ಅಸಮಾನತೆ ತೊಲಗಿ ಎಲ್ಲರೂ ಸಮಾನ ನೆಲೆಯಲ್ಲಿ ಬದುಕು ರೂಪಿಸಿಕೊಳ್ಳುವಂತಾಗಬೇಕು..!

ಹಾವೇರಿ:

       ಅಂತರಂಗ ಹಾಗೂ ಬಹಿರಂಗ ಶುದ್ದಿ ಎಂದರೆ ನಡೆ-ನುಡಿಗಳು ಒಂದಾಗಿರಲಿ ಎಂದರ್ಥ. ನಾವು ರೂಪಿಸಿಕೊಂಡಿರುವ ತಾರತಮ್ಯ ನೆಲೆಯ ಸಂಕೀರ್ಣ ಸಮಾಜದಲ್ಲಿ ಮೇಲು ಕೀಳುಗಳಿಂದ ಸಮುದಾಯಗಳು ನರಳುವ ಪರಿಸ್ಥಿತಿ ಇದೆ, ಅಸಮಾನತೆ ತೊಲಗಿ ಎಲ್ಲರೂ ಸಮಾನ ನೆಲೆಯಲ್ಲಿ ಬದುಕು ರೂಪಿಸಿಕೊಳ್ಳುವಂತಾಗಬೇಕು ಎಂಬುದು ವಿಶ್ವಗುರು ಬಸವಣ್ಣನವರ ಆಶಯವಾಗಿತ್ತು ಎಂದು ಡಿಎಸ್‌ಎಸ್ ರಾಜ್ಯ ಸಮಿತಿ ಸಂಚಾಲಕ ಉಡಚಪ್ಪ ಮಾಳಗಿ ಹೇಳಿದರು.

      ನಗರದ ಅಂಬೇಡ್ಕರ ಸಮುದಾಯಭವನದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಹಾಗೂ ಡಾ.ಬಿ.ಆರ್.ಅಂಬೇಡ್ಕರ ತರುಣ ಸಂಘದ ವತಿಯಿಂದ ಆಯೋಜಿಸಲಾಗಿದ್ದ ವಿಶ್ವಗುರು ಬಸವಣ್ಣವರ ಜಯಂತಿ ಕಾರ್ಯಕ್ರಮದಲ್ಲಿ ಬಸವಣ್ಣವರ ಭಾವಚಿತ್ರಕ್ಕೆ ಪುಷ್ಟ ಅರ್ಪಿಸಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

       ಲೋಕದ ಡೊಂಕ ನೀವೇಕೆ ತಿದ್ದುವಿರಿ. ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ ಎಂದ ಬಸವಣ್ಣನವರು ತಮ್ಮ ವಚನಗಳ ಮೂಲಕ ಸಮಾಜದ ಓರೆಕೋರೆಗಳ ಮೇಲೆ ಬೆಳಕು ಚೆಲ್ಲಿದ್ದಾರೆ. ಸಾಮಾಜಿಕ ಬದಲಾವಣೆಯ ಹಾದಿಯಲ್ಲಿ ಬಸವಣ್ಣನಿಗೆ ಎಂದೂ ಜಾತಿ, ಸ್ಥಾನಮಾನ ಮುಖ್ಯವಾಗಲಿಲ್ಲ. ಇಲ್ಲಿ ಸಲ್ಲುವುದನ್ನು ಕಲಿಯಬೇಕು ಎನ್ನುವ ಜೀವನ ಸಂದೇಶ ನೀಡಿದರು ಎಂದರು.

      ನಿವೃತ್ತ ಶಿಕ್ಷಕ ಮಾಲತೇಶ ಕರ್ಜಗಿ ಮಾತನಾಡಿ, ಸರ್ವರಿಗೂ ಸಮಪಾಲು-ಸಮಬಾಳು ಎಂಬ ಆಶಯದಲ್ಲಿ ಮುನ್ನಡೆದಿದ್ದ ಕಾಯಕ ಚಳುವಳಿಯ ಉದ್ದೇಶ ಇನ್ನೂ ಈಡೇರಿಲ್ಲ. ನಾವು ಜಾತಿಯನ್ನು ಮತ್ತಷ್ಟು ವ್ಯವಸ್ಥಿತಗೊಳಿಸಿ ಆಚರಣೆಗೆ ತರುತ್ತಿದ್ದೇವೆ. ಈ ಮನೋಭಾವ ಬದಲಾಗಬೇಕೆಂದರು.

      ಕೊರೊನಾ ಲಾಕ್‌ಡೌನ್ ಹಿನ್ನಲೆಯಲ್ಲಿ ಸಂಕಷ್ಟದಲ್ಲಿರುವ ಗುಡುಸಲಗೇರಿಯ ಬಡ ಕುಂಟುಂಬಗಳಿಗೆ ಬಸವ ಜಯಂತಿಯ ಅಂಗವಾಗಿ ೨ ಕ್ವಿಂಟಲ್ ಅಕ್ಕಿಯನ್ನು ಡಿಎಸ್‌ಎಸ್, ಡಾ.ಬಿ.ಆರ್.ಅಂಬೇಡ್ಕರ ತರುಣ ಸಂಘದಿಂದ ವಿತರಿಸಲಾಯಿತು. ಈ ಸಂದರ್ಭದಲ್ಲಿ ಡಿಎಸ್‌ಎಸ್ ರಾಜ್ಯ ಸಮಿತಿ ಸದಸ್ಯರಾದ ಉಡಚಪ್ಪ ಮಾಳಗಿ, ನಿವೃತ್ತ ಮುಖ್ಯೋಪಾಧ್ಯಾಯ ಮಾಲತೇಶ ಕರ್ಜಗಿ,ನಗರಸಭಾ ಸದಸ್ಯ ಪೀರಸಾಬ ಚಫಪದಾರ, ನಾಗೇಶ ಯಲ್ಲಪ್ಪ ಮಾಳಗಿ, ಲಿಂಗರಾಜ ದಂಡೆಮ್ಮನವರ, ಪ್ರಕಾಶ ಮಾಳಗಿ ವಕೀಲರು, ಮಾಹಾಂತೇಶ ದೇವಿಹೊಸೂರ, ಮಲ್ಲಪ್ಪ ಕಡಕೋಳ, ನೀಲೇಶ ದೇವಸೂರು, ಚಂದ್ರು ಬಿದರಿ, ಹೊನ್ನಪ್ಪ ಮಾಳಗಿ, ರಂಗಪ್ಪ ಹೆರಕಲ್ಲ, ರಘು ಮಾಳಗಿ, ಬೆನ್ನಪ್ಪ ತಿಮ್ಮಾಪುರ, ರಂಗಪ್ಪ ಗುಡಿಸಲುಗೇರಿ, ಶ್ರೀನಿವಾಸ ಕಂದಾರಿ, ಗಂಗಾಧರ ಹರಿಜನ, ಯಲ್ಲಪ್ಪ ಹರಿಜನ ಮತ್ತಿತರರು ಅಕ್ಕಿ ವಿತರಿಸಿ ಮಾನವೀಯತೆ ಮೆರೆದರು

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link