಣ್ಣು ದವನ ಎಸೆಯುವ ಮೂಲಕ ತಮ್ಮ ಭಕ್ತಿ ಸಮರ್ಪಿಸಿದರು. ನವ ದಂಪತಿಗಳು ಹರಕೆ ಸಲ್ಲಿಸುವ ವಿಶೇಷ ಪದ್ದತಿ ಸಹ ಇಲ್ಲಿ ನಡೆಯುತ್ತದೆ. ಬೆಳಿಗ್ಗೆಯಿಂದ ತಯಾರಿ ನಡೆಸಿದ ವಿವಿಧ ಸಂಘಸಂಸ್ಥೆಗಳು ಬಿಸಲಿನಿಂದ ಬಳಲಿದ ಭಕ್ತರಿಗೆ ಪಾನಕ ಫಲಹಾರ ವಿತರಿಸಿ ತಮ್ಮ ಭಕ್ತಿ ಸಮರ್ಪಿಸಿದರು. ಮತ್ತೇ ಕೆಲವರು ಉಪಹಾರ ವ್ಯವಸ್ಥೆ ಮಾಡಿದ್ದರು. ಬಿಸಿಲ ಝಳಕ್ಕೆ ಕುಡಿಯಲು ಮಜ್ಜಿಗೆ ಪಾನಕ ನೀಡಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

     ಭಕ್ತರಿಗೆ ದಾಸೋಹ ವ್ಯವಸ್ಥೆಯನ್ನು ದಾಸೋಹ ಸಮಿತಿಯವರು ಜಿ ಆರ್ ಸುರೇಶ್ ದಾಸೋಹ ಸಮಿತಿಯ ಅಧ್ಯಕ್ಷರ ತಂಡ ಬಹಳ ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಿತ್ತು ಸುಮಾರು 30ಕ್ಕೂ ಹೆಚ್ಚು ಕೌಂಟರ್ ಗಳನ್ನು ತೆರೆದಿದ್ದರು ಮಹಿಳೆಯರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿತ್ತು. ಎರಡು ದಿನದಿಂದ ಹಗಲಿರುಳು ಶ್ರಮಿಸಿ ಸಾವಿರಾರು ಭಕ್ತರಿಗೆ ಬಫೆ ಮೂಲಕ ಅನ್ನ ಸಂತರ್ಪಣೆ ನಡೆಸಿದರು. ಈ ಕಾರ್ಯಕ್ಕೆ ಹಲವು ಭಕ್ತರು ದೇಣಿಗೆಯನ್ನು ದವಸ ಧಾನ್ಯದ ರೂಪದಲ್ಲೂ ನೀಡಿದ್ದಾರೆ.

    ಎಲ್ಲಾ ವ್ಯವಸ್ಥಿತವಾಗಿ ಆಯೋಜಿಸಿದ ಸಮಿತಿ ದೇವಾಲಯದಲ್ಲೂ ವಿಶೇಷ ಅಲಂಕಾರ ಮಾಡಿದೆ. ದೇವಾಲಯದಲ್ಲಿ ಇಂದು ತುಮಕೂರಿನ ಉದ್ಯಮಿಯೊಬ್ಬರು 10 ಸಾವಿರಕ್ಕೂ ಹೆಚ್ಚು ಕಾಯಿಮಿಠಾಯಿ ಮಾಡಿಸಿ ಪ್ರಸಾದಕ್ಕೆಂದು ಹಂಚಿದ್ದು ವಿಶೇಷವಾಗಿತ್ತು 18 ಕೋಮಿನ ಸಹಕಾರದಲ್ಲಿ ದೇವಾಲಯ ಹಾಗೂ ಹೊರಾಂಗಣ ಹೂವಿನಿಂದ ಅಲಂಕೃತ ಗೊಳಿಸಲಾಗಿತ್ತು. ಈ ನಡುವೆ ರಥೋತ್ಸವಕ್ಕೆ ಹೂವಿನ ಅಲಂಕಾರವನ್ನು ಗುಬ್ಬಿಯ ಅಗ್ನಿವಂಶ ಕ್ಷತ್ರಿಯರ ಸಂಘದವರು ಬಹಳ ವಿಜೃಂಭಣೆಯಿಂದ ಮಾಡಿದ್ದರು.

   ರಥೋತ್ಸವ ಎಳೆದಾಗ ಭಕ್ತರು ಎಸೆದ ದವನ ಬಾಳೆಹಣ್ಣು ಮೇಲೆ ಭಕ್ತರು ತಮ್ಮ ಹರಕೆಯನ್ನು ಬರೆದು ಎಸೆದು ಹೊಸ ರೀತಿ ತಮ್ಮ ಭಕ್ತಿ ವ್ಯಕ್ತಪಡಿಸಿದ್ದು ಮತ್ತೊಂದು ವಿಶೇಷವಾಗಿ ಕಾಣಿಸಿಕೊಂಡಿತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap