ಹರಪನಹಳ್ಳಿ
ಪಟ್ಟಣದ ಬಾಣಗೇರಿಯಲ್ಲಿ ಕಾಣಿಸಿಕೊಂಡಿರುವ ಕೊರೋನಾ ವೈರಸ್ ಹರಡುವುದನ್ನು ತಡೆಗಟ್ಟಲು ಸೀಲ್‍ಡೌನ್ ವ್ಯಾಪ್ತಿ ಹಾಗೂ ಪಟ್ಟಣದಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಉಪವಿಭಾಗಾಧಿಕಾರಿ ಪ್ರಸನ್ನಕುಮಾರ ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿದರು.
ಸೀಲ್‍ಡೌನ್ ವ್ಯಾಪ್ತಿಯಲ್ಲಿ ಸಾರ್ವಜನಿಕರ ಅಗತ್ಯ ವಸ್ತಗಳನ್ನು ಪೂರೈಕೆ, ಆರೋಗ್ಯ ತಪಾಸಣೆ, ಮನೆ ಮನೆಗೆ ತೆರಳಿ ಮಾಹಿತಿ ಸಂಗ್ರಹಿಸುವ ಕುರಿತು ಅಧಿಕಾರಿಗಳಿಗೆ ಮಾರ್ಗದಶನ ನೀಡಿದರು.
ಸೀಲ್‍ಡೌನ್ ಪ್ರದೇಶ ವಾರ್ಡ್6ರಲ್ಲಿ ಬೆಳಿಗ್ಗೆ 7 ರಿಂದ 9 ರವರೆಗೆ ಅಗತ್ಯ ವಸ್ತುಗಳ ಸೇವೆ. ಸೀಲ್‍ಡೌನ್ ಪ್ರದೇಶದಿಂದ ಹೊರ ಹೋಗಲು ಅಥವಾ ಒಳ ಬರಲು ಪೊಲೀಸ್ ಪರವೀಕ್ಷಣೆಯಲ್ಲಿರುತ್ತದೆ. ಆರೋಗ್ಯ ಇಲಾಖೆ ಸಿಬ್ಬಂದಿ ಕಡ್ಡಾಯವಾಗಿ ಥರ್ಮಲ್ ಸ್ಕ್ರೀನಿಂಗ್ ಮಾಡತಕ್ಕದ್ದು. ಜನರ ಓಡಾಟವನ್ನು ತುರ್ತು ಪರಿಸ್ಥಿತಿ ಹಾಗೂ ಅಗತ್ಯ ಸೇವೆಗಳನ್ನು ಹೊರತಾಗಿ ಬೇರೆ ಯಾವಕಾರಣಕ್ಕೂ ಅವಕಾಶವಿಲ್ಲ. ಅನುಮತಿ ಇಲ್ಲದೇ ವಾಹನಸಂಚಾರ ಸಂಪೂರ್ಣ ನಿಷೇಧ.
ಸೋಂಕಿತ ವ್ಯಕ್ತಿಯ ಪ್ರಥಮ ಸಂಪರ್ಕದವರಿಗೆ ಗಂಟಲು ದ್ರವ ಪರೀಕ್ಷೆ, ದ್ವಿತೀಯ ಸಂಪರ್ಕದವರ ಬಗ್ಗೆ ಮಾಹಿತಿ ಸಂಗ್ರಹ, ಆಶಾ, ಅಂಗನವಾಡಿ ಕಾರ್ಯಕರ್ತರು ಹಾಗೂ ಕಿರಿಯ ಆರೋಗ್ಯ ಸಹಾಯಕರು ಸಕ್ರಿಯವಾಗಿ ಕಣ್ಗಾವಲನಿಟ್ಟು ಮಾಹಿತಿಯನ್ನು ಪ್ರತಿದಿನ ವರದಿ ನೀಡಬೇಕು. ಸರ್ಕಾರಿ ಅಧಿಕಾರಿ ಅಥವಾ ಸಿಬ್ಬಂದಿಗಳಿಗೆ ಅಡಚಣೆ ಉಂಟುಮಾಡಿದಂತಹ ಪಕ್ಷದಲ್ಲಿ ಭಾರತೀಯ ದಂಡ ಪ್ರಕ್ರಿಯಾ ಸಂಹಿತೆ ಸೆಕ್ಸನ್ 188 ರನ್ವಯ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದ್ದಾರೆ.ತಹಶೀಲ್ದಾರ ಡಾ.ನಾಗವೇಣಿ, ಸಿಪಿಐ ಕುಮಾರ, ಪುರಸಭೆ ಮುಖ್ಯಾಧಿಕಾರಿ ನಾಗರಾಜನಾಯ್ಕ್, ಟಿಹೆಚ್‍ಓ ಡಾ.ಶಿವಶಂಕರ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