ಶಿಕ್ಷಣದಿಂದ ಮಾತ್ರ ಶೋಷಿತರ ಪ್ರಗತಿ ಸಾಧ್ಯ

ಚಿತ್ರದುರ್ಗ:

      ದೇಶಕ್ಕೆ ಸ್ವಾತಂತ್ರ ಬಂದು ಎಪ್ಪತ್ತೆರಡು ವರ್ಷಗಳಾಗಿದ್ದರೂ ಇನ್ನು ಅಲೆಮಾರಿ, ಅರೆಅಲೆಮಾರಿ, ಅಲಕ್ಷಿತ, ಹಿಂದುಳಿದ ಸಮುದಾಯಗಳ ಗೋಳು ತಪ್ಪಿಲ್ಲ ಎಂದು ಹೊಸದುರ್ಗ ಕುಂಚಿಟಿಗ ಮಹಾಸಂಸ್ಥಾನ ಮಠದ ಡಾ.ಶಾಂತವೀರಸ್ವಾಮಿ ವಿಷಾಧಿಸಿದರು.ವಿಮುಕ್ತಿ ವಿದ್ಯಾಸಂಸ್ಥೆ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಜಿಲ್ಲಾ ಅಲೆಮಾರಿ ಮತ್ತು ಅರೆಅಲೆಮಾರಿ ಕ್ಷೇಮಾಭಿವೃದ್ದಿ ಸಂಘ, ರಾಜ್ಯ ಶಾಂತಿ ಮತ್ತು ಸೌಹಾರ್ಧ ವೇದಿಕೆಯಿಂದ ವಿಮುಕ್ತಿ ವಿದ್ಯಾಸಂಸ್ಥೆಯ 28 ನೇ ವರ್ಷದ ವಾರ್ಷಿಕೋತ್ಸವ ಅಂಗವಾಗಿ ಪತ್ರಕರ್ತರ ಭವನದಲ್ಲಿ ಶನಿವಾರ ನಡೆದ ಅಲಕ್ಷಿತ ಸಮುದಾಯಗಳ ಜಾನಪದ ಸಾಂಸ್ಕøತಿಕ ಮೇಳದ ಸಾನಿಧ್ಯ ವಹಿಸಿ ಮಾತನಾಡಿದರು.

       ಅಲಕ್ಷಿತ ಸಮುದಾಯದವರಾದ ನೀವುಗಳು ನಿಮ್ಮಲ್ಲಿರುವ ಕಲೆಯನ್ನು ಪ್ರದರ್ಶಿಸುತ್ತ ಊರು ಊರು ಸುತ್ತುತ್ತಾ ಮಕ್ಕಳಿಗೆ ಶಿಕ್ಷಣ ಕೊಡಿಸದೆ ಸರ್ಕಾರದ ಎಲ್ಲಾ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದೀರ. ಶಿಕ್ಷಣವಂತರು, ಉಳ್ಳವರು ದೊಡ್ಡ ದೊಡ್ಡ ನಗರಗಳಲ್ಲಿ ಉದ್ಯಮಗಳನ್ನು ಮಾಡಿಕೊಂಡು ಕೋಟಿಗಟ್ಟಲೆ ಹಣ ಸಂಪಾದಿಸುತ್ತಿದ್ದಾರೆ. ಇಲ್ಲಿಯವರೆಗೂ ಯಾವ ಜನಪ್ರತಿನಿಧಿಗಳು ನಿರ್ಲಕ್ಷಿತ, ಅಲಕ್ಷಿತ ಸಮುದಾಯಗಳ ಕಣ್ಣೀರೊರೆಸದಿರುವುದೇ ನೀವುಗಳು ಹಿಂದುಳಿಯಲು ಕಾರಣ. ಶಿಕ್ಷಣವೇ ನಿಮಗೆ ಮಂತ್ರದಂಡ, ಧರ್ಮದಂಡ ಎನ್ನುವುದನ್ನು ಮರೆಯಬೇಡಿ ಎಂದು ಅಲೆಮಾರಿ ಮತ್ತು ಅರೆಅಲೆಮಾರಿ ಜನಾಂಗವನ್ನು ಜಾಗೃತಗೊಳಿಸಿದರು.

      ಮಾನವೀಯತೆಯಿಲ್ಲದವರು ವಿಧಾನಸೌದದಲ್ಲಿ ಕುಳಿತಿರುವುದರಿಂದ ಮೂಲಭೂತ ಸೌಲಭ್ಯಗಳು ನಿಮಗೆ ಸಿಗುತ್ತಿಲ್ಲ. ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ನೀಡಿರುವ ಸಂವಿಧಾನ ಜಾತಿ ರಾಜಕಾರಣ ಮಾಡುವ ಹಾಗೂ ಶ್ರೀಮಂತರ ಬಲಾಢ್ಯರ ಕೈಯಲ್ಲಿದೆ. ನಿಮಗೆ ಶಿಕ್ಷಣವಿಲ್ಲದ ಕಾರಣ ಸಂವಿಧಾನದಲ್ಲಿರುವ ಕಾನೂನು ಏನು ಎಂಬುದು ಗೊತ್ತಿಲ್ಲ. ಭಾರತದಂತೆ ಎಲ್ಲಾ ದೇಶಗಳಲ್ಲಿಯೂ ಬಡವರಿದ್ದಾರೆ. ಆದರೆ ಅವರಿಗೆಲ್ಲಾ ಶಿಕ್ಷಣ ಆರೋಗ್ಯ ಸಮಾನತೆಯಿದೆ. ನಮ್ಮಲ್ಲಿ ತಾರತಮ್ಯ ಇನ್ನು ನಿವಾರಣೆಯಾಗಿಲ್ಲ. ಧರ್ಮ, ಜಾತಿ, ದೇವರ ಹೆಸರಿನಲ್ಲಿ ಇನ್ನು ಮೌಢ್ಯ ಶೋಷಣೆಗಳು ನಡೆಯುತ್ತಿರುವುದು ದೊಡ್ಡ ದುರಂತ. ಇದರ ವಿರುದ್ದ ನೀವುಗಳು ಮೊದಲು ಎಚ್ಚೆತ್ತುಕೊಳ್ಳಬೇಕು ಎಂದರು.

