ಮಧ್ಯಂತರ ಚುನಾವಣೆ ಅಂದ್ರೆ, ಎಲ್ರಿಗೂ ಜ್ವರ

ದಾವಣಗೆರೆ:

     ಈಗಾಗಲೇ ವಿಧಾನಸಭಾ ಚುನಾವಣೆ ಎದುರಿಸಿ, ಒಂದು ವರ್ಷ ಆಗಿದೆ. ಹೀಗಾಗಿ ಮಧ್ಯಂತರ ಚುನಾವಣೆ ಅಂದ್ರೆ, ಎಲ್ಲ ಶಾಸಕರಿಗೂ ಜ್ವರ ಬರುತ್ತೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಹಾಗೂ ಉಸ್ತುವಾರಿ ಸಚಿವ ಎಸ್.ಆರ್.ಶ್ರೀನಿವಾಸ ತಿಳಿಸಿದ್ದಾರೆ.

     ಜಿಲ್ಲೆಯ ಜಗಳೂರು ತಾಲೂಕಿನ ಕೊಣಚಕಲ್ ಗ್ರಾಮದಲ್ಲಿ ಬರಗಾಲದ ಹಿನ್ನೆಲೆಯಲ್ಲಿ ತೆರೆದಿರುವ ಗೋಶಾಲೆಗೆ ಭೇಟಿ ನೀಡಿ ಪರಿಶೀಲಿಸಿ, ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಮಧ್ಯಂತರ ಚುನಾವಣೆ ಕುರಿತ ಪ್ರಶ್ನೆಗೆ ಈ ಮೇಲಿನಂತೆ ಪ್ರತಿಕ್ರಿಯಿಸಿದರು.

     ಮಧ್ಯಂತರ ಚುನಾವಣೆಗೆ ಹೋಗುತ್ತೇವೆ ಎಂಬುದಾಗಿ ಹೇಳುವುದೇನೋ ಸುಲಭ. ಆದರೆ, ಚುನಾವಣೆಗೆ ಹೋಗೋದಕಂತೂ ಯಾವ ಶಾಸಕರು ಸಿದ್ಧರಿಲ್ಲ. ಆ ಪಕ್ಷ, ಈ ಪಕ್ಷ ಅಂತಲ್ಲ. ಎಲ್ಲಾ ಪಕ್ಷದ ಶಾಸಕರೂ ಇದೇ ಸರಕಾರ 4 ವರ್ಷ ಇರಲಿ ಎನ್ನುತ್ತಿದ್ದಾರೆ. ಚುನಾವಣೆ ಎಂದರೆ ಎಲ್ಲರೂ ಓಡಿ ಹೋಗುತ್ತಾರೆ ಎಂದು ಹೇಳಿದರು.

    ಕಾಂಗ್ರೆಸ್, ಜೆಡಿಎಸ್ ಸೇರಿದಂತೆ ಯಾವ ಪಕ್ಷದ ಶಾಸಕರಿಗೂ ಮಧ್ಯಂತರ ಚುನಾವಣೆಗೆ ಹೋಗುವುದು ಇಷ್ಟವಿಲ್ಲ. ಕೆಲವರು ಈ ಕುರಿತು ಹೇಳಿಕೆ ಕೊಡುತ್ತಾರೆ. ಈ ಎಲ್ಲ ಮಾತುಗಳನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿಲ್ಲ. ಆದರೆ, ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವೇ ಇನ್ನೂ ನಾಲ್ಕು ವರ್ಷ ಪೂರೈಸಬೇಕೆಂಬುದು ಎಲ್ಲರ ಅಪೇಕ್ಷೆಯಾಗಿದೆ ಎಂದರು.ನೀವು ಯಾವ ಶಾಸಕರನ್ನಾದರೂ ಮಧ್ಯಂತರ ಚುನಾವಣೆ ಸಂಬಂಧಿಸಿದಂತೆ ವೈಯಕ್ತಿಕವಾಗಿ ಸಂಪರ್ಕಿಸಿ ಕೇಳಿದರೆ, ಅವರ ಉತ್ತರ ಒಂದೇ ಅಗಿರುತ್ತದೆ ಅದು ಈ ಸರಕಾರ ಐದು ಪೂರೈಸಬೇಕೆನ್ನುವುದು ಎಂದು ನುಡಿದರು.

ಜಾತಿ ಸಂಘರ್ಷ ಬೇಡ:

    ಪರಿಶಿಷ್ಟ ಪಂಗಡಕ್ಕೆ ಶೇ.7.5 ರಷ್ಟು ನೀಡಬೇಕೆಂದು ಒತ್ತಾಯಿಸಿ, ಬೆಂಗಳೂರಿನ ಸ್ವತಂತ್ರ ಉದ್ಯಾನವನದಲ್ಲಿ ನಡೆದ ಪ್ರತಿಭಟನೆಯಲ್ಲಿ ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಶ್ರೀಪ್ರಸನ್ನಾನಂದಪುರಿ ಸ್ವಾಮೀಜಿಯವರು, ನಾಯಕ ಸಮಾಜದ ಶಾಸಕರು ರಾಜೀನಾಮೆ ಕೊಟ್ಟರೆ, ಕುಮಾರಸ್ವಾಮಿ ಗೊಟಕ್ ಅಂತಾರೆ ಎಂಬುದಾಗಿ ನೀಡಿರುವ ಹೇಳಿಕೆಯ ಹಿನ್ನೆಲೆಯಲ್ಲಿ ಒಕ್ಕಲಿಗ ಸಮುದಾಯ ಹೋರಾಟಕ್ಕೆ ಇಳಿದಿದ್ದಾರೆಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಜಾತಿ ಜಾತಿ ನಡುವೆ ಯಾವುದೇ ಸಂಘರ್ಷ ಬಿತ್ತುವ ಹುನ್ನಾರ ನಡೆದಿಲ್ಲ.

