ಬಳ್ಳಾರಿ
ಗ್ರಾಮ ಪಂಚಾಯಿತಿಗಳ ಉಪಚುನಾವಣೆ-2019ರ ಸಂಂಬಂಧಿಸಿದಂತೆ ಬಳ್ಳಾರಿ ತಾಲೂಕಿನ ಬೈರದೇವನಹಳ್ಳಿ, ಸಿರುಗುಪ್ಪ ತಾಲೂಕಿನ ಶಾನವಾಸಪುರ, ಸಂಡೂರು ತಾಲೂಕಿನ ವಡ್ಡು, ಕೂಡ್ಲಿಗಿ ತಾಲೂಕಿನ ಪೂಜಾರಹಳ್ಳಿ, ಹಡಗಲಿ ತಾಲೂಕಿನ ಸೊವೇನಹಳ್ಳಿ ಹಾಗೂ ಹೊಸಪೇಟೆ ತಾಲೂಕಿನ ಮಲಪನಗುಡಿ ಗ್ರಾಮ ಪಂಚಾಯಿತಿ ಸದಸ್ಯರುಗಳ ಸ್ಥಾನಗಳಿಗೆ ಮೇ29ರಂದು ಸಾರ್ವತ್ರಿಕ ಚುನಾವಣೆ ನಡೆಸಲು ರಾಜ್ಯ ಚುನಾವಣಾ ಆಯೋಗವು ಆದೇಶ ಹೊರಡಿಸಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳಗಿರುವ ಜಿಲ್ಲಾಧಿಕಾರಿ ಡಾ.ವಿ ರಾಮ್ ಪ್ರಸಾತ್ ಮನೋಹರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಭ್ಯರ್ಥಿಗಳ ನಾಮಪತ್ರಗಳನ್ನು ಮೇ 16ರಂದು ಸ್ವೀಕರಿಸಲಾಗುತ್ತದೆ. ನಾಮಪತ್ರ ಪರಿಶೀಲನೆಯನ್ನು ಮೇ 17ಕ್ಕೆ ನಿಗದಿಪಡಿಸಲಾಗಿದೆ. ಉಮೇದುವಾರಿಕೆಯನ್ನು ಹಿಂತೆಗೆದುಕೊಳ್ಳಲು ಮೇ 20ರಂದು ಕೊನೆಯ ದಿನವಾಗಿರುತ್ತದೆ.
ಮತದಾನ ಅವಶ್ಯವಿದ್ದಲ್ಲಿ ಮೇ 29 ರಂದು ನಡೆಸಲಾಗುತ್ತದೆ. ಮರುಮತದಾನ ಇದ್ದಲ್ಲಿ ಮೇ 30 ರಂದು ಬೆಳಗ್ಗೆ 7 ರಿಂದ ಸಂಜೆ 5 ಗಂಟೆಯವರೆಗೆ ನಡೆಸಲಾಗುತ್ತದೆ. ಮತಗಳ ಏಣಿಕೆಯನ್ನು ಮೇ 31 ರಂದು ತಾಲೂಕಿನ ಕೇಂದ್ರ ಸ್ಥಳದಲ್ಲಿ ನಡೆಸಲಾಗುತ್ತದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.