ಎಲ್ಲರು ತಮ್ಮ ಕಣ್ಣುಗಳನ್ನು ದಾನ ಮಾಡಿ ಮಾನವೀಯತೆ ಮೆರೆಯಬೇಕು : ಡಾ.ಜಿ.ಪರಮೇಶ್ವರ್

ಕೊರಟಗೆರೆ

    ಮಾನವೀತೆ ದೃಷ್ಠಿಯಿಂದ ಪ್ರತಿಯೊಬ್ಬರೂ ಮೃತಪಟ್ಟ ನಂತರ ತಮ್ಮ ಕಣ್ಣುಗಳನ್ನು ದಾನ ಮಾಡುವ ಸಂಕಲ್ಪ ಮಾಡಬೇಕು ಈಗಾಲೇ ನಾನು ನನ್ನ ಕಣ್ಣುಗಳನ್ನು ದಾನ ಮಾಡಿದ್ದೇನೆ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ತಿಳಿಸಿದರು.

    ಹೊಳವನಹಳ್ಳಿ ಹೋಬಳಿ ಅರಸಾಪುರ ಗ್ರಾ.ಪಂ.ವ್ಯಾಪ್ತಿಯ ಕಾಶಪುರಗೇಟ್ ಬಳಿ ದಿ ಪ್ರೋಜೆಕ್ಟ್ ವಿಷನ್ ಸಂಸ್ಥೆ ವತಿಯಿಂದ ಕಣ್ಣು ತಪಾಸಣಾ ಶಿಬಿರ ಉದ್ಘಾಟಿಸಿ ಹಾಗೂ ನೂತನ ಹೈಟೆಕ್‍ ಕಣ್ಣು ಆಸ್ಪತ್ರೆಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು .ಪ್ರತಿಯೊಬ್ಬರೂ ಕಣ್ಣಿನ ಬಗ್ಗೆ ವಿಶೇಷ ಕಾಳಜಿ ಹಾಗೂ ಮುಂಜಾಗ್ರೆತ ವಹಿಸವುದು ಅಗತ್ಯ, ಮನುಷ್ಯನಿಗೆ ಅತಿ ಮುಖ್ಯ ಅಂಗವಾದ ಕಣ್ಣಿನ ರಕ್ಷಣೆಗೆ ಪ್ರತಿಯೋಬ್ಬರೂ ಹೆಚ್ಚಿನ ಆದ್ಯತೆ ನೀಡಬೇಕು.

      ಪ್ರಂಪಂಚದಲ್ಲಿ ಸುಮಾರು 4.5 ಕೋಟಿ ಮಂದಿ ಹಾಗೂ ಭಾರತ ದೇಶದಲ್ಲಿ 1.5 ಕೋಟಿ ಮಂದಿ ಕಣ್ಣಿಲ್ಲದೆ ಕಷ್ಟದ ಜೀವನ ನಡೆಸುತ್ತಿದ್ದು ಅವರ ಜೀವನ ಬದಲಾಯಿಸುವ ಜವಾಬ್ದಾರಿ ಇದ್ದು,ಮನುಷ್ಯ ಮೃತಪಟ್ಟ ನಂತರ ಮಣ್ಣಲ್ಲಿ ಮಣ್ಣಾಗುವ ಕಣ್ಣುಗಳನ್ನು ಧಾನ ಮಾಡಿದರೆ ಮತ್ತೋಬ್ಬರ ವ್ಯಕ್ತಿಯ ಜೀವನ ಬೆಳಕಾಗುತ್ತದೆ ಎಂದರು.

      ರಾಜ್ಯದ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಒಂದು ಉಚಿತ ಕಣ್ಣು ಆಸ್ಪತ್ರೆ ನಿರ್ಮಾಣ ಮಾಡಲಾಗುತ್ತಿದೆ ಇದರೊಂದಿಗೆ ಜನತೆಯ ಆರೋಗ್ಯ ಕಾಪಾಡುವ ದೃಷ್ಠಿಯಿಂದ ಸರಕಾರ ಗ್ರಾಮ ಪಂಚಾಯಿತಿ ಕೇಂದ್ರಗಳಲ್ಲಿ ಸಮುದಾಯ ಆರೋಗ್ಯ ಕೇಂದ್ರಗಳನ್ನು ಹಾಗೂ ಹೋಬಳಿ ಕೇಂದ್ರಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸ್ಥಾಪಿಸಿ ಆರೋಗ್ಯ ಸೇವೆ ನೀಡುತ್ತಿದೆ, ಅತ್ಯಂತ ಹಿಂದುಳಿದ ಕ್ಷೇತ್ರವಾದ ಕೊರಟಗೆರೆ ನನ್ನ ಕ್ಷೇತ್ರದಲ್ಲಿ ಪ್ರೋಜೆಕ್ಟ್ ವಿಷನ್‍ ಸಂಸ್ಥೆಯ ಫಾದರ್‍ಜಾರ್ಜ್ ಹೈಟೆಕ್‍ ಕಣ್ಣಿನ ಆಸ್ಪತ್ರೆ ಪ್ರಾರಂಭಿಸಿ ಉಚಿತ ಚಿಕತ್ಸೆ ನೀಡಲು ಮುಂದಾಗಿರುವದಕ್ಕೆ ಕೃತಜ್ಞತೆ ಸಲ್ಲಿಸಿದ ಅವರು ಸದರಿ ಆಸ್ಪತ್ರೆಯ ಪ್ರಾರಂಭಕ್ಕೆ ನನ್ನ ಸಂಪೂರ್ಣ ಸಹಕಾರ ನೀಡುವುದಾರಿ ತಿಳಿಸಿದರು.