   ಸ್ವಾಮೀಜಿಯವರು ಉದ್ವೇಗಕ್ಕೆ ಒಳಗಾಗಿ ಭಾವಾವೇಶದಿಂದ ಮಾತನಾಡಿದ್ದಾರಷ್ಟೇ ಯಾರೂ ಸಹ ಇದನ್ನು ಜಾತಿ ಸಂಘರ್ಷಕ್ಕೆ ಬಳಸಿಕೊಳ್ಳಬಾರದು ಎಂದರು.

ಇನ್ನಷ್ಟು ಶಾಲೆಗಳಲ್ಲಿ ಆಂಗ್ಲ ಮಾಧ್ಯಮ:

     ಸರ್ಕಾರಿ ಶಾಲೆಗಳಲ್ಲಿ ಇಂಗ್ಲೀಷ್ ಮಾಧ್ಯಮ ತೆರೆಯಲು ಸಾಕಷ್ಟು ಬೇಡಿಕೆ ಇದೆ. ಕನ್ನಡ ಮಾಧ್ಯಮಕ್ಕೆ ಯಾವುದೇ ತೊಂದರೆಯಾಗದಂತೆ, ಇನ್ನಷ್ಟು ಸರಕಾರಿ ಶಾಲೆಗಳಲ್ಲಿ ಬರುವ ಶೈಕ್ಷಣಿಕ ವರ್ಷದಿಂದ ಇಂಗ್ಲೀಷ್ ಮಾಧ್ಯಮ ಆರಂಭಿಸಲಾಗುವುದು. ರಾಜ್ಯದಲ್ಲಿ ಈಗಾಗಲೇ 6 ಸಾವಿರ ಸರಕಾರಿ ಶಾಲೆಗಳನ್ನು ಮುಚ್ಚಲಾಗಿದೆ. ಇಂಗ್ಲೀಷ್ ಮೇಲೆ ಪೋಷಕರಿಗೆ ಹೆಚ್ಚಿನ ವ್ಯಾಮೋಹ ಇದ್ದು, ಪ್ರತಿಯೊಬ್ಬರು ಅವರ ಮಕ್ಕಳನ್ನು ಇಂಗ್ಲಿಷ್ ಶಾಲೆಗೆ ಸೇರಿಸಬೇಕೆಂದು ಅಪೇಕ್ಷೆ ಪಡುತ್ತಿದ್ದಾರೆ.

    ಇದನ್ನೇ ಖಾಸಗಿ ಶಾಲೆಗಳು ಬಂಡವಾಳವನ್ನಾಗಿಸಿಕೊಂಡು ಹೆಚ್ಚು ಡೊನೇಷನ್ ಪಡೆಯುತ್ತಿವೆ. ಈ ಸಂಬಂಧ ಕಾನೂನು ರೂಪಿಸುವ ಅವಶ್ಯಕತೆ ಇದೆ ಎಂದು ಹೇಳಿದರು.

    ಶಿಕ್ಷಣ ವ್ಯಾಪಾರಿಕರಣವಾಗಿರುವುದರಿಂದ ಖಾಸಗಿ ಶಾಲೆಗಳು, ಡೋನೇಷನ್ ರೂಪದಲ್ಲಿ ವಿದ್ಯಾರ್ಥಿ ಪೋಷಕರ ಬಳಿ ಸಾಕಷ್ಟು ಹಣ ವಸೂಲಿ ಮಾಡುತ್ತಿವೆ. ಕನ್ನಡ ಮಾಧ್ಯಮದಲ್ಲಿ ಓದಿ ಸಾಧನೆ ಮಾಡಿದ ಬಹಳಷ್ಟು ಮಂದಿ ಇದ್ದರೂ, ಇಂಗ್ಲೀಷ್‍ನಲ್ಲಿ ಓದಿದರಷ್ಟೇ ಏನಾದರೂ ಮಾಡಬಹುದು ಎಂಬ ಮನಸ್ಥಿತಿಗೆ ಪೋಷಕರು ಬಂದಿರುವುದೇ ಶಿಕ್ಷಣದ ವ್ಯಾಪಾರಿಕರಣಕ್ಕೆ ಕಾರಣವಾಗಿದೆ ಎಂದರು.ಸರಕಾರಿ ಶಾಲೆಗಳಲ್ಲಿ ಇಂಗ್ಲೀಷ್ ಮಾಧ್ಯಮ ತೆರೆದಾಗ ಪೋಷಕರು ತಮ್ಮ ಮಕ್ಕಳನ್ನು ಅಲ್ಲಿಗೆ ಸೇರಿಸುತ್ತಾರೆ ಜೊತೆಗೆ ಶಿಕ್ಷಣ ವ್ಯಾಪಾರಿಕರಣಕ್ಕೂ ಕಡಿವಾಣ ಬೀಳುತ್ತದೆ. ಬರುವ ವರ್ಷದಿಂದ ಇಂಗ್ಲೀಷ್ ಮಾಧ್ಯಮಕ್ಕೆ ಪ್ರವೇಶ ಸಂಖ್ಯೆ ಹೆಚ್ಚಿಸುವುದಿಲ್ಲ. ಆದರೆ ಇಂಗ್ಲೀಷ್ ಮಾಧ್ಯಮ ಶಾಲೆಗಳ ಸಂಖ್ಯೆಯನ್ನು ಹೆಚ್ಚಿಸಲಾಗುವುದು ಎಂದು ಹೇಳಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap