ಮತಗಟ್ಟೆ ಕೇಂದ್ರಗಳಿಗೆ ಚುನಾವಣಾ ಅಧಿಕಾರಿಗಳ ತಂಡ ಭೇಟಿ : ಶಾಂತಿಯುತ ಮತದಾನಕ್ಕೆ ಸಹಕರಿಸಲು ಮನವಿ.

ಚಳ್ಳಕೆರೆ

       ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಚಳ್ಳಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಸಬಾ ಹೋಬಳಿ ಮತ್ತು ಪರಶುರಾಮಪುರ ಹೋಬಳಿಯ ಕ್ಲಿಷ್ಟಕರ ಮತ್ತು ವಿವಾದವನ್ನುಂಟು ಮಾಡುವ ಮತಗಟ್ಟೆ ಕೇಂದ್ರಗಳಾದ ಚೌಳೂರು, ಸೂರನಹಳ್ಳಿ, ಟಿ.ಎನ್.ಕೋಟಿ. ದೊಡ್ಡ ಚೆಲ್ಲೂರು, ಕಾಮಸಮುದ್ರ ಮುಂತಾದ ಕಡೆಗಳಲ್ಲಿ ತಹಶೀಲ್ದಾರ್ ತುಷಾರ್ ಬಿ.ಹೊಸೂರ್, ತಾಲ್ಲೂಕು ಸ್ವೀಫ್ ಸಮಿತಿ ಅಧ್ಯಕ್ಷ ಬಿ.ಎಲ್.ಈಶ್ವರಪ್ರಸಾದ್, ವೃತ್ತ ನಿರೀಕ್ಷಕ ಎನ್.ತಿಮ್ಮಣ್ಣ ಶುಕ್ರವಾರ ಭೇಟಿ ನೀಡಿ ಸಾರ್ವಜನಿಕರಿಗೆ ಮತದಾನದಲ್ಲಿ ಪಾಲ್ಗೊಳ್ಳುವಂತೆ ಹಾಗೂ ಶಾಂತಿಯುತ ಮತದಾನಕ್ಕೆ ಅವಕಾಶ ಮಾಡಿಕೊಡುವಂತೆ ಮನವಿ ಮಾಡಿದರು.

       ತಹಶೀಲ್ದಾರ್ ತುಷಾರ್ ಬಿ.ಹೊಸೂರ್ ಮಾತನಾಡಿ, ಲೋಕಸಭಾ ಚುನಾವಣೆಗೆ ಏ.18ರಂದು ಮತದಾನ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ತಾಲ್ಲೂಕು ಆಡಳಿತ ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಹಲವಾರು ಸೌಲಭ್ಯಗಳನ್ನು ಕಲ್ಪಿಸಿದೆ. ಮತದಾರರ ಪಟ್ಟಿ, ಮತದಾನ ಕೇಂದ್ರಗಳು ಹಾಗೂ ಮತದಾನ ಕೇಂದ್ರಗಳಿಗೆ ನೀಡುವ ಸೌಲಭ್ಯಗಳ ಬಗ್ಗೆ ಈಗಾಗಲೇ ಪರಿಶೀಲನೆ ನಡೆಸಲಾಗಿದೆ. ಏ.18ರ ಮತದಾನದಲ್ಲಿ ಪ್ರತಿಯೊಬ್ಬ ಮತದಾರನು ಪಾಲ್ಗೊಳ್ಳುವಂತೆ ಮನವಿ ಮಾಡಿದರು.

