ಕಾಂಗ್ರೆಸ್ ಮುಖಂಡರ ಮತ್ತು ಕಾರ್ಯಕರ್ತರ ಪೂರ್ವಭಾವಿಸಭೆ

ಹಾವೇರಿ

     ಹಾವೇರಿ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ದಿಸಿರುವ ನನ್ನನ್ನು ಬೆಂಬಲಿಸಿ ಕ್ಷೇತ್ರದ ಅಭಿವೃದ್ದಿಗಾಗಿ ಮತ ನೀಡಿ ಗೆಲ್ಲಿಸಿ ಎಂದು ಡಿ,ಆರ್, ಪಾಟೀಲ್ ಮನವಿ ಮಾಡಿದರು

     ನಗರದ ಕೃಷ್ಣ ಕಲ್ಯಾಣ ಮಂಟಪದಲ್ಲಿ ತಾಲೂಕು ಕಾಂಗ್ರೆಸ್ ಘಟಕದ ಆಶ್ರಯದಲ್ಲಿ ಏರ್ಪಡಿಸಿದ್ದ ಕಾಂಗ್ರೆಸ್ ಮುಖಂಡರ ಮತ್ತು ಕಾರ್ಯಕರ್ತರ ಪೂರ್ವಭಾವಿಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

       ಈ ಲೋಕಸಭಾ ಚುನಾವಣೆ ಕೇವಲ ಮತ ಪಡೆದು ದೆಹಲಿಗೆ ಹೋಗುವುದಲ್ಲ, ಕ್ಷೇತ್ರದ ಎಲ್ಲ ರಂಗ ಪ್ರಗತಿದಾಯಕವಾಗಲು ಕಾಂಗ್ರೇಸ್ ಪಕ್ಷ ಬೆಂಬಲಿಸಿ, ಅಭಿವೃದ್ದಿಗಾಗಿ ನಾನು ಹಗಲಿರುಳು ದುಡಿದು ಋಣ ತಿರಿಸುತ್ತೇನೆ. ಮಾದರಿ ಕ್ಷೇತ್ರ ಮಾಡಲು ಶ್ರಮವಹಿಸುತ್ತೇನೆ ಎಂದು ಡಿ ಆರ್ ಪಾಟೀಲ ಹೇಳಿದರು. ಈ ಕ್ಷೇತ್ರದ ಮಾಜಿ ಸಚಿವರಾದ ಬಸವರಾಜ ಶಿವಣ್ಣನವರ ಮಾತನಾಡಿ ಸ್ಥಳಿಯ ಸಂಸದರು ಎರಡು ಅವಧಿಯಲ್ಲಿ ಯಾವುದೇ ಕೆಲಸ-ಕಾರ್ಯಗಳನ್ನು ಮಾಡದೇ , ಸಂಪೂರ್ಣ ವಿಫಲತೆ ಹೊಂದಿದ್ದಾರೆ. ಸ್ಥಳೀಯರ ಕೈ ಗೂ ಸಿಗದೆ ಕಾಣೆಯಾಗಿದ್ದು, ಕೇವಲ ಮೋದಿಯವರ ಮುಖ ನೊಡಿ ಮತ ಕೇಳಲು ಬರುತ್ತಿದ್ದಾರೆ, ಮೋದಿಯವರು ಸ್ವತಹ ಸುಳ್ಳು ಭರವಸೆ ನಿಡಿ 5 ವರ್ಷಗಳ ಕಾಲ ದೇಶವನ್ನು ಆಳಿದ್ದಾರೆ. ಈ ಭಾರಿ ಹಾವೇರಿ ಲೊಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾದ ಡಿ,ಆರ್, ಪಾಟೀಲ್ ರ ಗೆಲವು ನಿಶ್ಚಿತ್ತ ಎಂದು ಹೇಳಿದರು .

     ಮಾಜಿ ಸಂಸದರಾದ ಆಯ್,ಜಿ,ಸನಧಿಯವರು ಮಾತನಾಡಿ ಇವನಾರವ ಇವನಾರವ ಇವನಾರವ , ಎಂದೆನಿಸದಿರಯ್ಯಾ ಇವ ನಮ್ಮವ ಇವ ನಮ್ಮವ ಇವ ನಮ್ಮವನೆಂದೆನಿಸಯ್ಯಾ ಕೂಡಲ ಸಂಗಮ ದೇವಾ ನಿಮ್ಮ ಮನೆಯ ಮಗನೆಂದೆನಿಸಯ್ಯಾ ಎಂಬ ಬಸವಣ್ಣನವರ ಹಿತ ವಚನದೊಂದಿಗೆ , ಮಾತನ್ನು ಆರಂಬಿಸಿ ಮೇಲಿನ ವಚನದಂತೆ ಡಿ,ಆರ್, ಪಾಟೀಲ್ ರನ್ನು ಈ ಲೋಕಸಭಾ ಚುನಾವಣೆಯಲ್ಲಿ ಬಹುಮತಗಳಿಂದ ಗೆಲ್ಲಿಸಿ ಸಂಸದರನ್ನು ಆಯ್ಕೆ ಮಾಡಿ ಎಂದು ವಿನಂತಿಸಿಕೊಂಡರು .

        ಈ ಸಭೆಯಲ್ಲಿ ರುದ್ರಪ್ಪ ಲಮಾಣಿ , ಎ ,ಎಮ್,ಹಿಂಡಸಗೇರಿ ಹಾಗೂ ಮಾಜಿ ಸಂಸದರಾದ ಆಯ್,ಜಿ,ಸನಧಿ , ಜಿಲ್ಲಾ ಕಾಂಗ್ರೆಸ್ ಅದ್ಯಕ್ಷರಾದ ಎಮ್,ಎಮ್ ,ಹೀರೆಮಠ , ರಾಜ್ಯ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಯಾದ ಎಸ್ , ಎಪ್,ಎನ್, ಗಾಜಿಗೌಡ್ರ ,ಜೆ ಡಿ,ಎಸ್ ಪಕ್ಷದ ಮುಖಂಡರಾದ ಡಾ||ಸಂಜಯ ಡಾಂಗೆ ,ಉಮೇಶ ತಳವಾರ ,ಶೇಖಣ್ಣ ಕಳ್ಳಿಮನಿ , ಶಂಕರ ಮಕರಬ್ಬಿ , ತಾಲೂಕ ಕಾಂಗ್ರೆಸ್ ಘಟಕದ ಅದ್ಯಕ್ಷರಾದ ಎಮ್ ,ಎಮ್, ಮೈದೂರ ಕಾಂಗ್ರೆಸ್ ಮುಖಂಡರಾದ ಸುಭಾನಿ ಚೂಡಿಗಾರ , ಕಲಿಲ ಪಟ್ವೇಗಾರ ,ದಾಸಪ್ಪ ಕರ್ಜಗಿ , ನಾಗರಾಜ ಏರಿಮನಿ , ಈರಪ್ಪ ಲಮಾಣಿ , ಶಹರ ಕಾಂಗ್ರೆಸ್ ಘಟಕದ ಅದ್ಯಕ್ಷರಾದ ಪಿ, ಎಸ್ , ಬಿಷ್ಟನಗೌಡ್ರ , ಹಾಗೂ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link