      ಫಾಧರ್ ಜಾರ್ಜ್ ಮಾತನಾಡಿ ಸಮಾಜ ಸೇವಾ ಮನೋಭಾ ಉಳ್ಳ ದಾನಿಗಳ ಸಹಕಾರ ದಿಂದ ಪ್ರೋಜೆಕ್ಟ್ ವಿಷನ್ ಸಂಸ್ಥೆಯ ಮೂಲಕ ಕೊರಟಗೆರೆ ತಾಲೂಕಿನಲ್ಲಿ ಉಚಿತ ಕಣ್ಣಿ ಆಸ್ಪತ್ರೆ ಪ್ರಾರಂಭಿಸಿ ತುಮಕೂರು ಜಿಲ್ಲೆ ಸೇರಿದಂತೆ ಚಿಕ್ಕಬಳ್ಳಾಪುರ, ಕೋಲಾರ ಹಾಗೂ ಆಂದ್ರ ಪ್ರದೇಶದ ಅನಂತಪುರಜಿಲ್ಲೆಯ ಜನತೆಗೂ ಇಲ್ಲೆ ಚಿಕಿತ್ಸೆ ನೀಡುವ ಗುರಿಯಾಗಿದೆ ಎಂದು ಹೇಳಿದರು.

     ನೂತನ ಆಸ್ಪತ್ರೆ ಕಟ್ಟಡ ನಿರ್ಮಾಣವಾಗಿ ಕಾರ್ಯ ಪ್ರಾರಂಭಿಸುವವರೆಗೂ ಪ್ರಸ್ತುತ ಇಲ್ಲಿ ಕಣ್ಣಿನ ತಪಾಸಣಾ ಶಿಬಿರವನ್ನು ಏರ್ಪಡಿಸಿ ಫಲಾನುಭವಿಗಳನ್ನು ಗುರುತಿಸಿ ಬೆಂಗಳೂರು ಆಸ್ಪತ್ರೆಗೆ ಕಳುಹಿಸಿ ಉಚಿತವಾಗಿ ಸೂಕ್ತ ಚಿಕಿತ್ಸೆ ಹಾಗೂ ಅಗತ್ಯ ಬಿದ್ದರೆ ಶಸ್ತ್ರಚಿಕಿತ್ಸೆಯನ್ನು ನೀಡಲಾಗುವುದು ಎಂದ ಅವರು ಈ ಗಾಗಲೆ ಈ ಸಂಸ್ಥೆ ವತಿಯಿಂದ ಬೆಂಗಳೂರು ಸೇರಿದಂತೆ ಇನ್ನಿತರ ಕಡೆಗಳಲ್ಲಿ ಕಣ್ಣು ಮತ್ತು ಹೆಚ್‍ಐವಿ ಆಸ್ಪತ್ರೆಗಳನ್ನು ನಡೆಸಲಾಗುವುದು ಎಂದು ತಿಳಿಸಿದ ಅವರು ಸಾರ್ವಜನಿಕರು ಇದರ ಸದುಪಯೋಗ ಪಡೆಯುವಂತೆ ತಿಳಿಸಿದರು.

    ಈ ಸಂದರ್ಬಧಲ್ಲಿ ಜಿಲ್ಲಾದಿಕಾರಿ ರಾಕೇಶ್‍ ಕುಮಾರ್, ಪೊಲೀಸ್ ವರಿಷ್ಠಾಧಿಕಾರಿ ವಂಶೀಕೃಷ್ಣ, ಜಿ.ಪಂ.ಸಹಾಯಕ ಕಾರ್ಯದರ್ಶಿ ಪ್ರೇಮ್‍ಕುಮಾರ್, ಡಾ.ನಿವೇದಿತಾ, ಪಾತೀಮಾ ಅನೀಶಾ, ಗ್ರಾ.ಪಂ.ಅಧ್ಯಕ್ಷ ಹನುಮಕ್ಕ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap