ಹಾವೇರಿ :
ಜಿಲ್ಲೆಯ ಸವಣೂರ ತಾಲೂಕಿನ ಹತ್ತಿಮತ್ತೂರ ಹೋಬಳಿಯ ಜಲ್ಲಾಪೂರ,ಕಡಕೋಳ,ಶಿರಬಡಗಿ ಸೇರಿದಂತೆ ಸುತ್ತಮುತ್ತಿನ ಗ್ರಾಮಗಳಲ್ಲಿ ಬಿರುಗಾಳಿ ಸಮೇತ ಮಳೆಯಾಗಿದ್ದು,ಹಲವು ಗ್ರಾಮಗಳಲ್ಲಿ ಮನೆಯ ಮೇಲ್ಚಾವಣಿಗಳು ಹಾರಿ ಹೋಗಿವೆ. ಮಳೆಯ ಗಾಳಿಯ ರಭಸಕ್ಕೆ ಶಿರಬಡಗಿ ಗ್ರಾಮದ ಮನೆಯ ಮೇಲ್ಚಾವಣಿ ಹಾರಿದ್ದರಿಂದ ಐವತ್ತು ವರ್ಷದ ಶಂಕ್ರಪ್ಪ ಲಮಾಣಿ ಎಂಬುವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಗಯಾಳುವಿಗೆ ಗ್ರಾಮದಲ್ಲಿಯೇ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಮಳೆ ಗಾಳಿ ರಭಸಕ್ಕೆ ಹತ್ತಿಮತ್ತೂರ ಹಾಗೂ ಕಡಕೋಳ ಗ್ರಾಮಗಳ ಮಧ್ಯದಲ್ಲಿ 400 ಕವ್ಹಿಎ ವಿದ್ಯುತ್ ಕಂಬಗಳು ಹೋಲಗಳಲ್ಲಿ ನೆಲಕ್ಕೆ ಉರುಳಿದ್ದು, ಜನರಲ್ಲಿ ಆತಂಕ ಉಂಟಾಗಿರುವ ಘಟನೆ ಜರುಗಿದೆ ಇದರಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.