ಶಿಗ್ಗಾವಿ :
ಸರ್ಧಾರ ವಲ್ಲಬಾಯಿ ಪಟೇಲ್ ಅವರು ಸ್ವಾತಂತ್ರ್ಯ ಹೋರಾಟಕ್ಕೆ ದಿಟ್ಟ, ಧೀಮಂತ ಮತ್ತು ಧೀರ ಕಾರ್ಯಗಳಿಗೆ ಚಾಲನೆ ನೀಡುವ ಮೂಲಕ ಅತ್ಯಂತ ಶ್ಲಾಘನೀಯವಾಗಿದ್ದಾರೆ ಎಂದು ಶಾಸಕ ಬಸವರಾಜ ಬೊಮ್ಮಾಯಿ ಹೇಳಿದರು.
ಪಟ್ಟಣದ ಪುರಸಭೆ ವೃತ್ತದಲ್ಲಿ ಸರ್ದಾರ ವಲ್ಲಬಾಯಿ ಪಟೇಲ ಅವರ ಜನ್ಮ ದಿನೋತ್ಸವದ ಅಂಗವಾಗಿ ರಾಷ್ಟ್ರೀಯ ಏಕತಾ ದಿವಸದಂದು ರಾಷ್ಟ್ರೀಯ ಏಕತೆಗಾಗಿ ಓಟಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಗುಜರಾತಿನ ಬಾರ್ಡೋಳಿಯ ರೈತ ಚಳುವಳಿಯ ಹಾಗೂ ಚಪ್ಪಾರನ್ ಕಾರ್ಮಿಕ ಚಳುವಳಿಗಳ ಮೂಲಕ ಸ್ವಂತಂತ್ರ ಹೋರಾಟದ ಮಹಾ ತಿರುವು ಪಡೆದಿತ್ತು ಇದಕ್ಕೆ ಮೂಲ ಕಾರಣ ಮಹಾತ್ಮ ಗಾಂಧಿಯವರ ನೇತೃತ್ವ ಹಾಗೂ ಸರ್ದಾರ್ ವಲ್ಲಭಾಯಿ ಪಟೇಲ್ ಅವರ ದೀಮಂತಿಕೆಯಾಗಿತ್ತು,
ಪಟೇಲ್ ಅವರಿಗೆ ಸ್ವತಂತ್ರ್ಯದ ನಂತರ ಹೋರಾಟಗಾರರ ಯಾವ ಸ್ಥಾನ ಸಿಗಬೇಕಿತ್ತು ಅದು ಸಿಗಲಿಲ್ಲ ಅದು ಇತಿಹಾಸದಲ್ಲಿ ಮರೆ ಮಾಚಿದೆ, ಸ್ವಾತಂತ್ರ್ಯ ಹೋರಾಟಕ್ಕೆ ಶ್ರಮಿಸಿದ ಹಲವಾರು ಮಹನೀಯರ ಹೆಸರುಗಳನ್ನು ಇತಿಹಾಸಕಾರರು ಮರೆಮಾಚಿದ್ದಾರೆ, ಆದರೆ ಸತ್ಯ ಯಾವತ್ತು ಕೂಡ ಹೊರ ಬರುತ್ತದೆ, ಎಂಬುದಕ್ಕೆ ಪ್ರಧಾನಿ ನರೇಂದ್ರ ಮೊದಿಯವರು ಅಂತ ಹೊರಾಟಗಾರರ ನೆನಪಿಗೆ ಒಂದು ಶಕ್ತಿಯನ್ನು ತುಂಬುವ ಕಾರ್ಯವನ್ನು ಮಾಡುವ ಮೂಲಕ ಚಾಲನೆಯನ್ನು ಕೊಟ್ಟಿದ್ದಾರೆ, ಪಟೇಲ್ ಅವರ ದೊಡ್ಡ ಮೂರ್ತಿಯ ಅನಾವರಣ ನಮ್ಮ ಭಾರತದ ಅಖಂಡತೆಯ ಕುರಿತು ಭಾಹ್ಯ ಶತೃಗಳಿಗೆ ಭಾತವನ್ನು ಚಿದ್ರ ಮಾಡುವ ಕೆಲಸವನ್ನು ಮಾಡುತ್ತಿರುವವರಿಗೆ ಒಳ್ಳೆಯ ಸಂದೇಶ ನೀಡಿದ್ದಾರೆ ಎಂದರು.
ಏಕತಾ ಓಟದಲ್ಲಿ ಭಾಜಪ ಅದ್ಯಕ್ಷ ದೇವಣ್ಣ ಚಾಕಲಬ್ಬಿ, ಜಿಪಂ ಸದಸ್ಯೆ ಶೋಭಾ ಗಂಜಿಗಟ್ಟಿ, ಕೆಸಿಸಿ ಬ್ಯಾಂಕ್ ನಿರ್ದೇಶಕ ಗಂಗಣ್ಣ ಸಾತಣ್ಣವರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಾನಂದ ಮ್ಯಾಗೇರಿ, ಪುರಸಭೆ ಅಧ್ಯಕ್ಷ ಶಿವಪ್ರಸಾದ ಸುರಗಿಮಠ, ಉಪಾಧ್ಯಕ್ಷ ಪರಶುರಾಮ ಸೋನ್ನದ, ಸದಸ್ಯ ಸುಭಾಷ ಚೌವಾಣ, ಮುಖಂಡರಾದ ಶೇಖಣ್ಣ ಗಣಾಚಾರಿ, ರಾಮೂ ಪೂಜಾರ, ಬಸವರಾಜ ಗೊಬ್ಬಿ, ಮಂಜುನಾಥ ಬ್ಯಾಹಟ್ಟಿ, ಸಿದ್ದು ಅಕ್ಕಿ, ಸಂತೋಷ ದೊಡ್ಡಮನಿ, ಉದಯಶಂಕರ ಹೊಸಮನಿ, ಕೆ.ಎಸ್.ಕೋಣಪ್ಪನವರ, ರೇಣಕನಗೌಡ ಪಾಟೀಲ್, ಫಕ್ಕಿರಪ್ಪ ಕುಂದೂರ ಸೇರಿದಂತೆ ಭಾಜಪ ಕಾರ್ಯಕರ್ತರು ಅಭಿಮಾನಿಗಳು ಭಾಗಿಯಾಗಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