      ಧಾರ್ಮಿಕ ಸ್ವಾತಂತ್ರ, ಸಹ ಪಂಕ್ತಿ ಭೋಜನ ಅಲಕ್ಷಿತ, ದಲಿತ, ಹಿಂದುಳಿದ ಜನಾಂಗಕ್ಕೆ ಸಿಕ್ಕಿಲ್ಲ. ಭ್ರಷ್ಟಾಚಾರ ನಿರ್ಮೂಲನೆಯಾಗಬೇಕು. ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ಕೇಳಿ ಪಡೆದುಕೊಳ್ಳಬೇಕಾದರೆ ಶಿಕ್ಷಣವೊಂದೆ ನಿಮಗೆ ಅಸ್ತ್ರ. ಸಂವಿಧಾನವನ್ನು ಓದಿ ಅದರಲ್ಲಿರುವ ಹಕ್ಕುಗಳನ್ನು ತಿಳಿದುಕೊಳ್ಳಿ. ಶಿಕ್ಷಣದ ಮೂಲಕ ಸಂಘಟಿತರಾಗಿ ನಿಮ್ಮ ಕಸುಬುಗಳನ್ನು ಮಕ್ಕಳಿಗೆ ಕಲಿಸಬೇಡಿ. ಶಿಕ್ಷಣವಂತರನ್ನಾಗಿ ಮಾಡಿ ದೊಡ್ಡ ದೊಡ್ಡ ಹುದ್ದೆಗಳಿಗೆ ಹೋಗಲು ನೆರವಾಗಿ ಎಂದು ಅಲೆಮಾರಿ ಅರೆಅಲೆಮಾರಿ ಜನಾಂಗಕ್ಕೆ ಕಿವಿಮಾತು ಹೇಳಿದರು.

       ಜಿ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸತ್ಯಭಾಮ ಜಾನಪದ ಸಾಂಸ್ಕøತಿಕ ಮೇಳ ಉದ್ಘಾಟಿಸಿ ಮಾತನಾಡುತ್ತ ಜಾನಪದ ಕಲೆ ಹುಟ್ಟಿಕೊಂಡಿದ್ದೆ ಗ್ರಾಮೀಣ ಪ್ರದೇಶಗಳಿಂದ ಅಲೆಮಾರಿ, ಅರೆಅಲೆಮಾರಿ, ಅಲಕ್ಷಿತ ಜನಾಂಗದವರಲ್ಲಿ ಅದ್ಬುತವಾದ ಕಲೆಯಿದೆ. ತಳಸಮುದಾಯದವರಾದ ನೀವುಗಳು ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಕೊಡಿಸಿ ಸಮಾಜದ ಮುಖ್ಯವಾಹಿನಿಗೆ ತನ್ನಿ ಮನುಷ್ಯನಿಗೆ ನೀರು ಆಹಾರ ಎಷ್ಟು ಮುಖ್ಯವೋ ಅದೇ ರೀತಿ ಶಿಕ್ಷಣ ಕೂಡ ಅತ್ಯವಶ್ಯಕ. ನಿಮ್ಮಲ್ಲಿರುವ ಕಲೆ ಪ್ರತಿಭೆಗಳನ್ನು ಪ್ರದರ್ಶಿಸಿ ಇನ್ನು ಎತ್ತರಕ್ಕೆ ಹೋಗಿ ಎಂದು ತಿಳಿಸಿದರು.ವಿಮುಕ್ತಿ ವಿದ್ಯಾಸಂಸ್ಥೆ ಅಧ್ಯಕ್ಷೆ ಅನ್ನಪೂರ್ಣ ವಿಶ್ವಸಾಗರ್ ಅಧ್ಯಕ್ಷತೆ ವಹಿಸಿದ್ದರು.

      ಜಿಲ್ಲಾ ಅಲೆಮಾರಿ, ಅರೆಅಲೆಮಾರಿ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಕೆ.ಎಂ.ನಾಗರಾಜ್, ಶಾಂತಿ ಮತ್ತು ಸೌಹಾರ್ಧ ವೇದಿಕೆ ಅಧ್ಯಕ್ಷ ನರೇನಹಳ್ಳಿ ಅರುಣ್‍ಕುಮಾರ್ ಇನ್ನು ಮೊದಲಾದವರು ವೇದಿಕೆಯಲ್ಲಿದ್ದರು.ವಿಮುಕ್ತಿ ವಿದ್ಯಾಸಂಸ್ಥೆ ನಿರ್ದೇಶಕ ಆರ್.ವಿಶ್ವಸಾಗರ್ ಪ್ರಾಸ್ತಾವಿಕವಾಗಿ ಮಾತನಾಡಿದರು.ಹಗಲುವೇಷಧಾರಿಗಳು, ಕಿನ್ನರಿಜೋಗಿಗಳು, ಗೊರವರು, ಸುಡುಗಾಡು ಸಿದ್ದರು ತಮ್ಮ ಕೆಲಯನ್ನು ಪ್ರದರ್ಶಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link