       ವೃತ್ತ ನಿರೀಕ್ಷಕ ಎನ್.ತಿಮ್ಮಣ್ಣ ಮಾತನಾಡಿ, ಕ್ಷೇತ್ರ ವ್ಯಾಪ್ತಿಯಲ್ಲಿ 259 ಮತಗಟ್ಟೆ ಕೇಂದ್ರಗಳಿದ್ದು, ಅವುಗಳಲ್ಲಿ ಕೆಲವು ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಮತಗಟ್ಟೆ ಕೇಂದ್ರಗಳಿವೆ. ಮತದಾನದ ದಿನದಂದು ಕೆಲವು ಗ್ರಾಮಗಳಲ್ಲಿ ಚಿಕ್ಕಪುಟ್ಟ ಸಮಸ್ಯೆಗಳಿಗೆ ವಿವಾದವನ್ನುಂಟು ಮಾಡುವ ಪ್ರವೃತ್ತಿ ಹೆಚ್ಚಿತಿದೆ. ಈ ಹಿನ್ನೆಲೆಯಲ್ಲಿ ಪ್ರತಿಯೊಂದು ಮತಗಟ್ಟೆಯಲ್ಲೂ ಹೆಚ್ಚು ಮತದಾನ ನಡೆಯಬೇಕು ಶಾಂತಿಯುತ ಮತದಾನ ನಡೆಯಬೇಕೆಂಬುವುದು ಎಲ್ಲರ ಅಭಿಲಾಷೆಯಾಗಿದೆ.

        ಈ ನಿಟ್ಟಿನಲ್ಲಿ ಮತಗಟ್ಟೆ ಕೇಂದ್ರಗಳಲ್ಲಿ ಮತದಾನದಂದು ಎಲ್ಲಾ ಮತದಾರರು ಶಾಂತಿಯಿಂದ ಮತ ಚಲಾವಣೆ ಮಾಡಬೇಕಿದೆ. ಯಾವುದೇ ಸಮಸ್ಯೆ ಇರಲಿ, ಅಧಿಕಾರಿಗಳೊಂದಿಗೆ ಸೌಹಾರ್ಥಿತವಾಗಿ ಚರ್ಚಿಸಿಬೇಕಿದೆ. ಪೊಲೀಸ್ ಇಲಾಖೆಯೂ ಸಹ ಜಿಲ್ಲಾ ರಕ್ಷಣಾಧಿಕಾರಿಗಳ ಮಾರ್ಗದರ್ಶನದಲ್ಲಿ ಎಲ್ಲಾ ಮತಗಟ್ಟೆಗಳಿಗೆ ಸೂಕ್ತ ಬಂದೋಬಸ್ತ್ ಕೈಗೊಳ್ಳಲಿದೆ ಎಂದರು.

       ತಾಲ್ಲೂಕು ಸ್ವೀಫ್ ಸಮಿತಿ ಅಧ್ಯಕ್ಷ ಬಿ.ಎಲ್.ಈಶ್ವರಪ್ರಸಾದ್ ಮಾತನಾಡಿ, ಮತದಾರರು ಮತದಾನ ದಿನದಂದು ಸುಲಭವಾಗಿ ತಮ್ಮ ಮತಗಳನ್ನು ಚಲಾಯಿಸಲು ಅನುಕೂಲವಾಗುವಂತೆ ಮತದಾನ ಜಾಗೃತಿ ಹಾಗೂ ವಿವಿ ಪ್ಯಾಟ್ ಪ್ರಾತ್ಯಕ್ಷತೆಯನ್ನು ನಡೆಸಲಾಗಿದೆ. ಇದರಿಂದ ಮತದಾರರು ಕೆಲವೇ ಕೆಲವು ಸೆಕೆಂಡ್‍ಗಳಲ್ಲಿ ತಮ್ಮ ಮತವನ್ನು ಚಲಾಯಿಸಬಹುದಾಗಿದೆ. ಈ ಬಾರಿಯ ಮತದಾನದಲ್ಲಿ ಎಲ್ಲಾ ಮತದಾರರು ತಪ್ಪದೆ ಪಾಲ್ಗೊಂಡು ಚಳ್ಳಕೆರೆ ತಾಲ್ಲೂಕಿನಲ್ಲಿ ಶೇ.100ರ ಮತದಾನದ ಗುರಿಯನ್ನು ಸಾಧಿಸಲು ಸಹಕಾರ ನೀಡುವಂತೆ ಮನವಿ ಮಾಡಿದರು. ಕಂದಾಯಾಧಿಕಾರಿ ಶಾಂತಮ್ಮ ಸೇರಿದಂತೆ ವಿವಿಧ ಮತಗಟ್ಟೆ ಕೇಂದ್ರಗಳ ಅಧಿಕಾರಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link