ಹಾವೇರಿ :
ನಗರದ ಪ್ರವಾಸಿ ಮಂದಿರದಲ್ಲಿ ಕೆಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಮುತ್ತಣ್ಣ ಎಲಿಗಾರ ಜಯಶಾಲಿಯಾಗಿ ನಿರ್ದೇಶಕರಾಗಿ ಆಯ್ಕೆಯಾದ ಹಿನ್ನಲೆಯಲ್ಲಿ ಬಿಜೆಪಿ ಪಕ್ಷದ ವತಿಯಿಂದ ವಿಜಯೋತ್ಸವ ಆಚರಿಸಿದರು. ವಿಜಯೋತ್ಸವದಲ್ಲಿ ಮಾತನಾಡಿದ ಶಾಸಕ ನೆಹರೂ ಓಲೆಕಾರ ಭಾರತೀಯ ಜನತಾ ಪಕ್ಷ ಯಾವುದೇ ಚುನಾವಣೆಯನ್ನು ಸ್ಪರ್ಧೆಯಾಗಿ, ಸವಾಲಾಗಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಹುಮ್ಮಸಿನಿಂದ ತೆಗೆದುಕೊಳ್ಳುತ್ತೇವೆ.
ಬಿಜೆಪಿಯ ಮುತ್ತಣ್ಣ ಎಲಿಗಾರ 16 ಮತಗಳನ್ನು ಪಡೆದರೆ, ಕಾಂಗ್ರೇಸ್ ಬೆಂಬಲಿತ ಅಭ್ಯರ್ಥಿ ಜಿಪಂ ಮಾಜಿ ಅಧ್ಯಕ್ಷ ಕೊಟ್ರೇಶಪ್ಪ ಬಸೇಗಣ್ಣಿ 09 ಮತ ಪಡೆಯುವ ಮೂಲಕ ಪರಾಭವಗೊಂಡು ನಮ್ಮ ಅಭ್ಯರ್ಥಿ ಜಯಶಾಲಿಗಳಾಗಿದ್ದಾನೆ. ಈ ವಿಜಯೋತ್ಸವಕ್ಕೆ ಕಾರಣಕರ್ತರಾದ ಪಕ್ಷದ ಮುಖಂಡರಿಗೂ, ಕಾರ್ಯಕರ್ತರಿಗೂ ಮತದಾನ ಗೈದ ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ.
ಈ ಜಯದಿಂದ ಜಿಲ್ಲೆಯ ರೈತರಿಗೆ ಅನುಕೂಲವಾಗಲಿದ್ದು, ರೈತರ ಸಮಸ್ಯೆಗಳ ಪರಿಹಾರಕ್ಕಾಗಿ ನಾವು ಹಗಲಿರುಳು ಶ್ರಮವಹಿಸಲಿದ್ದೇವೆ ಎಂದರು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಕೆಸಿ ಕೋರಿ.ಈರಣ್ಣ ಸಂಗೂರ.ನಿಂಗಪ್ಪ ಮೈಲಾರ.ಜಗದೀಶ ಮಲಗೋಡ.ಶ್ರೀಮತಿ ಲಲಿತಾ ಗುಂಡೇನಹಳ್ಳಿ.ಮಹಾವೀರ ಘನಾತೆ. ಮಲ್ಲಿಕಾರ್ಜುನ ಅಗಡಿ.ಪ್ರಭು ಹಿಟ್ನಾಳ.ಪ್ರಶಾಂತ ಬಾಂಗ್ರೆ. ಪಾರ್ವತಿ ಪಾಟೀಲ.ಚನ್ನಮ್ಮ ಪಾಟೀಲ ಸೇರಿದಂತೆ ಇತರರು ಪಾಲ್ಗೊಂಡಿದ್ದರು.