ಎಂ.ಎನ್.ಕೋಟೆ
ಮುಂಬರುವ ತುಮಕೂರು ಜಿಲ್ಲೆಯ ಲೋಕಸಭಾ ಚುನಾವಣೆ ದೃಷ್ಟಿಯಿಂದ ಗುಬ್ಬಿ ತಾಲ್ಲೂಕಿನ ಚುನಾವಣೆ ಸಂದರ್ಭದಲ್ಲಿ ಮತದಾರರಲ್ಲಿ ವಿಶ್ವಾಸ ವೃದ್ಧಿಗಾಗಿ ಹಾಗೂ ಭಾವಮುಕ್ತ, ನಿರ್ಭೀತ ಮತದಾನಕ್ಕಾಗಿ ಕೆ.ಎಸ್.ಆರ್. ಪಿ ತುಕಡಿ ಮತ್ತು ಸ್ಥಳೀಯ ಪೊಲೀಸರೊಂದಿಗೆ ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಮತಗಟ್ಟೆ ಪ್ರದೇಶಗಳಲ್ಲಿ “ಪಥಸಂಚಲನ” ನಡೆಸಲಾಯಿತು ಎಂದು ಚೇಳೂರು ಪಿಎಸ್‍ಐ ಪ್ರಕಾಶ್ ತಿಳಿಸಿದರು.
ಎಂ.ಎನ್.ಕೋಟೆಯಲ್ಲಿ ಮಾತನಾಡಿದ ಅವರು, ಪಂಥ ಸಂಚಲನದಲ್ಲಿ ಸುಮಾರು 80ಕ್ಕೂ ಹೆಚ್ಚು ಕೆ.ಎಸ್.ಆರ್. ಪಿ ಸಿಬ್ಬಂದಿಗಳು ಭಾಗಿಯಾಗಿ ಪಂಥ ಸಂಚಲನ ನಡೆಸಿದರು.ಗುಬ್ಬಿ ತಾಲ್ಲೂಕಿನ ನಿಟ್ಟೂರು, ಎಂ.ಎನ್.ಕೋಟೆ, ಚೇಳೂರು, ಸಂಕಾಪುರ ಭಾಗಗಳಲ್ಲಿ ಪಂಥ ಸಂಚಲನ ನಡೆಸಿದರು.
ಕಾರ್ಯಕ್ರಮದಲ್ಲಿ ಡಿಎಸ್‍ಪಿ ವೆಂಕಟಸ್ವಾಮಿ, ಗುಬ್ಬಿ ಸಿಪಿಐ ದೀಪಕ್, ಪಿಎಸ್‍ಐ ಗಳಾದ ಬಿ.ಕೆ.ಪ್ರಕಾಶ್, ಹರೀಶ್, ಹನುಮಂತರಾಯಪ್ಪ ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
