ಎಲ್ಲೆಂದರಲ್ಲಿ ಪ್ರತ್ಯಕ್ಷ್ಯವಾಗುತ್ತಿರುವ ಕಸದ ರಾಶಿ..!!!

ಚಿಕ್ಕನಾಯಕನಹಳ್ಳಿ

   ಪಟ್ಟಣದಲ್ಲಿ ಜಾತ್ರೆ ಮುಗಿದು ಮೂರು ದಿನ ಕಳೆದರೂ ಬೀದಿಗಳಲ್ಲಿನ ಕಸದ ವೀಲೆವಾರಿ ಮಾತ್ರ ಸಮರ್ಪಕವಾಗಿ ಆಗಿಲ್ಲ, ಎಲ್ಲೆಂದರಲ್ಲಿ ಕಸದ ರಾಶಿ ತುಂಬಿ ತುಳುಕುತ್ತಿದೆ, ಕಸದ ರಾಶಿ ತೆರವುಗೊಳಿಸದೇ ಇರುವುದರಿಂದ ಕಸ ತಿಪ್ಪೆಗುಂಡಿಯಂತಾಗಿ ದುರ್ನಾತ ಬೀರುತ್ತಿದೆ. ಅನೈರ್ಮಲ್ಯ ತಾಣಗಳು ಹೆಚ್ಚಾಗುತ್ತಿವೆ ಆದರೂ ಪುರಸಭೆ ಈ ಬಗ್ಗೆ ಗಮನ ಹರಿಸಿಲ್ಲ ಎಂದು ಸಾರ್ವಜನಿಕರು ದೂರುತ್ತಿದ್ದಾರೆ.

     ಹಳೆಯೂರು ಆಂಜನೇಯಸ್ವಾಮಿ ಜಾತ್ರಾ ಮಹೋತ್ಸವದ ಹಿಂದಿನ ದಿನ ಪಟ್ಟಣದಲ್ಲಿನ ಪ್ರಮುಖ ಬೀದಿಗಳ ಕಸದ ರಾಶಿಯನ್ನು ಪುರಸಭೆವತಿಯಿಂದ ಹೊತ್ತೊಯ್ಯಲಾಗಿತ್ತು, ಅಂದಿನಿಂದ ಇಂದಿನವರೆಗೆ ಅಂದರೆ ನಾಲ್ಕೈದು ದಿನಗಳಾದರೂ ಕಸದ ರಾಶಿಯನ್ನು ಎತ್ತೊಯ್ದಿರುವುದಿಲ್ಲ ಎಂದು ನಾಗರೀಕರು ಆರೋಪಿಸುತ್ತಿದ್ದಾರೆ.

     ಜಾತ್ರೆಯ ಸಮಯದಲ್ಲೂ ಪಟ್ಟಣದ ಎಲ್ಲಾ ಬೀದಿಗಳ ಕಸದರಾಶಿಯನ್ನು ಸ್ವಚ್ಚ ಮಾಡಿರಲಿಲ್ಲ, ನಾಮಕವಸ್ತೆ ಎನ್ನುವಂತೆ ಕಸದ ರಾಶಿಗಳನ್ನು ತೆಗೆದಿದ್ದು ಉಳಿದಂತೆ ಅಲ್ಲೇ ಬಿಟ್ಟಿದ್ದರು ಎಂದು ಹನ್ನೇರಡನೇ ವಾರ್ಡನ ಜನರು ದೂರಿದ್ದಾರೆ. ಕಸದ ರಾಶಿ ಸ್ವಚ್ಛಗೊಳಿಸದೇ ಇರುವುದರಿಂದ ಗಾಳಿಗೆ ರಸ್ತೆಯಲೆಲ್ಲಾ ಚೆಲ್ಲಾಡುತ್ತಿದೆ ಹಾಗೂ ಮನೆಯೊಳಗೆ ಬರುತ್ತಿದೆ ಎನ್ನುತ್ತಿದ್ದಾರೆ. ದೂರದೂರುಗಳಿಂದ ಜಾತ್ರೆಗೆ ಬಂದಂತಹ ಜನ ಕಸದ ರಾಶಿಯನ್ನು ನೋಡಿ ಪುರಸಭೆ ಬಗ್ಗೆ ಅಪಹಾಸ್ಯ ಮಾಡಿ ಹೋಗಿದ್ದಾರೆ. ಕಸವನ್ನು ತೆರವುಗೊಳಿಸಿ ಪಟ್ಟಣವನ್ನು ಸ್ವಚ್ಛ, ಸುಂದರವಾಗಿ ಮಾಡುವಂತೆ ನಾಗರೀಕರು ಒತ್ತಾಯಿಸಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link