ತುಮಕೂರು:
ಮತದಾನದ ಮೂಲಕ ಬೇರೆಯವರುಸಹ ಮತಚಲಾಯಿಸುವಂತೆ ಪ್ರೇರೇಪಿಸಬೇಕು.ಮತದಾನ ನಮ್ಮಿಂದ ಪ್ರಜಾಪ್ರಜಾಪ್ರಭುತ್ವ ಹೆಮ್ಮೆಯಿಂದಎಂದು ವಿಶ್ವವಿದ್ಯಾನಿಲಯ ಕಲಾ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಕೆ.ರಾಮಚಂದ್ರಪ್ಪ ಹೇಳಿದರು.
ತುಮಕೂರು ವಿಶ್ವವಿದ್ಯಾನಿಲಯ ಕಲಾ ಕಾಲೇಜಿನರಾಜ್ಯಶಾಸ್ತ್ರ ವಿಭಾಗದಿಂದ ಆಯೋಜಿಸಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು ಪ್ರಸ್ತುತ ಸಂದರ್ಭದಲ್ಲಿ ಅಕ್ಷರಸ್ಥರಿಗಿಂತ ಅನಕ್ಷರಸ್ಥರು ಮತದಾನದಲ್ಲಿ ಹೆಚ್ಚು ಭಾಗವಹಿಸುತ್ತಾರೆ . ಹೀಗಾಗಿ ಯುವಜನರು ಮತದಾನದಲ್ಲಿ ಭಾಗವಹಿಸುವುದು ಮುಖ್ಯ . ಈ ಮೂಲಕ ವಿದ್ಯಾರ್ಥಿಗಳೆಲ್ಲರೂ ಚುನಾವಣಾ ಪಟ್ಟಿಗೆ ನೊಂದಾಯಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ.ಗುಂಡೇಗೌಡಅವರು ಮಾತನಾಡಿ 1950ರ ಜನವರಿ 25 ರಂದು ಭಾರತದ ಚುನಾವಣಾ ಆಯೋಗ ಸ್ಥಾಪನೆಯಾಗಿದ್ದು , 2011 ರಿಂದ ಪ್ರತಿ ವರ್ಷ ಈ ತಿಂಗಳ 25 ರಂದುರಾಷ್ಟ್ರೀಯ ಮತದಾರರ ದಿನವನ್ನಾಗಿಆಚರಿಸಲಾಗುತ್ತಿದೆಎಂದು ಹೇಳಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಎಂಬುದು ಪ್ರಜೆಗಳ ಸಾಂವಿಧಾನಿಕ ಹಕ್ಕು.ಹಾಗಾಗಿ ಮತದಾರರು ಎಲ್ಲಿಯವರೆಗೂ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸುವುದಿಲ್ಲವೋ ಅಲ್ಲಿಯವರೆಗೆ ಪ್ರಜಾಪ್ರಭುತ್ವ ಸದೃಢವಾಗುವುದಿಲ್ಲ. ಯಾವ ಮತದಾರನು ಕೂಡ ಮತದಾನದಿಂದ ದೂರ ಉಳಿಯಬಾರದು ಎಂದು ಅವರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದರು.
ಹಿಂದೆ ಚುನಾವಣೆಯಲ್ಲಿ ಮತದಾನ ಮಾಡಲು 21 ವರ್ಷವ ಯಸ್ಸನ್ನು ನಿಗದಿ ಪಡಿಸಲಾಗಿತ್ತು .ಸಂವಿಧಾನದ 61ನೇ ತಿದ್ದುಪಡಿಯ ಮೂಲಕ 21 ವರ್ಷ ವಯಸ್ಸಿನಿಂದ 18ವರ್ಷಕ್ಕೆ ಇಳಿಸಲಾಗಿದೆ . ಮತದಾನ ಮಾಡುವುದರಿಂದ ವ್ಯಕ್ತಿಯ ಆತ್ಮಗೌರವ, ಸ್ಥಾನಮಾನ ಹಾಗೂ ಪ್ರಜಾಸತ್ತಾತ್ಮಕ ಮೌಲ್ಯಗಳು ಹೆಚ್ಚುತ್ತವೆ ಎಂದು ಗುಂಡೇಗೌಡ ಅವರು ಹೇಳಿದರು.ಸಹಾಯಕ ಪ್ರಾಧ್ಯಾಪಕರಾದ ಡಾ.ಮೌನೀಶ್ವರ ಶ್ರೀನಿವಾಸರಾವ್ ಮತದಾನದ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು . ಪ್ರಾಧ್ಯಾಪಕರಾದ ಡಾ.ಗಿರಿಜಾ ಕೆ.ಎಸ್,ಡಾ.ಜಾಯ್ ನರೇಲ್ಲಾಹಾಗೂ ಕಲಾ ಕಾಲೇಜಿನ ಎಲ್ಲಾ ವಿಭಾಗಗಳ ಬೋಧಕರು, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